ಶಿವಮೊಗ್ಗದ (Shimoga) ಹಿಂದೂ ಹರ್ಷ ಕೊಲೆ (Harsha murder case) ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೀವ ಬೆದರಿಕೆ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ಸಾಕ್ಷಿದಾರರು ದೂರು ನೀಡಿದ್ದು, ಎಫ್ಐಆರ್ (FIR) ದಾಖಲು ಮಾಡಲಾಗಿದೆ.
ಶಿವಮೊಗ್ಗದಲ್ಲಿ ಎರಡು ವರ್ಷ ಹಿಂದೆ ನಡೆದಿದ್ದ ಹರ್ಷ ಹಿಂದೂ ಕೊಲೆ ಪ್ರಕರಣದ ವಿಚಾರಣೆ ಎನ್ಐಎ (NIA) ಕೋರ್ಟ್ ನಲ್ಲಿ ನಡೆಯುತ್ತಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರರಿಗೆ ಕೋರ್ಟ್ ಗೆ ಹಾಜರಾಗದಂತೆ ಈಗಲೂ ಧಮ್ಕಿ, ಬೆದರಿಕೆ ಹಾಕಿದ ಆರೋಪ ಕೇಳಿಬಂದಿದ್ದು, ಈ ಬೆನ್ನಲ್ಲಿ ಎಫ್ಐಆರ್ ಹಾಕಲಾಗಿದೆ.
2022 ರ ಫೆಬ್ರವರಿ 20 ರಾತ್ರಿ 9 ಗಂಟೆಗೆ ಎನ್ ಟಿ ರಸ್ತೆಯ ಭಾರತೀ ಕಾಲೋನಿಯಲ್ಲಿ ಊಟಕ್ಕೆ ತೆರಳಿದ್ದ ಹರ್ಷನನ್ನ ಕೊಲೆ ಮಾಡಲಾಗಿತ್ತು.ಈ ಘಟನೆಯಲ್ಲಿ 12 ಕ್ಕೂ ಹೆಚ್ಚು ಜನರನ್ನ ಬಂಧಿಸಿ ಪೊಲೀಸರು ಎನ್ಐಎಗೆ ಪ್ರಕರಣವನ್ನ ಹಸ್ತಾಂತರಿಸಿದ್ದರು.
ಈ ಪ್ರಕರಣ ಬೆಂಗಳೂರು ಎನ್ಐಎಯಲ್ಲಿ ಈಗಲೂ ನಡೆಯುತ್ತಿದೆ.ಹರ್ಷನ ಕೊಲೆ ಪ್ರಕರಣದಲ್ಲಿ ಎ1 ಮೊಹಮ್ಮದ್ ಕಾಸಿಫ್, ಎ2 ಸೈಯದ್ ನದೀಮ್, ಎ3 ಆಸಿಫ್ ಉಲ್ಲಾ ಖಾನ್, ಎ4 ರಿಹಾನ್ ಷರೀಫ್, ಎ5 ನಿಹಾನ್, ಎ6 ಅಬ್ದುಲ್ ಅಫ್ನಾನ್ ಸೇರಿ 12 ಜನ ಆರೋಪಿಗಳನ್ನ ಮೊದಲು ಬಂಧಿಸಲಾಗಿತ್ತು.