ಹಿರಿಯ ನಟ ಸರಿಗಮ ವಿಜಿ (Sarigama viji) ವಿಧಿವಶರಾಗಿದ್ದಾರೆ. ಹಿರಿಯ ಕಲಾವಿದ ಸರಿಗಮ ವಿಜಿ ಅವರಿಗೆ 76 ವರ್ಷ ವಯಸ್ಸಾಗಿತ್ತು. ವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದವು.ಸರಿಗಮ ವಿಜಿ ಅವರನ್ನ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರಿಗೆ ಕಫ ಹೆಚ್ಚಾಗಿ ನ್ಯೂಬೊಲೈಜೇಶನ್ ಮಾಡಲಾಗಿತ್ತು.ಆ ನಂತರ ಅದು ನೀರಾಗಿ ಲಂಗ್ಸ್ ಸೇರಿತ್ತು. ಇದಷ್ಟೇ ಅಲ್ಲದೆ ಮಲ್ಟಿಪಲ್ ಆರ್ಗನ್ ಡ್ಯಾಮೇಜ್ ಆಗಿ ಈ ರೀತಿ ಸಮಸ್ಯೆ ಆಗಿತ್ತು. ಹೀಗಾಗಿ ತೀವ್ರ ನಿಗಾ ಘಟಕದಲ್ಲಿರಿಸಿ ಸರಿಗಮ ವಿಜಿ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಆದ್ರೆ ಇಂದು (ಜ.15) ಬೆಳಿಗ್ಗೆ 9:30 ರ ಸುಮಾರಿಗೆ ಸರಿಗಮ ವಿಜಿ ಇಹಲೋಕ ತ್ಯಜಿಸಿದ್ದಾರೆ. ಇಂದು ಮಧ್ಯನ ಮಹಾಲಕ್ಷ್ಮಿ ಲೇಔಟ್ ನಿವಾಸಕ್ಕೆ ಪಾರ್ಥೀವ ಶರೀರ ತರಲಾಗುತ್ತೆ. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸರಿಗಮ ವಿನಿ ಅವರು 250 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ಬಹುಮುಖ ಪ್ರತಿಭೆಯಾಗಿದ್ದರು. ಕೇವಲ ನಟನೆ ಮಾತ್ರವಲ್ಲದೆ, ನಿರ್ದೇಶನ ಮತ್ತು ಬರವಣಿಗೆ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಸುಮಾರು 75 ಕ್ಕೂ ಅಧಿಕ ಸಿನಿಮಾಗಳಿಗೆ ಅವರು ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ಆದ್ರೆ ಬಹು ಅಂಗಾಗ ವೈಫಲ್ಯದಿಂದ ಸರಿಗಮ ವಿಜಿಯವರು ವಿಧಿವಶರಾಗಿದ್ದು, ಚಿತ್ರ ರಂಗದ ಗಣ್ಯರು ಮತ್ತು ಕೆಲ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.