ಮಾಜಿ ಸಿಎಂ ಸಿದ್ದರಾಮಯ್ಯ(siddaramaih) ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್(srinivas prasad) ಕೆಂಡಕಾರುತ್ತಿದ್ದು, ವರುಣಾ ಕ್ಷೇತ್ರದಲ್ಲಿ(varuna) ಸಿದ್ದು ಆಕ್ಟೀವ್ ಆದ ಬೆನ್ನಲ್ಲೇ ಶ್ರೀನಿವಾಸ್ ಪ್ರಸಾದ್ ಕೌಂಟರ್ ಕೊಟ್ಟಿದ್ದಾರೆ. ʻಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ, ದಡ್ಡ ಬಾಯಿಗೆ ಬಂದಂಗೆ ಮಾತಾಡುತ್ತಾನೆ ಅಂತ ಸಂಸದ ಶ್ರೀನಿವಾಸ್ ಪ್ರಸಾದ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ(mysore) ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್,(srinivas prasad) ʻವರುಣದಲ್ಲಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಅದು ಸಾಧ್ಯಾನಾ? ಅಷ್ಟು ಮತಗಳ ಅಂತರ ಹೇಗೆ ಸಿಗುತ್ತೆ ? ಒಬ್ಬ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿರೋ ಸಿದ್ದರಾಮಯ್ಯ(siddaramai) ಮಾತನಾಡುವ ಮೊದಲು ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕುʼ ಅಂತ ಲೇವಡಿ ಮಾಡಿದ್ರು.
ʻಕಳೆದ ಎಲೆಕ್ಶನ್ ನ(election) ಅಂಕಿ ಅಂಶ ನೋಡಿದಾಗ ವರುಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ(bJP) 8 ಸಾವಿರ ಮತಗಳ ಅಂತರವಿದೆ, ಈ ಬಾರಿ ನಮ್ಮ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ವರುಣ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಯಾರು ಎಷ್ಟು ವೋಟ್ ತಗೋತಾರೆ ಅಂತ ಪಲಿತಾಂಶ ಬಂದಾಗ ಗೊತ್ತಾಗಲಿದೆ ಮೈಸೂರಿನ 11 ಕ್ಷೇತ್ರಗಳಲ್ಲಿ ನಾವು ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ರಾಷ್ಟ್ರಮಟ್ಟದಲ್ಲಿಕಾಂಗ್ರೆಸ್(congress) ಪಾರ್ಟಿ ಒಂದು ಮದ್ದೂರು ಸೆಟಲ್ ಟ್ರೈನ್ ಆಗಿದೆ, ಮದ್ದೂರು ಸೆಟಲ್ ಟ್ರೈನ್ ಎಂದರೆ ಏನ್ ಗೊತ್ತಾ? ಅದು ಬೆಂಗಳೂರು ಬಿಟ್ಟು ಮದ್ದೂರಿಗೆ ಯಾವಾಗ ಸೇರುತ್ತೆ ಅನ್ನೋದೇ ಗೊತ್ತಾಗಲ್ಲ. ಅದೇ ಪರಿಸ್ಥಿಯಲ್ಲಿ ಇಂದು ಕಾಂಗ್ರೆಸ್ ಪಕ್ಷವಿದೆ. ಆದರೂ ಅಧಿಕಾರದ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ನಾಯಕರೇ ಇಲ್ಲ.ಈ ಬಾರಿ ಜನರು ಬಿಜೆಪಿ ಬೆಂಬಲಿಸಲಿದ್ದಾರೆʼ ಅಂತ ಶ್ರೀನಿವಾಸ್ ಪ್ರಸಾದ್(srinivas prasad) ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ರು.
ʻಡಿಕೆಶಿ(DK shivakumar) ರಕ್ತದಲ್ಲಿ ಬರೆದು ಕೊಡುತ್ತೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎನ್ನುತ್ತಾರೆ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಅದ್ಯಕ್ಷರಾಗಿ ಮಾತನಾಡುವ ರೀತಿ ಇದೇನಾ ಎಂದು ಪ್ರಶ್ನಿಸಿದರು. ಅಲ್ಲದೇ ಡಿಕೆಶಿ ಮೇಲೆ ಇಡಿ ಕತ್ತಿ ತೂಗಾಡುತ್ತಿದೆ. ಯಾವಾಗ ಎಲ್ಲಿ ಏನಾಗುತ್ತೋ ಗೊತ್ತಿಲ್ಲ. ಆರೂವರೆ ಸಾವಿರ ಕೋಟಿ ಒಡೆಯ ಮುಖ್ಯಮಂತ್ರಿ ಆಗಿ ಏನು ಆಡಳಿತ ಕೊಡುತ್ತಾರೆʼ ಅಂತ ಲೇವಡಿ ಮಾಡಿದ್ರು. ʻ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(yogi adithyanath) ಮಂಡ್ಯದಲ್ಲಿ ನೆನ್ನೆ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿದ್ರು, ಬಹಳ ಅದ್ಭುತವಾಗಿ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಅವರ ಕಾರ್ಯ ವೈಖರಿ ಚೆನ್ನಾಗಿದೆ, ಕಾನೂನು ಸುವ್ಯಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ ʼಎಂದರು. ಅಲ್ಲದೆ ʻಬಸವರಾಜ್ ಬೊಮ್ಮಾಯಿ(basavaraj bommai) ಉತ್ತಮವಾಗಿ ಆಡಳಿತ ಕೊಟ್ಟಿದ್ದಾರೆ ಯಾವುದೇ ಸಮಸ್ಯೆಗಳು ಬಂದರು ಕೂಲ್ ಆಗಿ ಪರಿಹಾರ ನೀಡುತ್ತಾ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದಾರೆ . ಬಿಜೆಪಿ ಅಭಿವೃದ್ಧಿ ರಾಜಕಾರಣ ಮಾಡಿದೆ. ಜನರು ಎಲವನ್ನ ಗಮನಿಸಿದ್ದಾರೆ. ಚುನಾವಣೆಯಲ್ಲಿ(election) ಬಿಜೆಪಿ ಪರ ವಾತಾವರಣ ಸೃಷ್ಟಿಯಾಗಿದೆʼ ಅಂತ ಶ್ರೀನಿವಾಸ್ ಪ್ರಸಾದ್(srinivas prasad) ಹೇಳಿದ್ರು.