ಕರ್ನಾಟಕದ (Karnataka) ಜನ ಪ್ರತಿನಿಧಿಗಳನ್ನು ಮಹಾರಾಷ್ಟ್ರದಲ್ಲಿ ಅವಮಾನಿಸಲಾಗಿದೆ.ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ (Maharashtra kollapura) ಶಿವಸೇನೆ (Shiv sene) ಕಾರ್ಯಕರ್ತರು ಮತ್ತೆ ಪುಂಡಾಟ ನಡೆಸಿದ್ದಾರೆ. ಇಲ್ಲಿನ ಶ್ರೀಅಂಬಾಬಾಯಿ ದೇವಸ್ಥಾನಕ್ಕೆ ಬಿಜೆಪಿ (BJP) ಮಾಜಿ ಸಚಿವ ಪ್ರಭು ಚವಾಣ್, ಸುನಿಲ್‌ಕುಮಾರ್ (Sunil Kumar) ಸೇರಿ ಕೆಲ ಶಾಸಕರು ದರ್ಶನಕ್ಕೆ ತೆರಳಿದ ವೇಳೆ ಹೈ ಡ್ರಾಮಾ ನಡೆದಿದೆ.
ಕರ್ನಾಟಕದ ಶಾಸಕರು ದೇವಸ್ಥಾನದ ಬಳಿ ಬರ್ತಿದ್ದಂತೆ ಶಿವಸೇನೆ ಕಾರ್ಯಕರ್ತರು ನಾಯಕರನ್ನು ದೇಗುಲಕ್ಕೆ ಹೋಗದಂತೆ ಅಡ್ಡಿಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಶಾಸಕರಿಗೆ ನೋ ಎಂಟ್ರಿ (No entry) ಎಂದು ಶಿವಸೇನೆಯ ಕಾರ್ಯಕರ್ತರು ಸಣ್ಣ ತನ ಪ್ರದರ್ಶಿಸಿದ್ದಾರೆ.
ಸೋಮವಾರ ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮಹಾಮೇಳಾವ ಮಾಡಲು ಮುಂದಾದ ವೇಳೆ ಅವರನ್ನು ಬಂಧಿಸಲಾಗಿತ್ತು ಮತ್ತು ನಾಯಕರನ್ನ ಬೆಳಗಾವಿಗೆ ಬರದಂತೆ ಗಡಿಯಲ್ಲಿ ತಡೆಹಿಡಿದಿದ್ದರು.ಹೀಗಾಗಿ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದ ಕರ್ನಾಟಕ ಶಾಸಕರಿಗೆ ಶಿವಸೇನೆ ಕಾರ್ಯಕರ್ತರು ಈ ರೀತಿ ದರ್ಪ ಮೆರೆದಿದ್ದಾರೆ.