ಶುಕ್ರವಾರ ಷೇರು ಮಾರ್ಕೆಟ್ ಹೂಡಿಕೆದಾರರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಷೇರು ಸೂಚ್ಯಂಕ ಏರಿಳಿತದಿಂದ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತಕಂಡಿದೆ. ಶುಕ್ರವಾರ ಎನ್‌ಎಸ್‌ಇ ನಿಫ್ಟಿ 50 ದಿನದ ವಹಿವಾಟನ್ನು 22,456.65 ಪಾಯಿಂಟ್‌ಗಳಿಗೆ ಅಂತ್ಯಗೊಳಿಸಿತು. ಇನ್ನು ಬಿಎಸ್‌ಇ ಸೆನ್ಸೆಕ್ಸ್ 73,846 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಇದರಿಂದ ಹೂಡಿಕೆದಾರರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದರು ಎಂದು ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆ ವಹಿವಾಟು ಉತ್ತಮವಾಗಿತ್ತು. ಆದರೆ, ಶುಕ್ರವಾರ ದಿಢೀರನೆ ಕುಸಿತ ಕಂಡಿತು.
ಷೇರು ಮಾರುಕಟ್ಟೆಯಲ್ಲಿ (Stock Market) ಶುಕ್ರವಾರ (ಮೇ 3) ತಲ್ಲಣ ಸೃಷ್ಟಿಯಾಗಿದ್ದು, ಎನ್‌ಎಸ್‌ಇ ನಿಫ್ಟಿ (NSE Nifty) ಹಾಗೂ ಬಿಎಸ್‌ಇ ಸೆನ್ಸೆಕ್ಸ್ ಭಾರಿ ಕುಸಿತ ಕಂಡ ಕಾರಣ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಎನ್‌ಎಸ್‌ಇ ನಿಫ್ಟಿ 50 ಸುಮಾರು 172.35 ಪಾಯಿಂಟ್‌ಗಳ ಕುಸಿತ ಕಂಡರೆ, ಬಿಎಸ್‌ಇ ಸೆನ್ಸೆಕ್ಸ್ (BSE Sensex) 733 ಪಾಯಿಂಟ್‌ಗಳ ಕುಸಿತ ಕಂಡಿದೆ. ಆರಂಭದಲ್ಲಿ ಲಾಭ ಕಂಡ ಹೂಡಿಕೆದಾರರು ದಿನದ ಅಂತ್ಯಕ್ಕೆ ನಷ್ಟ ಅನುಭವಿಸಿದರು.ಎನ್‌ಎಸ್‌ಇ ನಿಫ್ಟಿ 50 ದಿನದ ವಹಿವಾಟನ್ನು 22,456.65 ಪಾಯಿಂಟ್‌ಗಳಿಗೆ ಅಂತ್ಯಗೊಳಿಸಿತು. ಇನ್ನು ಬಿಎಸ್‌ಇ ಸೆನ್ಸೆಕ್ಸ್ 73,846 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತು.