ಕಿರುತೆರೆ ನಟಿ, ಬ್ರಹ್ಮ ಗಂಟು ಧಾರಾವಾಹಿ ಖ್ಯಾತಿಯ ಶೋಭಿತ ಶಿವಣ್ಣ (Shobitha Shivanna) ಹೈದರಾಬಾದ್ ನಲ್ಲಿ (Hyderabad) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ನಿರ್ಧಾರ ಕೈಗೊಳ್ಳೋ ಮುನ್ನ , ಅದೇ ದಿನ ರಾತ್ರಿ ತಮ್ಮ ಕುಟುಂಬದ ಜೊತೆ ಶೋಭಿತಾ ಫೋನ್ ನಲ್ಲಿ ಮಾತನಾಡಿದ್ರು ಎಂಬ ಮಾಹಿತಿ ಲಭ್ಯವಾಗಿದೆ.
ಒಂದುವರೆ ವರ್ಷದ ಹಿಂದೆ ವಿವಾಹವಾಗಿದ್ದ ನಟಿ ಶೋಭಿತಾ ಮತ್ತು ಸುಧೀರ್ ಹೈದರಾಬಾದ್ ನಲ್ಲಿ ನೆಲೆಸಿದ್ದರು. ನವೆಂಬರ್ 30ರ ರಾತ್ರಿ ಶೋಭಿತಾ ತಮ್ಮ ಸಹೋದರಿ ಜೊತೆ ಫೋನ್ ನಲ್ಲಿ ಕೆಲ ಕಾಲ ಮಾತನಾಡಿದ್ದಾರೆ. ಈ ವೇಳೆ ಕೂಡ ಕುಟುಂಬಸ್ಥರುಗೆ ಯಾವುದೇ ಅನುಮಾನ ಬರದಂತೆ ಶೋಭಿತಾ ಮಾತನಾಡಿದ್ದಾರೆ.
ಇದಾದ ಬಳಿಕ ಮರುದಿನ ಮುಂಜಾನೆ ತಡವಾದ್ರೂ ಶೋಭಿತಾ ತಮ್ಮ ಕೊನೆಯ ಬಾಗಿಲನ್ನು ತೆರೆಯದಿದ್ದಾಗ ಪತಿ ಸುಧೀರ್ ಅನುಮಾನಗೊಂಡು ರೂಮ್ ಬಾಗಿಲು ಒಡೆದಿದ್ದಾರೆ .ಈ ವೇಳೆ ಶೋಭಿತಾ ಫ್ಯಾನಿಗೆ ನೇಣು ಹಾಕಿಕೊಂಡಿರೋದು ಪತ್ತೆಯಾಗಿದೆ.