ನಮ್ಮ ಮೆಟ್ರೋ (Namma Metro) ಬೆಂಗಳೂರಿನ ಅಭಿವೃದ್ಧಿಗೆ ಇಟ್ಟಿರುವ ಹೊಸ ಮೈಲುಗಲ್ಲು. ಒಂದು ಮೆಟ್ರೋ ಬೆಂಗಳೂರಿನ ಬಹುದೊಡ್ಡ ಟ್ರಾಫಿಕ್ ಕಿರಿಕಿರಿ ಅಲ್ಪ ಮಟ್ಟಿನ ಪರಿಹಾರವಂತು ತಂದುಕೊಟ್ಟಿದೆ. ಇದೀಗ ಹೊಸದಾಗಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ನಲ್ಲಿ ಫೇಸ್ 3ಕ್ಕೆ ಅನುಮತಿ ಕೊಟ್ಟಿದ್ದು, ಬರೋಬ್ಬರಿ 11 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಅನುದಾನಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ನಡುವೆ BMRCL ಅದಾಯ ತಂದುಕೊಳ್ಳಲು ನೂತನ ದಾರಿ ಕಂಡುಕೊಂಡಿದೆ.
ನಮ್ಮ ಮೆಟ್ರೋ ಮತ್ತಷ್ಟು ಹೈಟೆಕ್.. ವಿದೇಶಿ ಮಾದರಿಯಲ್ಲಿ ಮೆಟ್ರೋ ಹಬ್!
ವಿದೇಶದಲ್ಲಿರುವಂತೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲೂ ಕೂಡ ಮಿನಿ ಶಾಪಿಂಗ್ (Mini shopping) ವ್ಯವಸ್ಥೆಗೆ ಚಿಂತನೆ ಮಾಡಲಾಗಿದೆ. ಈ ಮೂಲಕ ಮೆಟ್ರೋ ನಿಲ್ದಾಣದಲ್ಲಿರುವ ಖಾಲಿ ಜಾಗದಲ್ಲಿ ಪುಟ್ಟ ಪುಟ್ಟ ಅಂಗಡಿಗಳು ಓಪನ್ ಆಗಲಿದ್ದು, ಮೆಟ್ರೋ ಬಳಕೆದಾರರಿಗೆ ಬೇಕಾದ ವಸ್ತುಗಳು ಇನ್ಮುಂದರ ಮೆಟ್ರೋ ನಿಲ್ದಾಣದಲ್ಲೇ ಲಭ್ಯವಾಗಲಿದೆ. ಇದು ನಮ್ಮ ಮೆಟ್ರೋ ಆದಾಯ ಹೆಚ್ಚಿಸಲು ಹಾಗೂ ಸಾರ್ವಜನಿಕರ ಅನೂಕಲತೆಗೆ ಮಾಡಿರುವ ಯೋಜನೆಯಾಗಿದೆ. ಈ ಬಗ್ಗೆ ಚಿಂತನೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಗ್ರೀನ್ ಸಿಗ್ನಲ್ ನಮ್ಮ ಮೆಟ್ರೋ ಪಡೆದುಕೊಂಡಿದೆ. ಈಗಾಗಲೇ ಈ ಮಿನಿ ಶಾಪಿಂಗ್ ಅಂಗಡಿಗಳನ್ನು ಸ್ಥಾಪಿಸಲು BMRCL ನಿಂದ ಟೆಂಡರ್ ಗೂ ಆಹ್ವಾನ ನೀಡಿದೆ.
ನಗರದ ಮೆಟ್ರೋ ಸ್ಟೇಷನ್ಗಳಲ್ಲಿ ಸಲೂನ್, ಮೆಡಿಕಲ್ ಸ್ಟೋರ್, ಸ್ಟೇಷನರಿ ಅಂಗಡಿಗಳು ಇತ್ಯಾದಿ ಓಪನ್!
ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳ ಕೆಳಗಿರುವ ಖಾಲಿ ಜಾಗದಲ್ಲಿ ಮಿನಿ ಅಂಗಡಿಗಳು ಓಪನ್ ಆಗಲಿವೆ. ನಗರದ 2 ಸಾವಿರ ಪ್ರಯಾಣಿಕರನ್ನು ಒಳಪಡಿಸಿ ಸರ್ವೇ ನಡೆಸಿರುವ ನಮ್ಮ ಮೆಟ್ರೋ, ಪ್ರಯಾಣಿಕರ ಆಧ್ಯತೆ ಯಾವುದು ಎಂಬುವುದನ್ನು ಈ ಸರ್ವೇ ಮೂಲಕ ತಿಳಿದುಕೊಂಡಿದೆ. ಸರ್ವೇಯಲ್ಲಿ ಟೀ – ಕಾಫಿ ಶಾಪ್, ಮೆಡಿಕಲ್, ಹೇರ್ ಕಟ್ಟಿಂಗ್ ಸಲೂನ್ ಹಾಗೂ ಚಿಟ್ ಚ್ಯಾಟ್ ಅಂಗಡಿಗಳಿಗೆ ಬೇಡಿಕೆ ಬಂದಿದೆ. ಹೀಗಾಗಿ ಈ ಇಷ್ಟೂ ಅಂಗಡಿಗಳನ್ನು ಕಡ್ಡಾಯವಾಗಿ ಓಪನ್ ಮಾಡಲು BMRCL ನಿರ್ಧರಿಸಿದೆ.
ಪ್ರಾಯೋಗಿಕವಾಗಿ ನಗರದ 6 ಮೆಟ್ರೋ ಸ್ಟೇಷನ್ ಗಳಲ್ಲಿ ಪೈಲಟ್ ಅಂಗಡಿಗಳ ಸ್ಥಾಪನೆ!
ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಗರದ ಆರು ಪ್ರಮುಂ ಮೆಟ್ರೋ ನಿಲ್ದಾಣದಲ್ಲಿ ತೆರಯಲಾಗುತ್ತದೆ. ಇಂದಿರಾನಗರ, ಮೆಜೆಸ್ಟಿಕ್, ಎಂಜಿ ರಸ್ತೆ, ಬೈಯಪ್ಪನಹಳ್ಳಿ ಸೇರಿದಂತೆ ಆರು ಸ್ಟೇಷನ್ ನಲ್ಲಿ ಆರಂಭಿಕವಾಗಿ ಸ್ಥಾಪನೆ ಮಾಡಲಾಗುತ್ತದೆ. ನಂತರ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಮೆಟ್ರೋ ನಿಲ್ದಾಣದಲ್ಲಿ ಶಾಪಿಂಗ್ ಹಬ್ ಗಳು ಓಪನ್ ಆಗಲಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಈ ಯೋಜನೆ ಎರಡ್ಮೂರು ವರ್ಷಗಳ ಹಿಂದೆಯೇ ಜಾರಿಯಾಗಬೇಕಿದ್ದು, ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿದೆ. ಇದೀಗ ಕೊರೋನಾ ಕಾರಣದಿಂದ ಸಂಸ್ಥೆಗೆ ಆದಾಯದ ಹೊಡೆತ ಕೂಡ ಬಿದ್ದಿದೆ. ಈ ಹೊಸ ಹಬ್ ಯೋಜನೆ ಮೂಲಕ ಸಂಸ್ಥೆಗೆ ಆದಾಯದ ದಾರಿ ಕಂಡುಕೊಳ್ಳುವುದಲ್ಲದೆ ಸಾರ್ವಜನಿಕರಿಗೆ ಅಗತ್ಯ ಸೇವೆಗೆಗಳೂ ಒಂದೇ ಕಡೆ ಸಿಗಲಿದೆ. ಈ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಆದಷ್ಟು ಬೇಗೆ ಟೇಕ್ ಆಫ್ ಆಗಲಿದೆ ಎಂದಿದ್ದಾರೆ.