ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಡಾ || ಶಿವರಾಜ್ಕುಮಾರ್ ಅಭಿನಯ ದಬಹು ನಿರೀಕ್ಷಿತ ವೇದ ಚಿತ್ರಕ್ಕೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ದೊರೆಯುತ್ತಿದೆ.
ಇನ್ನು ಚಿತ್ರತಂಡವು ಮೈಸೂರಿನಲ್ಲಿ ಭರ್ಜರಿ ಪ್ರಮೋಷನ್ ಹಮ್ಮಿಕೊಂಡಿತ್ತು ಈ ವೇಳೆ ಸಿನಿಮಾ ಮಂದಿರಗಳಲ್ಲಿ ಮಾಸ್ಕ್ ಕಡ್ಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿ ಎಲ್ಲರೂ ಕೇರ್ ಪುಲ್ ಆಗಿರೋದು ಒಳ್ಳೆಯದು, ಇದರಿಂದ ಅಭಿಮಾನಿಗಳಿಗೆ ಕಷ್ಟವಾಗುತ್ತದೆ ಎಷ್ಟರ ಮಟ್ಟಿಗೆ ಕೋವಿಡ್ ಇದೆ ಅನ್ನೋದು ಗೊತ್ತಿಲ್ಲ, ಇದು ಎಫೆಕ್ಟ್ ಆಗುತ್ತೇ ಅನಿಸಲ್ಲ ಮೊದಲ ಕೋವಿಡ್ ರೀತಿ ಎಫೆಕ್ಟ್ ಆಗಲ್ಲ ಎಂದು ಹೇಳಿದ್ದಾರೆ.
ಜನರಿಗೆ ಅವರದೇ ಆದ ಸ್ವಾತಂತ್ರ್ಯವಿದೆ, ಎಲ್ಲರೂ ಜನರ ಸ್ವಾತಂತ್ರ್ಯವನ್ನು ಗೌರವಿಸಬೇಕು. ಸ್ವಾತಂತ್ರ್ಯವಿರುವ ದೇಶದಲ್ಲಿದ್ದು ಸ್ವಾತಂತ್ರ್ಯ ಇಲ್ಲ ಅಂದರೆ ಹೇಗೆ ? ಎಲ್ಲದಕ್ಕೂ ಕಡಿವಾಣ ಹಾಕೋದು ಸರಿ ಅಲ್ಲ. ನಮ್ಮ ಹುಷಾರಲ್ಲಿ ನಾವು ಇರಬೇಕು ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದಾರೆ.
ಈ ವೇಳೆ ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್, ನಿರ್ಧೇಶಕ ಎ.ಹರ್ಷ, ನಾಯಕಿ ಗಾನವಿ ಲಕ್ಷ್ಮಣ್, ಅದಿತಿ ಸಾಗರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.