ಕೆಕೆಆರ್ ಕಡೆಯಿಂದ ಸುಹಾನಾ ಖಾನ್ ಅವರಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ.
ಇಂದು (ಮೇ 22) ಸುಹಾನಾ ಖಾನ್ ಗೆ ಜನ್ಮದಿನ. ಸುಹಾನಾ ಇತ್ತೀಚೆಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ‘ದಿ ಆರ್ಚೀಸ್’ ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರ ನಟನೆಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು.
ಮೇ 21ರಂದು ಶಾರುಖ್ ಒಡೆತನದ ಕೋಲ್ಕತ್ತಾ ನೈಟ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಫೈನಲ್ ತಲುಪಿದೆ. ಈ ಪಂದ್ಯ ವೀಕ್ಷಿಸಲು ಸುಹಾನಾ ಖಾನ್ ಕೂಡ ತಂದೆ ಶೂರೂಖ್ ಜೊತೆ ಆಗಮಿಸಿದ್ದರು. ಈ ಮೂಲಕ ಸುಹಾನಾ ಬರ್ತ್ಡೇಗೆ ಕೆಕೆಆರ್ ಗೆಲುವಿನ ಉಡುಗೊರೆ ನೀಡಿದಂತೆ ಆಗಿದೆ.
ಸುಹಾನಾ ತಂದೆ ಶಾರುಖ್ ಖಾನ್ ಅವರ ಆಸ್ತಿ 6300 ಕೋಟಿ ರೂಪಾಯಿಗೂ ಅಧಿಕವಾಗಿದೆ. ತಮ್ಮ ಆಸ್ತಿಯಲ್ಲಿ ಒಂದಷ್ಟನ್ನು ಶಾರುಖ್ ಖಾನ್ ಮಗಳ ಹೆಸರಿಗೆ ಬರೆದಿದ್ದಾರೆ. ಸುಹಾನಾ ಹೆಸರಲ್ಲಿ ಒಂದಷ್ಟು ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದಲೇ ಸುಹಾನಾ ಖಾನ್ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಿದೆ. ಶಾರುಖ್ ಖಾನ್ ಮಗಳು ಎನ್ನುವ ಕಾರಣಕ್ಕೆ ಕೆಲವು ಬ್ರ್ಯಾಂಡ್ ಗಳು ಸುಹಾನಾ ಖಾನ್ ಬಳಿ ಬಂದಿವೆ. ಹೀಗಾಗಿ ಅವರಿಗೆ ಮತ್ತಷ್ಟು ಹಣ ಹರಿದು ಬರುತ್ತಿದೆ.