ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ (Actor Darshan) ಮಧ್ಯಾಂತರ ಜಾಮೀನಿನ ಮೇಲೆ ಹೊರಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ (BGS hospital) ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದೆ.
ಆರೋಪಿ ದರ್ಶನ್ ಸದ್ಯ ಬೆಂಗಳೂರಿನ ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದರ್ಶನ್ ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿಲ್ಲ ಬದಲಾಗಿ ಫಿಸಿಯೋಥೆರಪಿ ಚಿಕಿತ್ಸೆ ಮಾತ್ರ ಮುಂದುವರೆಸಿದ್ದಾರೆ.
ಹೀಗೆ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ (Social media) ಹರಿದಾಡ್ತಿದೆ. ಆರು ವಾರಗಳ ಜಾಮೀನು ಸಿಕ್ಕಿದ್ದು, ಸದ್ಯ ಕಳೆದ 4 ವಾರಗಳಿಂದ ಪಿಸಿಯೋಥೆರಪಿ ಅಷ್ಟೇ ಮಾಡಿಸಿಕೊಂಡಿದ್ದಾರೆ.