ದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ದುರ್ವತನೆ ತೋರಿದರು ಎಂಬ ಆರೋಪದ ಮೇಲೆ 12ಜನ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಸದ್ ಟಿವಿಯ ʻಟು ದಿ ಪಾಯಿಂಟ್ʼ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಕೇರಳದ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್ ಹೇಳಿದ್ದಾರೆ.
ಸಿಪಿಐಎಮ್ನ ಇಳಮಾರನ್ ಕರೀಮ್, ಕಾಂಗ್ರೆಸ್ನ ಫುಲೋ ದೇವಿ ನೇತಮ್, ಆರ್ ಬೋರಾ, ರಾಜಮಣಿ ಪಟೇಲ್, ಸೈಯದ್ ನಾಸೀರ್ ಹುಸೇನ್ ಮತ್ತು ಅಖಿಲೇಶ್ ಪ್ರಸಾದ್ ಸಿಂಗ್, ಸಿಪಿಐನ ಬಿನೋಯ್ ವಿಶ್ವಂ, ತೃಣಮೂಲ ಕಾಂಗ್ರೆಸ್ನ ಡೋಲಾ ಸೇನ್, ಶಾಂತಾ ಚೆಟ್ರಿ, ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಮತ್ತು ಅನಿಲ್ ದೇಸಾಯಿ ಅಮಾನತುಗೊಂಡಿರುವ 12 ಜನ ಸಂಸದರು.
ಭಾನುವಾರ ಸಂಸದ್ ವಾಹಿನಿಯ ಮತ್ತೊಂದು ಕಾರ್ಯಕ್ರಮವಾದ ʻಮೇರಿ ಕಹಾನಿʼ ಕಾರ್ಯಕ್ರಮದ ನಿರೂಪಕರಾದ ಶಿವಸೇನೆಯ ಪ್ರಿಯಾಂಕ ಚತುರ್ವೇದಿ ಕಾರ್ಯಕ್ರಮವನ್ನು ಮಾಡುವುದಿಲ್ಲ ಎಂದು ಇತ್ತೀಚಿಗೆ ತ್ಯಜಿಸಿದ್ದರು. ಇದೀಗ ಸರ್ಕಾರ ನಡೆಸುವ ವಾಹಿನಿಯ ನಿರೂಪಕರಾಗಿ ವಿರೋಧ ಪಕ್ಷದ ನಾಯಕ ಶಶಿ ತರೂರ್ ಉಳಿದುಕೊಂಡಿದ್ದರು. ಈಗ ಅವರೂ ಕೂಡ ಸಂಸದರ ಅಮಾನತು ಆದೇಶವನ್ನು ಹಿಂಪಡೆಯುವವರೆಗೂ ತಾವು ಕಾರ್ಯಕ್ರಮವನ್ನ ನಡೆಸಿಕೊಡುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.
ಸಂಸದನಾಗಿ ನಾನು ಪ್ರತಿ ನಿತ್ಯ ಪ್ರತಿಭಟನಾ ನಿರತ ಸಂಸದರಿಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ಹೋಗುವಾಗ ಸಂಸದ್ ಟಿವಿಯ ಕಾರ್ಯಕ್ರಮದಲ್ಲಿ ನಾನು ನರಂತರವಾಗಿ ಭಾಗಿಯಾಗುತ್ತಿರುವುದನ್ನು ನೋಡಿದರೆ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನ ಅನುಸರಿಸುತ್ತಿದ್ದೇನ ಎಂದು ನನ್ನಗೆ ಭಾಸವಾಯಿತು ಎಂದು ತಮ್ಮ ಕಳವಳವನ್ನ ವ್ಯಕ್ತಪಡಿಸಿದ್ದಾರೆ.
ಸಂಸದ್ ಟಿವಿ ಬಗ್ಗೆ ಆರೋಪಿಸಿರುವ ಶಶಿ ತರೂರ್, ಕ್ಯಾಮರಗಳು ಹೆಚ್ಚಾಗಿ ಖಜಾನೆಯ ಮೇಲೆ ಕೇಂದ್ರಿಕರಿಸುತ್ತವೆ ಮತ್ತು ವಿರೋಧ ಪಕ್ಷಗಳನ್ನು ತೋರಿಸುವುದರಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸದೀಯ ವಾಹಿನಿಯು ತನ್ನ ವ್ಯಾಖ್ಯಾನದಲ್ಲಿ ತಿಳಿಸಿರುವಂತೆ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು ಮತ್ತು ಸಂಸತ್ತಿನ ಕಾರ್ತ ಚಟುವಟಿಕೆಗಳನ್ನು ಬಿಳುಪುಗೊಳಿಸಬಾರದು ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಿರೂಪನೆಯ ಆಹ್ವಾನವನ್ನು ಸ್ವೀಕರಿಸುವುದು ಭಾರತದ ಪ್ರಜಾಪ್ರಭುತ್ವದ ಅಭ್ಯಾಸಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಅದಾಗ್ಯೂ ಹಿಂದಿನ ಮಳೆಗಾಲದ ಅಧಿವೇಶನದಲ್ಲಿ ದುರ್ವತನೆ ತೋರಿದ್ದರು ಎಂಬ ಆರೋಪದ ಮೇಲೆ 12ಜನ ರಾಜ್ಯಸಭಾ ಸಂಸದರನ್ನು ದೀರ್ಘಕಾಲ ಅಮಾನತಿನಲ್ಲಿಟ್ಟಿರುವುದು ದ್ವಿಪಕ್ಷೀಯ ಮನೋಭಾವವನ್ನು ಎತ್ತಿ ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಟಿವಿ ಕಾರ್ಯಕ್ರಮದ ನಿರೂಪಕರಾಗಿ ಶಶಿ ತರೂರ್ರವರು ಅನೇಕ ಜನ ಗಣ್ಯ ವ್ಯಕ್ತಿಗಳ ಸಂದರ್ಶನವನ್ನ ನಡೆಸಿದ್ದಾರೆ. ಇತ್ತೀಚಿಗೆ ಅಮಾನತು ಆದೇಶವನ್ನ ಖಂಡಿಸಿ ಚತುರ್ವೇದಿರವರು ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಸಭಾಪತಿಗಳಾದ ವೆಂಕಯ್ಯ ನಾಯ್ಡುರವರಿಗೆ ಪತ್ರ ಬರೆದಿರುವ ಅವರು ತನ್ನನ್ನು ಅಮಾನತುಗೊಳಿಸಿರುವ ನಿರ್ಧಾರವು ಸಂಸತ್ತು ಮತ್ತು ಸಂಸದೀಯ ಆದೇಶಗಳ ನಿಯಮಗಳನ್ನು ಕಡೆಗಣಿಸಿದೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ.
ಸಂಸದರನ್ನು ಅಮಾನತು ಮಾಡಿದ್ದು ಏಕೆ?
ಈ ವರ್ಷ ಆಗಷ್ಟನಲ್ಲಿ ನಡೆದ ಮುಂಗಾರು ಅಧಿವೇಶನದ ಸಮಯದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಪೆಗ್ಗಾಸಸ್ ವಾರ್ ಜೋರಾಗಿ ನಡೆದಿತ್ತು. ರಾಜಕಾರಣಿಗಳು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ನಿಗಾ ಇದಲು ಪೆಗ್ಗಾಸಸ್ಅನ್ನು ಬಳಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಇದು ಸದನದಲ್ಲಿ ಭಾರೀ ಗದ್ದಲವನ್ನ ಎಬ್ಬಿಸಿತ್ತು. ಅವಧಿಗೂ ಮೊದಲೇ ಅಧಿವೇಶನವನ್ನ ಮೊಟಕುಗೊಳಿಸಲಾಗಿತ್ತು.
ಆಗಷ್ಟ್ 11ರಂದು ರಾಜ್ಯಸಭೆಯಲ್ಲಿ ಸಂಸದರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಯ ನಂತರ ಜಂಟಿ ಹೇಳಿಕೆಯನ್ನ ಬಿಡುಗಡೆ ಮಾಡಿದ ಸಂಸದರು ಮಹಿಳಾ ಸಂಸದರು ಸೇರಿದಂತೆ ಪ್ರತಿಪಕ್ಷದ ನಾಯಕರ ಮೇಲೆ ದಾಳಿ ನಡೆಸಲು ಹೊರಗಿನಿಂದ ಜನರನ್ನು ಕರೆಸಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷದವರು ವಿನಾಕಾರಣ ಗದ್ದಲವನ್ನ ಎಬ್ಬಿಸುತ್ತಿದ್ದಾರೆ ಎಂದು ಪ್ರತಿಯಾಗಿ ಆರೋಪಿಸಿದ್ದರು.
ಅಧಿವೇಶನ ಮುಗಿದ ನಂತರ ಕೇಂದ್ರ ಸಚಿವರ ನಿಯೋಗವೊಂದು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿಯಾದ ವೆಂಕಯ್ಯನಾಯ್ಡುರವರನ್ನು ಭೇಟಿ ಮಾಡಿ ಕ್ರಮ ಜರುಗಿಸುವಂತೆ ಒತ್ತಾಯ ಮಾಡಿತ್ತು. ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಾಯ್ಡುರವರು ನಿಯೋಗಕ್ಕೆ ಭರವಸೆ ನೀಡಿದ್ದರು.