ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಶಿಗ್ಗಾವಿ (Shiggavi) ಕ್ಷೇತ್ರದ ಬಂಡಾಯ ಶಮನ ಮಾಡೋದೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಅಸಮಾಧಾನಿತರು ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಅಜ್ಜಂಪೀರ್ ಖಾದ್ರಿ (Ajjampeer khadri) ಹಾಗೂ ಮಂಜುನಾಥ್ ಕುನ್ನೂರು (Manjunath kunnuru) ಸೇರಿದಂತೆ ಮೂವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಇದು ಕಾಂಗ್ರಸ್ ಅಧಿಕೃತ ಅಭ್ಯರ್ಥಿಗೆ ಸಂಕಷ್ಟ ತಂದೊಡ್ಡಿದೆ. ಈ ಬಂಡಾಯ ಶಮನ ಮಾಡೋದಕ್ಕೆ ಕಾಂಗ್ರೆಸ್ ನಾಯಕರು ಕಸರತ್ತು ನಡೆಸ್ತಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ (Cm siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (Dcm Dk Shiakumar) ಬಂಡಾಯ ಶಮನಕ್ಕೆ ಮುಂದಾಗಿದ್ದು, ಅಸಮಾಧಾನಿತರಿಗೆ ಮುಂದಿನ ದಿನಗಳಲ್ಲಿ ಸ್ಥಾನಮಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರಂತೆ. ಇತ್ತ ಅಜ್ಜಂಪೀರ್ ಖಾದ್ರಿಗೆ ಪರಿಷತ್ ಸದಸ್ಯ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.