ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ನಲ್ಲಿ ಪ್ರಶ್ನಾತೀತ ನಾಯಕ ಎನ್ನುವ ಮಟ್ಟಿಗೆ ಬೆಳೆದು ಹೆಮ್ಮರವಾಗಿ ನಿಂತಿದ್ದಾರೆ. ಆದರೆ ಕಾಂಗ್ರೆಸ್ನ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಕಾರಣ ಸಿದ್ದರಾಮಯ್ಯ ಮೇಲಿನ ಜನಪ್ರೇಮವನ್ನು ಸಹಿಸಿಕೊಳ್ಳುವುದಕ್ಕೆ ಕಷ್ಟವಾಗ್ತಿದೆ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎನ್ನುವ ಹೇಳಿಕೆಗೆ ಹೈಕಮಾಂಡ್ ಮೂಲಕವೇ ತಡೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸಿದ್ದರಾಮಯ್ಯ ಅಭಿಮಾನಿಗಳು ಮತ್ತೊಂದು ರೀತಿಯ ಹಾದಿ ಕಂಡುಕೊಂಡಿದ್ದು, ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ ಶಿವಕುಮಾರ್ಗೆ ಮುಜುಗರ ಸೃಷ್ಟಿಸುವ ಕೆಲಸ ಆಗುತ್ತಿದೆ. ಇದೇ ಕಾರಣಕ್ಕೆ ಕನಕಪುರದ ಬಂಡೆ ಅಂಡ್ ಬ್ರದರ್ ಸಿಡಿಮಿಡಿಕೊಂಡಿದ್ದಾರೆ. ಒಂದಲ್ಲ ನಿರಂತರವಾಗಿ ನಡೆಯುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕೆಂಡ ಕಾರುತ್ತಿದ್ದಾರೆ.
ಹಾಸನದಲ್ಲಿ ಸಿದ್ದರಾಮಯ್ಯ ವರ್ಣಿಸುವ ಹಾಡಿಗೆ ಬ್ರೇಕ್..!
ಕಳೆದ ಶನಿವಾರ (ಜನವರಿ 21) ಹಾಸನದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ವರ್ಣಿಸುವ ಜಾನಪದ ಗೀತೆ ಹಾಡುವ ಪ್ರಯತ್ನ ನಡೆದಿತ್ತು. ವೇದಿಕೆ ಮೇಲೆ ಬಡವರ ಬಂಧು ಸಿದ್ದರಾಮಯ್ಯ ಎಂದು ಹಾಡು ಶುರುವಾಗುತ್ತಿದ್ದ ಹಾಗೆ ಡಿಕೆ ಸುರೇಶ್ ಹಿಂಬದಿಯಲ್ಲಿ ಕುಳಿತಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಡಿ.ಕೆ ಸುರೇಶ್ ಕಿವಿಯಲ್ಲಿ ಸಿದ್ದರಾಮಯ್ಯರನ್ನು ಹೊಗಳುವ ಹಾಡು ಹಾಡ್ತಿದ್ದಾರೆ ಎಂದು ಇಸುರಿದ್ದರು. ಒಂದೇ ಬಾರಿಗೆ ಹೇ ನಿಲ್ಸು.. ಎಂದಿದ್ದ ಡಿಕೆ ಸುರೇಶ್, ವ್ಯಕ್ತಿಗತ ಪೂಜೆ ರಾಜಕೀಯದಲ್ಲಿ ಸರಿಯಲ್ಲಿ ಎಂದಿದ್ದರು. ಆ ಬಳಿಕ ಆ ಹಾಡುಗಾರ ಸಿದ್ದರಾಮಯ್ಯ ಅವರನ್ನು ವರ್ಣಿಸಿ ಬರೆದಿದ್ದ ಹಾಡನ್ನು ನಿಲ್ಲಿಸಿ ಪೆಚ್ಚು ಮೋರೆ ಹಾಕಿಕೊಂಡು ಹೋಗುವಂತಾಗಿತ್ತು. ಇದೀಗ ಮತ್ತೆ ಅದೇ ರೀತಿಯ ಪ್ರಕರಣ ಮತ್ತೆ ನಡೆದಿದೆ. ಇಲ್ಲಿ ಸುರೇಶ್ ಬದಲು ಡಿ.ಕೆ ಶಿವಕುಮಾರ್ ಗುಟುರು ಹಾಕಿದ್ದಾರೆ.

ಚಾಮರಾಜನಗರದಲ್ಲಿ ಹಾರ ತುರಾಯಿ ಕಂಡು ಸಿಡಿಮಿಡಿ..!
ಗುರುವಾರ (ಜನವರಿ 26) ಚಾಮರಾಜನಗರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆದಿತ್ತು. ವೇದಿಕೆ ಮೇಲೆ ಡಿ.ಕೆ ಶಿವಕುಮಾರ್ ಭಾಷಣ ಮಾಡುವಾಗ ವೇದಿಕೆ ಮೇಲೆ ಬಂದಿದ್ದ ಕಾಂಗ್ರೆಸ್ ನಾಯಕರ ದಂಡು ಸಿದ್ದರಾಮಯ್ಯಗೆ ಸನ್ಮಾನ ಮಾಡಲು ಮುಂದಾದ್ರು. ಇದರಿಂದ ಕೆರಳಿ ಕೆಂಡವಾಗಿದ್ದ ಡಿ.ಕೆ ಶಿವಕುಮಾರ್, ಇದು ಕಾಂಗ್ರೆಸ್ ಪಕ್ಷದ ಶಿಸ್ತಾ..? ನಿಮಗೆ ಮಾತ್ರ ಹಾರ ತರೋದಕ್ಕೆ ಸಾಧ್ಯ, ಉಳಿದವರಿಗೆ ಹಾರ ತರೋದಕ್ಕೆ ಆಗೋದಿಲ್ವಾ..? ಸಮಾರಂಭದ ಮಧ್ಯೆ ಹೀಗೆಲ್ಲಾ ಮಾಡೋ ಬದಲು ಕಾರ್ಯಕ್ರಮದ ಕೊನೆಯಲ್ಲಿ ಮಾಡಬೇಕು ಅಲ್ವಾ..? ಎಂದು ಬುದ್ಧಿ ಮಾತು ಹೇಳುತ್ತಲ್ಲೇ ಸಿದ್ದರಾಮಯ್ಯ ಅಭಿಮಾನಿಗಳಿಗೆ ಚಾಟಿ ಬೀಸಿದ್ರು. ಇನ್ನು ಯಾವ ಕಾರ್ಯಕ್ರಮದಲ್ಲೂ ಕಾರ್ಯಕರ್ತರು ಸಿದ್ದರಾಮಯ್ಯ ಕಡೆಗೆ ಹಾರ ಹಿಡಿದುಕೊಂಡು ಹೋಗಬಾರದು ಆ ರೀತಿ ಬೆಂಕಿಯುಗುಳಿದ್ದಾರೆ. ಇದಕ್ಕೂ ಮೊದಲು ಮಂಗಳೂರಲ್ಲಿ ಸೂಚ್ಯವಾಗಿ ಹೇಳಿದ್ರು.
ಮಂಡಗಳೂರಲ್ಲೂ ಡಿಕೆಶಿಗೆ ಎದುರಾಗಿತ್ತು ಮುಜುಗರ..!
ಹಾಸನ ಚಿಕ್ಕಮಗಳೂರು ಮುಗಿಸಿ ಮಾರನೆ ದಿನ (ಜನವರಿ 22) ಕಳೆದ ಭಾನುವಾರ ಪ್ರಜಾಧ್ವನಿ ಯಾತ್ರೆ ಉಡುಪಿ ಮೈಸೂರಿಗೆ ಹೋಗಿತ್ತು. ಮೈಸೂರಿನಲ್ಲಿ ರಾತ್ರಿ ಆಗಿದ್ದರೂ ಕಾರ್ಯಕರ್ತರು ಸಿದ್ದರಾಮಯ್ಯಗೆ ಹಾರ ತುರಾಯಿ ಹಾಕುವುದು. ಬಂದ ಬಂದವರೆಲ್ಲಾ ಸಿದ್ದರಾಮಯ್ಯ ಬಗ್ಗೆ ಗುಣಗಾನ ಮಾಡುವುದು ಮಾಡುತ್ತಿದ್ದರು. ಕೊನೆಯಲ್ಲಿ ಭಾಷಣ ಮಾಡಲು ಬಂದಿದ್ದ ಡಿ.ಕೆ ಶಿವಕುಮಾರ್ ಬಂದವರೆಲ್ಲಾ ಎಲ್ಲಾ ನಾಯಕರ ಹೆಸರನ್ನು ಹೇಳುತ್ತಾ ಕಾಲಹರಣ ಮಾಡಬೇಡಿ. ಒಂದು ಬಾರಿ ಸ್ವಾಗತ ಮಾಡುವಾಗ ನಾಯಕರ ಹೆಸರನ್ನು ಹೇಳಿ ಸ್ವಾಗತ ಮಾಡಿದ್ರೆ ಸಾಕು. ಆ ಬಳಿಕ ಬಂದವರು ನೇರವಾಗಿ ಭಾಷಣ ಮಾಡಿ. ಇದಕ್ಕೆ ನಾನು ಕೆಪಿಸಿಸಿ ಕಡೆಯಿಂದ ಸುತ್ತೋಲೆ ಹೊರಡಿಸುತ್ತೇನೆ ಎಂದಿದ್ದರು. ಇದೀಗ ನೇರವಾಗಿ ಸಿದ್ದರಾಮಯ್ಯ ಅಭಿಮಾನಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದಾರೆ..

ಶಿಸ್ತು ಅನ್ನೋದು ಸತ್ಯಾನಾ..? ಸನ್ಮಾನಕ್ಕೆ ಕೋಪಾನಾ..?
ಕಾಂಗ್ರೆಸ್ ಪಕ್ಷ ಶಿಸ್ತು ಪಾಲಿಸಬೇಕು ಅಂತಾ ಡಿ.ಕೆ ಶಿವಕುಮಾರ್ ಹೇಳಿರಬಹುದು. ಇನ್ನು ವ್ಯಕ್ತಿಗತ ವೈಭವ ಬೇಡ ಅಂತಾ ಡಿ.ಕೆ ಸುರೇಶ್ ಕೂಡ ಹೇಳಿರಬಹುದು. ಆದರೆ ಮುಖ್ಯಮಂತ್ರಿ ಕುರ್ಚಿಗಾಗಿ ಡಿ.ಕೆ ಶಿವಕುಮಾರ್ ಪೈಪೋಟಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಹಾಲಿ ಮಾಜಿ ಶಾಸಕರು ಕೂಡ ಸಿದ್ದರಾಮಯ್ಯ ಬೆನ್ನಿಗೆ ಮನಿಲ್ತಿದ್ದಾರೆ. ಇನ್ನು ಕಾರ್ಯಕರ್ತರೂ ಕೂಡ ಸಿದ್ದರಾಮಯ್ಯ ಬಂದಾಗ ಉಘೇ ಉಘೇ ಅಂತಾ ಜೈಕಾರ ಹಾಕೋದು, ಶಿಳ್ಳೆ ಚಪ್ಪಾಳೆ ಹಾಕುವುದು ಮಾಡ್ತಾರೆ. ಸಿದ್ದರಾಮಯ್ಯ ವೇಗವಾಗಿ ಹೋಗುತ್ತಿದ್ರೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಹಠ ಹಿಡಿದು ಹೊರಟಿರುವ ಡಿ.ಕೆ ಶಿವಕುಮಾರ್ ಕಣ್ಣಿಗೆ ಖಾರದ ಪುಡಿ ಬಿದ್ದಂತೆ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಯಾಕಂದ್ರೆ ಮಾನವ ಎಂದ ಮೇಲೆ ತನ್ನ ಸಾಧನೆ ಅಷ್ಟೇ ಮುಖ್ಯವಾಗುತ್ತದೆ. ಬೇರೆಯವರು ಬೆಳೆದು ದೊಡ್ಡವರಾಗುತ್ತಿದ್ದಾಗ ನಾನು ಇಲ್ಲೇ ಇರುತ್ತೇನೆ ನೀವು ಎಲ್ಲಾ ಅಧಿಕಾರ ಅನುಭವಿಸಿ ಎಂದು ಯಾರು ತಾನೆ ಹೇಳಿಯಾರು..? ಅಲ್ಲವೇ..