• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, September 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದ 17 ಡ್ಯಾಂಗಳಿಗೆ ಭದ್ರತೆ.. ಬೆಳಗ್ಗೆ ಎಲ್ಲಾ ದೇಗುಲಗಳಲ್ಲೂ ಪೂಜೆ..

ಕೃಷ್ಣ ಮಣಿ by ಕೃಷ್ಣ ಮಣಿ
May 8, 2025
in Top Story, ದೇಶ, ವಿಶೇಷ, ಶೋಧ
0
ರಾಜ್ಯದ 17 ಡ್ಯಾಂಗಳಿಗೆ ಭದ್ರತೆ.. ಬೆಳಗ್ಗೆ ಎಲ್ಲಾ ದೇಗುಲಗಳಲ್ಲೂ ಪೂಜೆ..
Share on WhatsAppShare on FacebookShare on Telegram

ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮುಜುರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವಂತೆ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ‌ ನೀಡಿದ್ದಾರೆ. ದೇಶಕ್ಕಾಗಿ, ಸೈನಿಕರಿಗೆ ಆರೋಗ್ಯ ಶಕ್ತಿ ನೀಡುವುದಕ್ಕಾಗಿ ದೇವರಲ್ಲಿ ವಿಶೇಷ ಪೂಜೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಗುರುವಾರ‌ ಬೆಳಗ್ಗೆ 8:30 ರಿಂದ 9 ಗಂಟೆ ಅವಧಿಯಲ್ಲಿ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಬನಶಂಕರಿ ದೇವಸ್ಥಾನದಲ್ಲಿ ಬೆಳಗ್ಗೆ 10.30 ರಿಂದ 11 ಗಂಟೆವರೆಗೆ ವಿಶೇಷ ಪೂಜೆ ಮಾಡಲಾಗುತ್ತದೆ ಎನ್ನಲಾಗಿದೆ. ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಯೋಧರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ADVERTISEMENT

ರಾಷ್ಟ್ರದ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ರಾಜ್ಯದಲ್ಲಿರುವ 17 ಅಣೆಕಟ್ಟುಗಳಿಗೆ ಬಿಗಿ ಭದ್ರತೆ ನೀಡುವಂತೆ ಆದೇಶ ಮಾಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಹೆಚ್ಚಿನ ಭದ್ರತೆ ಒದಗಿಸಲು ಆದೇಶ ಮಾಡಿದ್ದು, ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟುಗಳಿಗೆ ಭದ್ರತೆ ಕೊಡಬೇಕು ಎಂದು ಸೂಚನೆ ಕೊಡಲಾಗಿದೆ. ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡು ಡ್ಯಾಂಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೆ ಹೊಣೆಗಾರರು ಎಂದು ಎಚ್ಚರಿಕೆ ನೀಡಲಾಗಿದೆ.

ಆಪರೇಷನ್ ಸಿಂಧೂರ್ ವಿಚಾರವಾಗಿ ಸ್ಪೀಕರ್ ಯು.ಟಿ ಖಾದರ್ ಮಾತನಾಡಿದ್ದು, ಭಯೋತ್ಪಾದನೆ ನಮ್ಮ ದೇಶಕ್ಕೂ ಮಾರಕ, ಈ ಭಯೋತ್ಪಾದನೆ ಬುಡ ಸಮೇತ ಕಿತ್ತು ಹಾಕಬೇಕು. ಯಾರು ಭಯೋತ್ಪಾದನೆಗೆ ಬೆಂಬಲ ಕೊಡ್ತಾರೆ ಅವರಿಗೆ ತಕ್ಕ ಪಾಠ ಕಲಿಸಬೇಕು. ಸೈನಿಕರು ಉತ್ತಮ‌ ಕೆಲಸ ಮಾಡಿದ್ದು, ನಾವೆಲ್ಲರೂ ಒಗ್ಗಟ್ಟನ್ನ ಪ್ರದರ್ಶಿಸಬೇಕು. ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಪಡ್ತಿದ್ದೇವೆ‌. ನಮ್ಮ ದೇಶ ಅದ್ಭುತ ಜಯ ಗಳಿಸಬೇಕು. ಪರೋಕ್ಷ ಬೆಂಬಲ ಕೊಡುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕು. ಬೇರೆಯವರಿಗೆ ಎಚ್ಚರಿಕೆ ಗಂಟೆಯಾಗಬೇಕು. ಕೇಂದ್ರ ಸರ್ಕಾರಕ್ಕೆ ಎಲ್ಲಾ ಪ್ರತಿ ಪಕ್ಷಗಳು ಬೆಂಬಲ ನೀಡಬೇಕು. ಸೈನಿಕರು ವಿಜಯ ಗಳಿಸಲು ಪ್ರಾರ್ಥನೆ ಮಾಡಬೇಕು. ದೇಶದ ಹಿತರಕ್ಷಣೆಗೆ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದಿದ್ದಾರೆ.

ಆಪರೇಷನ್ ಸಿಂಧೂರ ಬಗ್ಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಮಿತ್‌ ಶಾ, ಪಹಲ್ಗಾಮ್ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ಮೇಲೆ ದಾಳಿ ಆದ್ರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸರ್ವ ಸನ್ನದ್ಧವಾಗಿದೆ. ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ನಮ್ಮ ಸರ್ಕಾರ ಬದ್ಧವಾಗಿದೆ. ಆಪರೇಷನ್‌ ಸಿಂಧೂರದಲ್ಲಿ ಪಾಲ್ಗೊಂಡ ಎಲ್ಲಾ ಸೇನಾ ಸಿಬ್ಬಂದಿಗೆ ಅಭಿನಂದನೆಗಳು ಅಂತ ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ.

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ದಾಳಿ ಬಗ್ಗೆ ಮಾತನಾಡಿದ್ದು, ನಾವು ಕಾರ್ಯಕಾರಿಣಿ ಸದಸ್ಯರು ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ನಮ್ಮ ಸೇನೆಗೆ ಸಂಪೂರ್ಣ ಬೆಂಬಲ ನೀಡ್ತೇವೆ. ಅವರಿಗೆ ಅಭಿನಂದನೆಗಳು. ಕಾಂಗ್ರೆಸ್‌ ಪಾರ್ಟಿ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

Tags: # karnataka state government employees#Indepenedent India
Previous Post

ಭಾರತದ ಮೇಲೆ ದಂಡೆತ್ತಿ ಬರುತ್ತಾ ಪಾಪಿ ಪಾಕಿಸ್ತಾನ..?

Next Post

ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ

Related Posts

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಮಧು ಬಂಗಾರಪ್ಪ ಆಪ್ತರ ವಿರುದ್ಧ ₹25 ಲಕ್ಷ ಲಂಚದ ಆರೋಪ !
Top Story

ಶಿವಮೊಗ್ಗ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ; ಮಧು ಬಂಗಾರಪ್ಪ ಆಪ್ತರ ವಿರುದ್ಧ ₹25 ಲಕ್ಷ ಲಂಚದ ಆರೋಪ !

by ಪ್ರತಿಧ್ವನಿ
September 23, 2026
0

ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿದ್ದ ಆಂತರಿಕ ಅಸಮಾಧಾನ ಇದೀಗ ಬಹಿರಂಗವಾಗಿದೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (SBUDA) ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಜಿಲ್ಲಾ ಉಸ್ತುವಾರಿ...

Read moreDetails
ಅಟ್ಟಿಕಾ ಗೋಲ್ಡ್ ಕಂಪನಿಗೆ ED ಶಾಕ್; 19ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

ಅಟ್ಟಿಕಾ ಗೋಲ್ಡ್ ಕಂಪನಿಗೆ ED ಶಾಕ್; 19ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ

September 23, 2026
ದರ್ಶನ್‌ ವಿರುದ್ಧದ ಪ್ರಕರಣದಲ್ಲಿ ಪ್ರದೋಷ್‌ ಸಾಕ್ಷಿ; ಹೈಕೋರ್ಟ್‌ನಲ್ಲಿ ನಡೆದ ವಾದವೇನು?

ದರ್ಶನ್‌ ವಿರುದ್ಧದ ಪ್ರಕರಣದಲ್ಲಿ ಪ್ರದೋಷ್‌ ಸಾಕ್ಷಿ; ಹೈಕೋರ್ಟ್‌ನಲ್ಲಿ ನಡೆದ ವಾದವೇನು?

September 23, 2026
ಇಂಡಿ ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆ

ಇಂಡಿ ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ ರಾಜೀನಾಮೆ

September 23, 2026
ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

ಸದನದಲ್ಲಿ ಭೀಕರ ಬರ, ರೈತರ ಸಂಕಷ್ಟ ಬದಿಗೊತ್ತಿ ನಟ ಅನಂತ್ ನಾಗ್ ವಿಚಾರಕ್ಕೆ ಬಿಜೆಪಿ ಜಟಾಪಟಿ: ಕಲಾಪದ ಸಮಯ ವ್ಯರ್ಥಕ್ಕೆ ಆಕ್ರೋಶ

September 23, 2026
Next Post
ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ

ಅಪರಾಧಿಕ ಪ್ರಪಂಚವೂ ಸಾರ್ವಜನಿಕ ಪ್ರಜ್ಞೆಯೂ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada