ಮಂಡ್ಯ: ವೀಕ್ಷಣೆಗೂ ಜಾಲಿರೇಡ್ ಗೂ ಬಹಳ ವ್ಯತ್ಯಾಸ ಇದೆ. ಕಾಮಗಾರಿ ಪ್ರಗತಿಯಲ್ಲಿದ್ದಾಗ ನ್ಯೂನತೆಗಳ,ಲೋಪಗಳು ಇದ್ಯಾ ಅವಾಗ ಬಂದ್ರೆ ಅದು ವೀಕ್ಷಣೆ. ರೋಡ್ ಕಂಪ್ಲೀಟ್ ಆಗಿ ಉದ್ಘಾಟನೆಗೆ ಮುಂಚೆ ಬಂದ್ರೆ ಅದು ಜಾಲಿರೇಡ್ ಎಂದು ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ಬೆಂಗಳೂರು-ಮೈಸೂರು ಹೆದ್ದಾರಿ ವೀಕ್ಷಣೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿಂದು ಮಾತನಾಡಿದ ಅವರು, ಅವರ ಕೊಡುಗೆ ಇತ್ತು ಅಂದಿದ್ರೆ ಕಾಮಗಾರಿ ವೇಳೆ ವೀಕ್ಷಣೆಗೆ ಬರ್ತಿದ್ರು.ಆಗ ಅವೈಜ್ಞಾನಿಕದ ಬಗ್ಗೆ ಸಿದ್ದರಾಮಯ್ಯ, ಮಹಾದೇವಪ್ಪ ಮಾತನಾಡಿಲ್ಲ. ನೀರು ತುಂಬಿದಾಗ ಮಾತನಾಡಿಲ್ಲ. ಕುಮಾರಣ್ಣ ಬಂದು ಈಜುಹೊಡಿ ಅಂದಾಗ ಮಾತನಾಡಿಲ್ಲ. ಇವರದು ಹಾಗಿದ್ರೆ ವೈಜ್ಞಾನಿಕವಾಗಿ ಮಾಡಿದ್ದೇವೆ ಅಂತ ಹೇಳಬಹುದಿತ್ತು. ಇವತ್ತು ಬಂದಿದ್ದಾರೆ ಅಂದರೆ ಅದು ಜಾಲಿ ರೇಡ್ ಗೆ ಬರ್ತಾರೆ ಅಷ್ಟೆ ಎಂದು ಗೇಲಿ ಮಾಡಿದರು.
ಸಿದ್ದರಾಮಯ್ಯ ಮತ್ತೆ ಮೈಸೂರಿಗೆ ಮತ್ತೆ ಬರ್ತಿದ್ದಾರೆ. ಕೋಲಾರದಲ್ಲಿ ನೆಲೆ ಸಿಗುತ್ತೊ ಏನೋ ಅನುಮಾನವಿದೆ. ವಾಪಸ್ಸು ವರುಣಕ್ಕೆ ಹೋಗಬೇಕು ಅವರು. ಅವರ ಬಗ್ಗೆ ತಲೆ ಕೆಡಿಸಿ ಕೊಳ್ಳಬೇಡಿ ಎಂದರು.
ಸಿದ್ದು, ಡಿಕೆ ಜೊತೆ ರಾಹುಲ್, ಸೋನಿಯಾ ಗಾಂಧಿ ಬರಲಿ ಶಕ್ತಿ ಪ್ರದರ್ಶನ ಮಾಡೋಣಾ.’! ಎಂದು ಕಾಂಗ್ರೆಸ್-ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಗೆ ಸವಾಲ್ ಹಾಕಿದರು.
ಮೋದಿ ಬರುವ ದಿನ ಪ್ರಜಾಧ್ವನಿ ಯಾತ್ರೆ ವಿಚಾರವಾಗಿ ಮಾತನಾಡಿ, ‘ಮೋದಿ ಜಗದೇಕ ವೀರ’. ಅವರ ಎದುರು ಯಾವ ಕಾಂಗ್ರೆಸ್, ರಾಹುಲ್ ಗಾಂಧಿ ನಿಲ್ಲಲ್ಲ. ಅದೇ ದಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕರೆದುಕೊಂಡು ಬರಲಿ. ನಾವು ಏನು ಚಿಂತೆ ಮಾಡಲ್ಲ. ಮೋದಿ ಅಭಿಮಾನಿಗಳು ಮಂಡ್ಯದ ಮೂಲೆ ಮೂಲೆ ಯಲ್ಲಿದ್ದಾರೆ. ನಮಗೆ ಎಷ್ಟು ಜನ ಬರ್ತಾರೆ, ಅವರಿಗೆ ಎಷ್ಟು ಜನ ಬರ್ತಾರೆ? ಅವತ್ತು ಶಕ್ತಿ ಪ್ರದರ್ಶನ ಮಾಡೋಣಾ. ಅವರನ್ನು ಬರೋದಕ್ಕೆ ಹೇಳಿ ಎಂದರು.