2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನಂತ್‌ಕುಮಾರ್ ಹೆಗಡೆಗೆ ಮಿಸ್ ಆದ ಹಿನ್ನಲೆ ರಾಜ್ಯ ಬಿಜೆಪಿ ನಾಯಕರಿಗೆ ಅನಂತ್‌ಕುಮಾರ್ ಹೆಗಡೆ ಮನವೊಲಿಸಲು ಹೈಕಮಾಂಡ್ ನಾಯಕರು ಸೂಚಿಸಿದ್ದರು.ಹೈಕಮಾಂಡ್ ನಾಯಕರ ಆದೇಶದಂತೆ ಅನಂತ್‌ಕುಮಾರ್ ಹೆಗಡೆ ನಿವಾಸಕ್ಕೆ ಹೋದ ನಾಯಕರಿಗೆ ಅನಂತ್‌ಕುಮಾರ್ ಹೆಗಡೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.ಪ್ರತಿಧ್ವನಿಗೆ ರಾಜ್ಯ ಬಿಜೆಪಿ ನಾಯಕರ ಮೂಲದಿಂದಲೇ ಮಾಹಿತಿ ಲಭ್ಯವಾಗಿದ್ದು ಬಿಜೆಪಿ ನಾಯಕರು ಈ ಬಗ್ಗೆ ಬೇಸರಗೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ. ಈ ಪಟ್ಟಿಯಲ್ಲಿ ಹಾಲಿ ಸಂಸದ ಅನಂತ್‌ಕುಮಾರ್ ಹೆಗಡೆ ಬದಲಿಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಘೋಷಣೆಯಾಗಿದೆ.ಟಿಕೆಟ್ ಘೋಷಣೆ ಬೆನ್ನಲ್ಲೇ, ಉತ್ತರ ಕನ್ನಡ ಬಿಜೆಪಿ ಉಸ್ತುವಾರಿ ಹರತಾಳು ಹಾಲಪ್ಪಗೆ ಕರೆ ಮಾಡಿದ್ದ ಬಿಜೆಪಿ ಹೈಕಮಾಂಡ್ ನಾಯಕರು ಅನಂತ್ ಕುಮಾರ್ ಹೆಗ್ಡೆಯನ್ನು ಸಮಾಧಾನಪಡಿಸಲು ಸೂಚನೆ ನೀಡಿದ್ದರು.
ಮೊದಲು ಅನಂತ್‌ಕುಮಾರ್ ಹೆಗಡೆ ನಿವಾಸಕ್ಕೆ ತೆರಳಿ, ಅವರನ್ನು ಪ್ರಚಾರದ ಕಾರ್ಯಕ್ಕೆ ಕರೆ ತರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದರು. ಹೈಕಮಾಂಡ್ ನಾಯಕರ ಸೂಚನೆಯಂತೆ ಹರತಾಳು ಹಾಲಪ್ಪ ಅನಂತ್‌ಕುಮಾರ್ ಹೆಗಡೆ ನಿವಾಸಕ್ಕೆ ತೆರಳಿ ಮನವೊಲಿಸೋ ಪ್ರಯತ್ನ ಮಾಡಿದ್ದಾರೆ. ಆದ್ರೆಹಾಲಪ್ಪ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಕುಳಿತುಕೊಳ್ಳಲು ಅನಂತ್‌ಕುಮಾರ್ ಹೆಗಡೆ ಸೂಚಿಸಿದ್ದಾರೆ. ಬಳಿಕ ಅನಂತ್‌ಕುಮಾರ್ ಹೆಗಡೆ ಜೊತೆಗಿನ ಹರತಾಳು ಹಾಲಪ್ಪ ಫೋಟೋ ಕ್ಲಿಕ್ಕಿಸಿದ ಹಾಲಪ್ಪ ಆಪ್ತ ಸಹಾಯಕ ಮುಂದಾದಾಗ, ತಕ್ಷಣವೇ ಅನಂತ್‌ಕುಮಾರ್ ಹೆಗಡೆ. ಸಿಟ್ಟಿಗೆದ್ದಿದ್ದಾರೆ.ಮೊದಲು ಆಪ್ತ ಸಹಾಯಕನ ಕೈ ಯಲ್ಲಿದ್ದ ಮೊಬೈಲ್ ಕಸಿದುಕೊಂಡ ಅನಂತ್‌ಕುಮಾರ್ ಹೆಗಡೆ ತಮ್ಮ ಆಪ್ತ ಸಹಾಯಕನಿಗೆ ಆ ಮೊಬೈಲ್ ಕೊಟ್ಟು, ಫೋಟೋ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಆ ನಂತರಬಳಿಕ ಬಂದಿದ್ದೇನು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ .ನಿಮ್ಮನ್ನು ನೋಡಲು ಬಂದೇ ಎಂದ ಹಾಲಪ್ಪ ಮಾತಿಗೆ ನೋಡಿದ್ದು ಆಯ್ತಲ್ಲ ಹೊರಡಿ ಎಂದು ಅನಂತ್‌ಕುಮಾರ್ ಹೆಗಡೆ ಅಲ್ಲಿಂದ ಕಳುಹಿಸಿದ್ದಾರಂತೆ.
ಇನ್ನು ಇಂದು ಅನಂತ್‌ಕುಮಾರ್ ಹೆಗಡೆ ನಿವಾಸಕ್ಕೆ ತೆರಳಿದ್ದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಕೊಟ್ಟು ಅರ್ಧ ಘಂಟೆ ಕಾದು ಕುಳಿತರು ಬಾಗಿಲು ತೆರೆಯದೇ ಅನಂತ್‌ಕುಮಾರ್ ಹೆಗಡೆ ಸತಾಯಿಸಿದ್ದಾರೆ.ಹೀಗೆ ಯಾರೇ ಮನೆಗೆ ಬಂದ್ರೂ ಬಾಗಿಲು ತೆರೆಯದೇ ಅವಮಾನ ಮಾಡಿದ ಅನಂತ್‌ಕುಮಾರ್ ಹೆಗಡೆ ಆ ಮೂಲಕ ತಮ್ಮ ಅಸಮಾಧಾನದ ಬಿಸಿಯನ್ನು ಹೈಕಮಾಂಡ್ ಗೆ ಮುಟ್ಟಿಸಿದ್ದಾರೆ.