ಸತತ 30ರಿಂದ 40 ವರ್ಷ ದುಡಿದು ಜೀವನ ಸವೆಸಿದ ಮೇಲೂ ಅಂತ್ಯಕಾಲದಲ್ಲಿ ಕೈಯಲ್ಲಿ ಬಿಡುಗಾಸಿಲ್ಲದಂತೆ ಆಗಬಾರದು ಅಂದ್ರೆ , ಸರಿಯಾದ – ಸುರಕ್ಷಿತವಾದ ಹೂಡಿಕೆ ಹೊಂದಿರಬೇಕು. ಹೂಡಿಕೆ ಮಾಡಬೇಕು ಎಂದರೆ ಬಂಡವಾಳ ಇರಬೇಕು ! ಹಾಗಾಗೀ ಉಳಿತಾಯ ಬಹಳ ಮುಖ್ಯ.
ಈ ಫಿಕ್ಸೆಡ್ ಡೆಪಾಸಿಟ್ ವ್ಯವಸ್ಥೆ ಹಿರಿಯ ನಾಗರೀಕರಿಗೆ ಬಹಳ ಸರಳ, ಸುರಕ್ಷಿತ ಮತ್ತು ನಿರಂತರ ಆದಾಯ ನೀಡಬಲ್ಲ ಹೂಡಿಕೆಯಾಗಿದೆ. ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ನೀವು ಠೇವಣಿ ಮಾಡುವ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಅದರಲ್ಲೂ ಕೂಡ ಹಿರಿಯ ನಾಗರೀಕರಿಗೆ ಬ್ಯಾಂಕ್ಗಳು ಸಹಜ ಗ್ರಾಹಕರಿಗೆ ನೀಡುವ ಬಡ್ಡಿಗಿಂತ ಹೆಚ್ಚಿನ ಬಡ್ಡಿ ದರವನ್ನೂ ನೀಡುತ್ತವೆ. ಸೋ ಇದು ಕೂಡ ಹಿರಿಯ ನಾಗರೀಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಿರಿಯ ನಾಗರಿಕರಿ FD ಮೇಲೆ ಹೂಡಿಕೆ ಸರಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಕರ್ನಾಟಕಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ Fixed Deposit ಮೇಲೆ 7.5 ರಿಂದ 8% ವರೆಗೆ ಬಡ್ಡಿದರ ನೀಡಲಾಗುವುದು. ಆದರೆ ಖಾಸಗಿ ಬ್ಯಾಂಕುಗಳು ICICI, HDFC, Axis Bank ನಲ್ಲಿ 8.5% ವರೆಗೂ ಕೂಡ ಬಡ್ಡಿದರ ಸಿಗಲಿದೆ. ಆದ್ರೆ ನೀವು 9.5% ಬಡ್ಡಿ ನಿಮ್ಮದಾಗಿಸಿಕೊಳ್ಳಬೇಕು ಅಂದ್ರೆ ,ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳ ಮೊರೆಹೋಗಬೇಕು.
ಉದಾಹರಣೆಗೆ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ನಲ್ಲಿ 444ದಿನದ ಎಫ್ಡಿ ಗೆ ಹಿರಿಯ ನಾಗರಿಕರಿಗೆ ಮೇಲೆ 9% ಬಡ್ಡಿ ನೀಡಲಾಗುತ್ತದೆ. ಹಾಗೇ ಉಜ್ಜೀವನ್ ಸ್ಮಾಲ್ ಫೈನಾನ್ಸ್ ನಲ್ಲಿ ಹಿರಿಯ ನಾಗರಿಕರಿಗೆ FD ಮೇಲೆ 15ತಿಂಗಳ ಅವಧಿಗೆ 9% ನಷ್ಟು ಬಡ್ಡಿದರ ನಿಮ್ಮದಾಗುತ್ತದೆ. ಉಳಿದ ಹಾಗೇ ಸೂರ್ಯೋದಯ ಸ್ಮಾಲ್ ಫೈನಾನ್ಸ್ ನಲ್ಲಿ 9.25% ಬಡ್ಡಿ ನೀಡಿದರೆ , ಇತ್ತ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಬರೋಬ್ಬರಿ 9.50% ಬಡ್ಡಿ ದೊರೆತುತ್ತದೆ. ಸೋ ನಿಮ್ಮ ಆಯ್ಕೆ ಜಾಣ್ಮೆಯಿಂದ ಇರಲಿ .