ಸೋಮವಾರ ವಿಶ್ವಾಸಮತ ಯಾಚನೆ ವೇಳೆ ವಿಫ್ ಉಲ್ಲಂಘಿಸಿದ ಶಿವಸೇನೆಯ 14 ಶಾಸಕರನ್ನು ಅನರ್ಹಗೊಳಿಸುವಂತೆ ಅಗ್ರಹಿಸಿ ಸರ್ಕಾರದ ಮುಖ್ಯ ಸಚೇತಕ ಭರತ ಗೊಗವಾಲೆ ನೋಟಿಸ್ ಜಾರಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಪುತ್ರನಿಗೆ ಮಾತ್ರ ನೋಟಿಸ್ ಜಾರಿ ಮಾಡದೇ ಇರುವುದು ತೀವ್ರ ಕುತೂಹಲ ಮೂಡಿಸಿದೆ.
ಸಭಾಧ್ಯಕ್ಷರ ಚುನಾವಣೆ ಹಾಗು ವಿಶ್ವಾಸಮತ ಯಾಚನೆ ವೇಳೆ ಶಿಂಧೆ ಬಣದ ಶಾಸಕರು ವಿಪ್ ಉಲ್ಲಂಘಿಸದಂತೆ ಶಿವಸೇನೆ ಶಾಸಕರಿಗೆ ಸೂಚಿಸಿತ್ತು ಮತ್ತು ವಿಪ್ ಉಲ್ಲಂಘಿಸಿದವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು.

ಭಾನುವಾರ ಹಾಗೂ ಸೋಮವಾರ ಶಿಂಧೆ ಬಣದ ಹಾಗು ಉದ್ದವ್ ಬಣದ ಶಾಸಕರಾದ ಭರತ್ ಹಾಗು ಸುನಿಲ್ ತಮ್ಮ ತಮ್ಮ ಶಾಸಕರಿಗೆ ಪ್ರತ್ಯೇಕ ವಿಪ್ಗಳನ್ನು ಜಾರಿ ಮಾಡಿದ್ದರು ಮತ್ತು ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದರು.
ಅದಾಗ್ಯೂ ಶಿಂಧೆ ಬಣ ಸುನಿಲ್ ನೀಡಿದ್ದ ವಿಪ್ ಅನ್ನು ಧಿಕ್ಕರಿಸಿ ವಿಶ್ವಾಸಮತ ಹಾಗು ಸಭಾಧ್ಯಕ್ಷರ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿತ್ತು.
ಜುಲೈ 11 ರಂದು ನಡೆಯುವ ಸುಪ್ರೀಂ ಕೋರ್ಟ್ ವಿಚಾರಣೆ ನಂತರ ಮುಂದಿನ ಹಾದಿ ತಿಳಿಯಲಿದೆ.