ಕಳೆದ ಕೆಲವು ದಿನಗಳಿಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಗದ್ದಲ ಎಬ್ಬಿಸಿರುವ ಕೋಮು ಗಲಭೆ ಕುರಿತಾಗಿ ವಿವಿಧ ಮಠಗಳ ಮಠಾಧೀಶರು ಧ್ವನಿ ಎತ್ತಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಶ್ರೀಗಳ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಸಮಾಜದಲ್ಲಿ ಕೋಮು ಸೌಹಾರ್ದ ಕದಡುವಂತಹ ಅಹಿತಕರ ಘಟನೆಗಳು ನಡೆಯುತಿದ್ದರು ಸಹ ಮಠಾಧೀಶರು ಮೌನ ವಹಿಸುವುದು ಸರಿಯಲ್ಲ ಮಠಗಳು ಸಮಾನತೆಯ ಪ್ರತೀಕ. ಮಠ ಮಂದಿರಗಳು ಎಲ್ಲಾ ಸಮುದಾಯಗಳ ಹಾಗೂ ತುಳಿತಕ್ಕೆ ಒಳಗಾದವರ ಪರ ಧ್ವನಿ ಎತ್ತಬೇಕು ಮಠಗಳು ಸಮಾನತೆಯ ಪ್ರತೀಕ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.