ಬೆಂಗಳೂರು: ಸಿದ್ದಾಪುರದಲ್ಲಿ ನಡೆದಿದ್ದ 7.11 ಕೋಟಿ ರೂ. ರಾಬರಿ ಕೇಸ್ ನಲ್ಲಿ ಮತ್ತೆ 47 ಲಕ್ಷ ರೂ. ಜಪ್ತಿ ಮಾಡಲಾಗಿದೆ.ಪ್ರಕರಣದ ಆರೋಪಿ ತಮಿಳುನಾಡಿನ ಕುಪ್ಪಂನ ನವೀನ್ ಮನೆಯಲ್ಲಿ ಈ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ದರೋಡೆ ಪ್ರಕರಣದಲ್ಲಿ ಈವರೆಗೆ 7.01 ಕೋಟಿ ಹಣ ವಶಪಡಿಸಿಕೊಳ್ಳಲಾಗಿದ್ದು, ಉಳಿದ 10 ಲಕ್ಷ ಹಣ ಪತ್ತೆಗೆ ತನಿಖೆ ಮುಂದುವರಿದಿದೆ.

ಇನ್ನು ಪ್ರಕರಣದಲ್ಲಿ ಇದುವರೆಗೆ 9 ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸಲಾಗ್ತಿದೆ. ಈ ಮೊದಲು ನವೀನ್ ಹೈದರಾಬಾದ್ ಲಾಡ್ಜ್ ನಲ್ಲಿದ್ದಾಗ 53 ಲಕ್ಷ ಹಣದ ಜೊತೆಗೆ ಸಿಕ್ಕಿ ಬಿದ್ದಿದ್ದ. ಎರಡು ದಿನಗಳ ವಿಚಾರಣೆ ಬಳಿಕ ಮನೆಯಲ್ಲಿ ಉಳಿಕೆ ಹಣ ಇರುವ ಬಗ್ಗೆ ಬಾಯ್ಬಿಟ್ಟಿದ್ದ. ಬಳಿಕ ನಿನ್ನೆ ರಾತ್ರಿ ಕುಪ್ಪಂ ಮನೆಯಲ್ಲಿ 47 ಲಕ್ಷ ಹಣ ಜಪ್ತಿ ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾತಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಾಬರಿ ಪ್ರಕರಣದಲ್ಲಿ 7.01 ಕೋಟಿ ರಿಕವರಿ ಆಗಿದೆ. ನಮ್ಮ ಪೊಲೀಸರು ಉತ್ತಮವಾದ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿ ಶೇ 98.06% ರಷ್ಟು ರಿಕವರಿ ಆಗಿದ್ದು, ಇದುವರೆಗೆ 9 ಜನರ ಬಂಧನ ಆಗಿದೆ. ಚೆನ್ನೈ,ಹೈದರಾಬಾರ್, ಆಂಧ್ರ ಪೊಲೀಸರು ಸಾಕಷ್ಟು ಸಹಾಯ ಮಾಡಿದ್ದು, ಈಗಾಗಲೇ ತಂಡಕ್ಕೆ 5 ಲಕ್ಷ ಬಹುಮಾನ ಘೋಷಿಸಲಾಗಿದೆ. ಈಗ ಮತ್ತೆ 2 ಲಕ್ಷ ಬಹುಮಾನ ನೀಡ್ತಿದ್ದೇವೆ ಎಂದು ತಿಳಿಸಿದರು.














