ಭಾರತದ ಮುಖ್ಯಮಂತ್ರಿಗಳ ಆಸ್ತಿ ಪಟ್ಟಿಯನ್ನು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಟಿಸಿದೆ. ಇದರಲ್ಲಿ ದೇಶದ ನಂಬರ್ ಒನ್ ಶ್ರೀಮಂತ ಮುಖ್ಯಮಂತ್ರಿ ಆಗಿ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಇದ್ರೆ, ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಆಗಿದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗಿದ್ದಾರೆ. ಚಂದ್ರಬಾಬು ನಾಯ್ಡು ಬಳಿ 931 ಕೋಟಿ ಇದ್ರೆ, ಮಮತಾ ಬ್ಯಾನರ್ಜಿ ಬಳಿ 15 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯಹ್ಯ 51 ಕೋಟಿ ಆಸ್ತಿ ಹೊಂದುವ ಮೂಲಕ ದೇಶದ ಮೂರನೇ ಶ್ರೀಮಂತ ಸಿಎಂ ಆಗಿದ್ದಾರೆ. ಅದರಲ್ಲಿ 23 ಕೋಟಿ ಸಾಲವನ್ನೂ ಹೊಂದಿದ್ದಾರೆ.
ಸಿದ್ದರಾಮಯ್ಯ ದೇಶದ ಮೂರನೇ ಶ್ರೀಮಂತ ಸಿಎಂ ಆಗಿದ್ದು, ಸಿದ್ದರಾಮಯ್ಯ ಆಸ್ತಿ ಮೌಲ್ಯ ಒಟ್ಟು 51ಕೋಟಿ ಮೌಲ್ಯ ಎನ್ನಲಾಗಿದೆ. 23 ಕೋಟಿ ಸಾಲ ಪಡೆದಿದ್ದಾರೆ ಅನ್ನೋದು ಕೂಡ ಬಹಿರಂಗ ಆಗಿದೆ. 931 ಕೋಟಿ ಆಸ್ತಿ ಮೂಲಕ ಮೊದಲನೇ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು 10 ಕೋಟಿ ಸಾಲ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶ ಸಿಎಂ ಪ್ರೇಮಾ ಖುಂಡು ಇದ್ದು, 332 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 180 ಕೋಟಿ ಸಾಲ ಹೊಂದಿದ್ದಾರೆ ಪ್ರೇಮಾ ಖಂಡು.
ದೇಶದ 13 ಜನ ಸಿಎಂಗಳು ತಮ್ಮ ಮೇಲೆ ಕ್ರಿಮಿನಲ್ ಕೇಸ್ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 10 ಮಂದಿ ಸಿಎಂಗಳ ವಿರುದ್ಧ ಕೊಲೆ, ಕಿಡ್ನಾಪ್, ಲಂಚ, ಬೆದರಿಕೆ ಕೇಸ್ ಕೂಡ ಇದೆ. ದೇಶದ 31 ಸಿಎಂಗಳ ಒಟ್ಟು ಆದಾಯ 1,630 ಕೋಟಿ ರೂಪಾಯಿ ಆಗಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಡಿಮೆ ಆಸ್ತಿ ಹೊಂದಿರುವ ಸಿಎಂ ಆಗಿದ್ದು, ಕೇವಲ 15 ಲಕ್ಷ ಆಸ್ತಿ ಹೊಂದಿದ್ದಾರೆ. ಭಾರತದ ನಿವ್ವಳ ತಲಾ ಆದಾಯ ಸರಾಸರಿ 1,85,854 ರೂಪಾಯಿ ಆಗಿದೆ. ಮುಖ್ಯಮಂತ್ರಿಗಳ ತಲಾದಾಯ ಸರಾಸರಿ 13,64,310 ರೂಪಾಯಿ ಆಗಿದೆ. ದೇಶದ ನಾಗರೀಕರ ತಲಾದಾಯಕ್ಕಿಂತ 7.3 ಪಟ್ಟು ಹೆಚ್ಚಾಗಿದೆ ಎಂದು Association for Democratic Reforms ತಿಳಿಸಿದೆ.