ಮೈಸೂರು : ಮಾ.21: ಕಾಂಗ್ರೆಸ್ ಪಕ್ಷವೂ ನಾಳೆ ಒಂದೇ ಹೆಸರಿರುವ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ಬಿಡುಗಡೆ ಮಾಡಲಿದ್ದು,
ಅದರಲ್ಲಿ ನನ್ನ ಹೆಸರು ಇರುತ್ತೋ ಇಲ್ಲವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯನಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವರುಣ ವಿಧಾನ ಕ್ಷೇತ್ರದಿಂದ ಯತೀಂದ್ರ ಹೆಸರು ಕ್ಲಿಯರ್ ಆಗಿದೆ. ಆದ್ರೆ ಹೈಕಮಾಂಡ್ ಏನು ಮಾಡುತ್ತೋ ಗೊತ್ತಿಲ್ಲ, ನಾನು ಎಲ್ಲಾ ಆಯ್ಕೆಯನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದರು.
ಈಗಾಗಲೇ ಮನೆಯವರ ಅಭಿಪ್ರಾಯವನ್ನೂ ಕೇಳುತ್ತಿದ್ದೇನೆ. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ ಎಂದ ಸಿದ್ದರಾಮಯ್ಯ, ನು ಎಲ್ಲೇ ಸ್ಪರ್ಧೆಸಿದರೂ ಗೆಲ್ಲುವ ವಿಶ್ವಾಸವಿದೆ.
ನಾನು ಚುನಾವಣೆಗೆ ಸ್ಫರ್ಧಿಸಲು ಕ್ಷೇತ್ರ ಹುಡುಕುತ್ತಿಲ್ಲ, ಬದಲಿಗೆ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಿದೆ. ನಾನು ಕ್ಷೇತ್ರ ಹುಡುಕುತ್ತಿದ್ದೇನೆ ಎಂಬುದೆಲ್ಲಾ ತಪ್ಪು ಗ್ರಹಿಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.ಈ ವಾರ ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ,
ಅಡುಗೆ ಮಾಡಿದ್ದು ನಾವು, ಅದನ್ನು ಬಡಿಸಲು ಪ್ರಧಾನಿ ಬರ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗೋದಿಲ್ಲ. ಪ್ರಧಾನಿ ಮೋದಿ ಹೇಳಿದ ಮಾತುಗಳೆನ್ನೆಲ್ಲ ಜನ ನಂಬುವುದಿಲ್ಲ. ದಶಪಥ ರಸ್ತೆ ಮಾಡಿದ್ದು ನಾವು, IITಗೆ ಗುದ್ದಲಿ ಪೂಜೆ ಮಾಡಿದ್ದು ನಾನು, ಇವರು ಉದ್ಘಾಟನೆಗೆ ಬರುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ ಬಿಡಿ ಎಂದು
ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು..