ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು 2004, 2009, 2014 ಮತ್ತು 2020 ರಲ್ಲಿ ಸಲ್ಲಿಸಿದ ಚುನಾವಣಾ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅವರಿಗೆ ನೋಟಿಸ್ ಕಳುಹಿಸಿದೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯನ್ನು ಒಳಗೊಂಡ ಮಹಾ ವಿಕಾಸ್ ಅಘಾಡಿ ಒಕ್ಕೂಟವನ್ನು ಕೆಡವಿ, ಬಿಜೆಪಿಯ ಬೆಂಬಲದೊಂದಿಗೆ ಬಂಡಾಯ ಶಿವಸೇನಾ ಶಾಸಕ ಏಕನಾಥ್ ಶಿಂಧೆ ಅವರಿಂದ ಸರ್ಕಾರ ರಚನೆ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ.
ನೋಟಿಸ್‌ಗೆ ಪ್ರತಿಕ್ರಿಯಿಸಿದ ಪವಾರ್, ಮರಾಠಿಯಲ್ಲಿ ಟ್ವೀಟ್ ಮಾಡಿರುವ ಅವರು: “ಇಂದು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ಏಜೆನ್ಸಿಗಳ ಸಹಾಯವನ್ನು ಬಳಸಲಾಗುತ್ತಿದೆ. ವಿಧಾನಸಭೆಯ ಹಲವು ಸದಸ್ಯರು ವಿಚಾರಣೆಯ ನೋಟಿಸ್ ಅನ್ನು ಸ್ವೀಕರಿಸಿದ್ದಾರೆ. ಈ ಹೊಸ ವಿಧಾನ ಇಲ್ಲಿ ಪ್ರಾರಂಭವಾಗಿದೆ. ಐದು ವರ್ಷಗಳ ಹಿಂದೆ ನಮಗೆ ಇಡಿ ಹೆಸರೇ ತಿಳಿದಿರಲಿಲ್ಲ, ಇಂದು ಹಳ್ಳಿಗಳಲ್ಲಿಯೂ ಜನರು ನಿಮ್ಮ ಹಿಂದೆ ಇಡಿ ಇರುತ್ತದೆ ಎಂದು ತಮಾಷೆ ಮಾಡುತ್ತಿದ್ದಾರೆ ಎಂದು ಹೇಳಿದ್ಧಾರೆ.

ನಂತರ ಮಾತನಾಡಿದ ಅವರು, “ಈ ಏಜೆನ್ಸಿಗಳನ್ನು ವಿಭಿನ್ನ ರಾಜಕೀಯ ದೃಷ್ಟಿಕೋನ ಹೊಂದಿರುವ ಜನರ ವಿರುದ್ದ ಬಳಸಲಾಗುತ್ತಿದೆ. ನನಗೆ ಆದಾಯ ತೆರಿಗೆಯಿಂದ ಅಂತಹ ನೋಟಿಸ್ ಬಂದಿದೆ. ಅವರು ಈಗ 2004 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿರುವ ಮಾಹಿತಿಯ ಬಗ್ಗೆ ಈಗ ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದರು.
2009ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದೆ, 2009ರ ನಂತರ 2014ರ ರಾಜ್ಯಸಭಾ ಚುನಾವಣೆಗೆ ನಿಂತಿದ್ದೆ, ಈಗ 2020ರ ರಾಜ್ಯಸಭಾ ಚುನಾವಣೆಯ ಅಫಿಡವಿಟ್‌ಗೆ ಸಂಬಂಧಿಸಿದಂತೆ ನೋಟಿಸ್ ಕೂಡ ಬಂದಿದೆ. ನನ್ನ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದು ಹೇಳಿದ್ದಾರೆ.