ತುಮಕೂರು : ಶರಣ ಶ್ರೇಷ್ಠ ಬಸವಣ್ಣ ನವರನ್ನು (Basavanna) ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಕ್ಕಾಗಿ ಅಪಾರ ಸಂತಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yadiyurappa) ಅವರು ಬೃಹತ್ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah ) ಅವರನ್ನು ಅಭಿನಂದಿಸಿ, ಅಭಿನಂದನಾ ನುಡಿಗಳನ್ನು ಆಡಿದರು.
ಡಾ.ಶ್ರೀ ಶ್ರೀ ಶಿವಕುಮಾರ ಶಿವಮೂರ್ತಿಶಿವಯೋಗಿಗಳವರ 5 ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಮೊದಲಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.