• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು

ನಾ ದಿವಾಕರ by ನಾ ದಿವಾಕರ
July 25, 2025
in Top Story, ಜೀವನದ ಶೈಲಿ, ದೇಶ
0
ಸೆಕ್ಯುಲರಿಸಂ ಆರಂಭದಿಂದಲೇ ಸೂಚ್ಯವಾಗಿತ್ತು 1976ರಲ್ಲಿ ಸ್ಪಷ್ಟವಾಯಿತು
Share on WhatsAppShare on FacebookShare on Telegram

ಸೆಕ್ಯುಲರ್‌ ಸಮಾಜದಲ್ಲಿ ಮತ-ಧರ್ಮಗಳು ಸ್ವತಂತ್ರವಾಗಿರುತ್ತವೆ ಎನ್ನುವುದು ವಾಸ್ತವ

ADVERTISEMENT

ಫೈಜನ್‌ ಮುಸ್ತಫಾ

(ಮೂಲ : Secularism – implicit from day one Explicit in 1976 – ಫೈಜನ್‌ ಮುಸ್ತಫಾ                           ದ ಹಿಂದೂ 14 ಜುಲೈ 2025)

ಕನ್ನಡಕ್ಕೆ : ನಾ ದಿವಾಕರ

 “ ದೇವರು ಮೃತಪಟ್ಟಿದ್ದಾನೆ , ಮೃತ ಸ್ಥಿತಿಯಲ್ಲೇ ಇರುತ್ತಾನೆ ನಾವು ಅವನನ್ನು ಕೊಂದಿದ್ದೇವೆ ಆದಾಗ್ಯೂ ಅವನ ನೆರಳು ನಮ್ಮನ್ನು ಆವರಿಸಿರಿಸುತ್ತದೆ ” ಹೀಗೆ ಹೇಳಿದವರು ಜರ್ಮನಿಯ ಖ್ಯಾತ ತತ್ವಶಾಸ್ತ್ರಜ್ಞ ಫ್ರೆಡ್ರಿಕ್‌ ನೀತ್ಸೆ. ವಿಶ್ವದ 66 ದೇಶಗಳ ಸಂವಿಧಾನಗಳ ಪೀಠಿಕೆಯಲ್ಲಿ ದೇವರ ಉಲ್ಲೇಖ ಇದೆ.  ನಿಜ, ಭಾರತದ ಸಂವಿಧಾನವನ್ನು ಅಂಗೀಕರಿಸುವಲ್ಲಿ ನೆಹರೂ ಮುಂಚೂಣಿ ಪಾತ್ರ ವಹಿಸಿದ್ದರು. ತಮ್ಮ ಆತ್ಮಕಥೆಯಲ್ಲಿ ನೆಹರೂ ʼ ಸಂಘಟಿತ ಮತ- ಧರ್ಮ ʼ ಎನ್ನುವುದು “ ಭೀಕರ ವಿದ್ಯಮಾನವಾಗಿ ಕಾಣುತ್ತದೆ, ಏಕೆಂದರೆ ಅದು ಅಂಧ ವಿಶ್ವಾಸ ಮತ್ತು ಪ್ರತಿಗಾಮಿ ಲಕ್ಷಣಗಳ ಪರ ಇರುತ್ತದೆ, ಕರ್ಮಠ ಸಿದ್ಧಾಂತ ಮತ್ತು ಮತಾಂಧತೆ, ಮೂಢ ನಂಬಿಕೆಗಳು ಹಾಗೂ ಶೋಷಣೆಯ ಪರವಾಗಿಯೇ ಇರುತ್ತದೆ ” ಎಂದು ವ್ಯಾಖ್ಯಾನಿಸುತ್ತಾರೆ. ಧರ್ಮವನ್ನು ಕುರಿತ ನೆಹರೂ ಅವರ ಬಲವಾದ ಪ್ರತಿಪಾದನೆಗಳು, ಸ್ವತಂತ್ರ ಭಾರತವು ಸೆಕ್ಯುಲರ್‌ ನೀತಿಯನ್ನು ಆಯ್ಕೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದವು.  ಇಂದಿನ ರಾಜಕಾರಣಿಗಳ ಹಾಗೆ ರಾಜಕೀಯ ಯಶಸ್ಸಿಗಾಗಿ ನೆಹರೂ ಧರ್ಮವನ್ನು ಆಶ್ರಯಿಸಲಿಲ್ಲ.

 ಸುಪ್ರೀಂಕೋರ್ಟ್‌ ಹಲವಾರು ಸಂದರ್ಭಗಳಲ್ಲಿ, ಭಾರತದಲ್ಲಿ ಜಾತ್ಯತೀತ (Secular) ಎಂಬ ಪದವು ಫ್ರಾನ್ಸ್‌ನಲ್ಲಿರುವ ಹಾಗೆ ಧರ್ಮ ಮತ್ತು ಪ್ರಭುತ್ವವನ್ನು ಕಡ್ಡಾಯವಾಗಿ ಪ್ರತ್ಯೇಕಿಸುವುದನ್ನು ಸೂಚಿಸುವುದಿಲ್ಲ ಅಥವಾ ಅಮೆರಿಕದಲ್ಲಿರುವಂತೆ ಸ್ಥಾಪಿತವಾಗದ ಧರ್ಮದ ಕಲ್ಪನೆಯನ್ನೂ ಸೂಚಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದೆ.  ಆದಾಗ್ಯೂ ತುರ್ತುಪರಿಸ್ಥಿತಿಯ ವೇಳೆ ಸೆಕ್ಯುಲರ್‌ ಪದವನ್ನು ಕೃತ್ರಿಮವಾಗಿ ಹೇರಿರುವುದರ ಸುತ್ತ ಚರ್ಚೆಗಳು ನಡೆಯುತ್ತಲೇ ಇದ್ದು, ಅದನ್ನು ತೆಗೆದುಹಾಕುವ ತುರ್ತು ಅಗತ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಮೂಲತಃ ಭಾರತೀಯ ಸೆಕ್ಯುಲರಿಸಂ ಸಾಮ್ರಾಟ್‌ ಅಶೋಕನ ಧಮ್ಮದ ಬೇರುಗಳನ್ನು ಹೊಂದಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಉದಾತ್ತ ಚಿಂತನಾಧಾರೆಗೆ ಪೂರಕವಾಗಿಯೇ ಇದೆ. ಸಂವಿಧಾನದ ಅನುಚ್ಛೇದ 51ಎ(ಬಿ)  ಹೇಳುವಂತೆ, “ ಸ್ವಾತಂತ್ರ್ಯ ಪಡೆಯುವ ಸಲುವಾಗಿ ರಾಷ್ಟ್ರೀಯ ಆಂದೋಲನಕ್ಕೆ ಪ್ರೇರಣೆ ನೀಡಿದ ಉದಾತ್ತ ಚಿಂತನೆಗಳನ್ನು ಸದಾ ಕಾಪಾಡುವುದು ಹಾಗೂ ಎತ್ತಿಹಿಡಿಯುವುದು ”, ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯವಾಗಿರುತ್ತದೆ.

BJP: ಪೊಲೀಸರ ಮೇಲೆ ಕೈ ಮಾಡಿದ ಬಿಜೆಪಿಯ ರಾಜ್ಯಧ್ಯಕ್ಷ #pratidhvani

 ಸೆಕ್ಯುಲರಿಸಂ ಸ್ವಾಯತ್ತತೆಯ ಸಂಕೇತ

 ಹಿಂದುತ್ವದ ಪ್ರತಿಪಾದಕರು ಸಾಮಾನ್ಯವಾಗಿ, ಅಲ್ಪಸಂಖ್ಯಾತರು ಸೆಕ್ಯುಲರ್‌ ನೀತಿಗಳ ಮೂಲಕವೇ ಕೆಲವು ವಿಶೇಷ ಸವಲತ್ತುಗಳನ್ನು ಪಡೆಯುತ್ತಾರೆ , ಹಾಗಾಗಿ ಧಾರ್ಮಿಕ ವಿಚಾರಗಳಲ್ಲಿ ಪ್ರಭುತ್ವವು ತಟಸ್ಥ ನೀತಿಗೆ ತಿಲಾಂಜಲಿ ನೀಡುವ ಸಮಯ ಒದಗಿಬಂದಿದೆ ಎಂದು ಪ್ರತಿಪಾದಿಸುತ್ತಾರೆ, ದುರದೃಷ್ಟವಶಾತ್‌, ದೇವ ಪ್ರಭುತ್ವದ (Theocratic state ) ಬೆಂಬಲಿಗರು  ಅರ್ಥಮಾಡಿಕೊಳ್ಳದಿರುವ ಅಂಶವೇನೆಂದರೆ, ಸೆಕ್ಯುಲರಿಸಂ ಮೂಲತಃ ಧರ್ಮಗಳ ದೃಷ್ಟಿಯಿಂದ ಉತ್ತಮ ನೀತಿಯಾಗಿರುತ್ತದೆ ಏಕೆಂದರೆ ಅದು ಪ್ರಭುತ್ವವು ಧರ್ಮಗಳ ಮೇಲೆ ಹಸ್ತಕ್ಷೇಪ ಮತ್ತು ಆಧಿಪತ್ಯದಿಂದ ಧರ್ಮವನ್ನು ರಕ್ಷಿಸುತ್ತದೆ. ಸೆಕ್ಯುಲರ್‌ ನೀತಿಗಳಡಿ ಧರ್ಮಗಳು ಸ್ವತಂತ್ರ ಹಾಗೂ ಸ್ವಾಯತ್ತವಾಗಿರುತ್ತವೆ. ಯಾವುದೇ ಧರ್ಮವು ಪ್ರಭುತ್ವದ ಧರ್ಮವಾದರೆ̧  ಪ್ರಭುತ್ವವೇ ಅಂತಹ ಧರ್ಮದ ಮೇಲೆ ನಿಯಂತ್ರಣ ಸಾಧಿಸುತ್ತದೆ.

 ಭಾರತದ ಸೆಕ್ಯುಲರಿಸಂ ಹಿಂದೂ ಧರ್ಮದ ಸ್ವಾಯತ್ತತೆಯನ್ನು ಖಚಿತಪಡಿಸುತ್ತದೆ ಎನ್ನುವುದನ್ನು ಹಿಂದುತ್ವ ಪ್ರತಿಪಾದಕರು ಅರ್ಥಮಾಡಿಕೊಳ್ಳಬೇಕಿದೆ. ಇಸ್ಲಾಮಿಕ್‌ ಪ್ರಭುತ್ವಗಳಿಂದಲೇ ಹಲವೆಡೆ ಇಸ್ಲಾಂ ಧರ್ಮ ನಾಶವಾಗಿಲ್ಲವೇ ? ಮುಹಮ್ಮದ್‌ ಘಜ್ನಿ ಮತ್ತು ಇಲ್ತಮಿಶ್‌ ಕಲೀಫರನ್ನು ಧಿಕ್ಕರಿಸಿ  ರಾಜನ ಪಟ್ಟವನ್ನು ಗಳಿಸಿದ್ದರು.  ಮಧ್ಯಕಾಲೀನ ಭಾರತದಲ್ಲಿ (Medieval India) ಝವಾಬಿಟ್‌ ಅಥವಾ ಪ್ರಭುತ್ವ ರೂಪಿಸಿದ ಕಾನೂನುಗಳು ಶರಿಯಾ ನಿಯಮಗಳನ್ನು ಮೀರಿ ಜಾರಿಯಲ್ಲಿದ್ದವು. ಹೆನ್ರಿ VIII ದೊರೆಯು, ಆನಿ ಬೋಲೆನ್‌ಳನ್ನು ವಿವಾಹವಾಗುವ ಸಲುವಾಗಿಯೇ  ಪೋಪ್‌ನ ಅಧಿಕಾರವನ್ನು ಧಿಕ್ಕರಿಸಿ, ಆಂಗ್ಲಿಕನ್‌ ಚರ್ಚ್‌ ಸ್ಥಾಪಿಸಿ ರಾಜನನ್ನೇ ಅದರ ಮುಖ್ಯಸ್ಥನನ್ನಾಗಿ ಮಾಡಲಿಲ್ಲವೇ ? 2024ರ ಜನವರಿಯಲ್ಲಿ ನಡೆದ ರಾಮಮಂದಿರದ ಪ್ರತಿಷ್ಟಾಪನೆಯಲ್ಲಿ ಪ್ರಭುತ್ವದ ನಿರ್ಣಯಗಳೇ ಶಂಕರಾಚಾರ್ಯರುಗಳ ಧಾರ್ಮಿಕ ದೃಷ್ಟಿಕೋನದ ಮೇಲೆ ಮೇಲುಗೈ ಸಾಧಿಸಿದ್ದವು. ಯಾವುದು ಶುಭಗಳಿಗೆ ಎಂದು ಧರ್ಮ ನಿರ್ಧರಿಸಲಿಲ್ಲ ಬದಲಾಗಿ ಪ್ರಭುತ್ವ ನಿರ್ಧರಿಸಿತ್ತು.

ಆತ್ಮದ ಮೋಕ್ಷ ಅಥವಾ ಆತ್ಮಸಾಕ್ಷಾತ್ಕಾರ ಎನ್ನುವುದು ಒಂದು ಆಧುನಿಕ ಪ್ರಭುತ್ವಕ್ಕೆ ಅನಿವಾರ್ಯವೇ ? ಬ್ರಿಟನ್ನಿನ ರಾಜಕೀಯ ವಿಶ್ಲೇಷಕ ಜಾನ್‌ ಲಾಕ್‌  ತಮ್ಮ “ A Letter concerning Toleration” (1689) ಕೃತಿಯಲ್ಲಿ ಖಚಿತವಾಗಿ ಇದನ್ನು ನಿರಾಕರಿಸುತ್ತಾನೆ. ಏಕೆಂದರೆ ಪ್ರಭುತ್ವದ ಉಗಮವಾಗಿದ್ದು ಮೂಲತಃ ಪ್ರಜೆಗಳ ನಾಗರಿಕ ಹಿತಾಸಕ್ತಿಗಳನ್ನು ಅರ್ಥಮಾಡಿಕೊಂಡು, ಕಾಪಾಡಿ ಮುಂದೆ ಕೊಂಡೊಯ್ಯುವ ಸಲುವಾಗಿ ಎಂದು ಹೇಳುತ್ತಾನೆ.   ಲಾಕ್‌ ಅವರ ಅಭಿಪ್ರಾಯದಲ್ಲಿ ಅತ್ಮಗಳ ಬಗ್ಗೆ ಕಾಳಜಿ ತೋರುವ ಅಗತ್ಯವಿಲ್ಲ ಏಕೆಂದರೆ, ಪ್ರಭುತ್ವವು ಕೇವಲ ಬಾಹ್ಯ ಶಕ್ತಿಯನ್ನು ಪಡೆದಿರುತ್ತದೆ, ಆದರೆ ಧರ್ಮ ಎನ್ನುವುದು ಮನಸ್ಸನ್ನು ಮುನ್ನಡೆಸುವ  ಉದ್ದೇಶ ಹೊಂದಿರುತ್ತದೆ. ರೋಡ್‌ ಐಲ್ಯಾಂಡ್‌ನ ಸಂಸ್ಥಾಪಕ ರೋಜರ್‌ ವಿಲಿಯಮ್ಸ್‌ ಚರ್ಚ್‌ ಎಂಬ ಉದ್ಯಾನವನ್ನು ಸೆಕ್ಯುಲರ್‌ ವ್ಯವಸ್ಥೆಯ ಕಾನನದಿಂದ ತಪ್ಪಿಸುವ ಸಲುವಾಗಿ ಪ್ರಭುತ್ವವನ್ನು ಚರ್ಚ್‌ನಿಂದ ಪ್ರತ್ಯೇಕಿಸಲು ಬಯಸುತ್ತಾರೆ.

 ಸೆಕ್ಯುಲರಿಸಂ 18ನೆ ಶತಮಾನದಲ್ಲಿ ದಿಗ್ವಿಜಯ ಸಾಧಿಸಲು ಸಾಧ್ಯವಾಗಿದ್ದು ಏಕೆಂದರೆ, ಆ ಕಾಲಘಟ್ಟದಲ್ಲಿ ತರ್ಕವು (Reason) ಧರ್ಮದ ಮೇಲೆ ಗೆಲುವು ಸಾಧಿಸಿತ್ತು. ಸೆಕ್ಯುಲರಿಸಂ ಎನ್ನುವುದು ಅಧುನಿಕ ಚಿಂತನೆಯಾಗಿರುವುದರಿಂದ, ಸೆಕ್ಯುಲರ್‌ ಅಲ್ಲದ ದೇವಪ್ರಭುತ್ವವು ಗತಕಾಲದ ಪಳೆಯುಳಿಕೆಯಾಗಿಬಿಡುತ್ತದೆ. ನಾವು ಆಧುನಿಕತೆಯಿಂದ ಜಿಗುಪ್ಸೆಗೀಡಾಗಿದ್ದರೂ ಸಹ ಇಲ್ಲಿ ಉದ್ಭವಿಸುವ ಮೂರ್ತ ಪ್ರಶ್ನೆ ಎಂದರೆ, ನಾವು ಸೌದಿ ಅರೇಬಿಯಾ ಆಗಬೇಕೇ ಅಥವಾ ಇರಾನ್‌ ಅಥವಾ ಪಾಕಿಸ್ತಾನ ಆಗಬೇಕೇ ಎನ್ನುವುದು. ಬಹುಸಂಖ್ಯಾತ ಹಿಂದೂಗಳು ಈ ಹಿಂಚಲನೆಯ ದೇಶಗಳನ್ನು ಅನುಕರಿಸಲು ಇಚ್ಛಿಸುವುದಿಲ್ಲ.

 ಅಶೋಕನ ಶಾಸನಗಳ ಮಹತ್ವ

 ಸೆಕ್ಯುಲರಿಸಂ ಎಂಬ ಪದವನ್ನು ಮೂಲ ಸಂವಿಧಾನದಲ್ಲಿ ಬಳಸಿಲ್ಲ ಎಂಬ ಕಾರಣಕ್ಕಾಗಿ ನಾವು ಅದನ್ನು ತಿರಸ್ಕರಿಸಬೇಕೇ ? ಭಾರತದ ಸಂವಿಧಾನ 1976ರಲ್ಲಿ ಸೆಕ್ಯುಲರ್‌ ಆಯಿತು ಎಂದು ಹೇಳುವುದೇ ಮಹಾ ಸುಳ್ಳು. ಕ್ರಿಪೂ 268 ರಿಂದ 232ರವರೆಗೆ ರಾಜ್ಯಭಾರ ನಡೆಸಿದ ಅಶೋಕ ಚಕ್ರವರ್ತಿಯಿಂದ ಪಡೆದಿರುವ ಹಲವು ಇತರ ಚಿಂತನೆಗಳ ಹಾಗೆಯೇ ಸೆಕ್ಯುಲರಿಸಂ ತತ್ವವನ್ನೂ ಸಹ ಆತನ ಶಾಸನಗಳಿಂದ ಪಡೆಯಬಹುದು. ಈ ಶಾಸನಗಳ ಮಹತ್ವದ  ಬಗ್ಗೆ ರಾಜೀವ್‌ ಭಾರ್ಗವ ವ್ಯಾಪಕವಾದ ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.  ಒಂದು ನಿರ್ದಿಷ್ಟ ಧರ್ಮವನ್ನು ಪ್ರಭುತ್ವದ ಧರ್ಮವಾಗಿ ಸ್ವೀಕರಿಸುವ ಆಲೋಚನೆಯನ್ನು ತಿರಸ್ಕರಿಸುವ, ಶಿಲಾ ಶಾಸನ 7ರಲ್ಲಿ, ಎಲ್ಲ ಧರ್ಮಗಳೂ ಎಲ್ಲೆಡೆಯೂ ನೆಲೆ ಕಾಣುವಂತಿರಬೇಕು, ಏಕೆಂದರೆ ಅವರೆಲ್ಲರೂ ಸ್ವಯಂ ನಿಯಂತ್ರಣ ಮತ್ತು ಹೃದಯ ಶುದ್ಧಿಯನ್ನು ಅಪೇಕ್ಷಿಸುವವರಾಗಿರುತ್ತಾರೆ.

 ವರ್ತಮಾನ ಭಾರತದ ಒಂದು ದೊಡ್ಡ ಸಮಸ್ಯೆ ಎಂದರೆ ದ್ವೇಷ ಭಾಷಣ. ಅಶೋಕನ ಶಿಲಾಶಾಸನ 12 , ತನ್ನ ಧರ್ಮವನ್ನು ವೈಭವೀಕರಿಸಿ ಇತರರ ಧರ್ಮವನ್ನು ಅವಹೇಳನ ಮಾಡುವುದನ್ನು  ನಿಷೇಧಿಸುತ್ತದೆ. ಅಶೋಕನ ಧಮ್ಮ ಒಂದು ಮತ-ಧರ್ಮ ಆಗಿರಲಿಲ್ಲ ಬದಲಾಗಿ ಆಳ್ವಿಕೆಯ ನೀತಿಗಳ ಕೋಶವಾಗಿತ್ತು. ಅಂದರೆ ರಾಜನಾದವನೂ ಪಾಲಿಸಬೇಕಾದ ಸಾಂವಿಧಾನಿಕ ನೈತಿಕತೆ, ಮೌಲ್ಯಗಳ ಕೋಶವಾಗಿತ್ತು. ಅಶೋಕ ಚಕ್ರವರ್ತಿಯು ವಿಭಿನ್ನ ಧರ್ಮಗಳ ಸ್ವೀಕೃತಿ ಮತ್ತು ಸಹಬಾಳ್ವೆಯನ್ನು ಬಯಸಿದ್ದುದೇ ಅಲ್ಲದೆ, ಕೇವಲ ಸಹನಾ ಗುಣಗಳಿಗೆ ಸೀಮಿತವಾಗಿರಲಿಲ್ಲ.

 1928ರಲ್ಲಿ ಸಿದ್ಧಪಡಿಸಲಾಗಿದ್ದ ಮೋತಿಲಾಲ್‌ ನೆಹರೂ ಸಮಿತಿಯ ಸಂವಿಧಾನವು, ಸ್ವತಂತ್ರ ಭಾರತದ ಸಂವಿಧಾನವನ್ನು ರಚಿಸುವ ಪ್ರಥಮ ಪ್ರಯತ್ನವಾಗಿದ್ದು, ಇದರ ನಿಯಮ 4(11)ರಲ್ಲಿ                           “ ಭಾರತದ ಕಾಮನ್‌ವೆಲ್ತ್‌ಗೆ ಅಥವಾ ಯಾವುದೇ ಪ್ರಾಂತ್ಯಗಳಿಗೆ ಪ್ರಭುತ್ವದ ಧರ್ಮ ಯಾವುದೂ ಇರುವುದಿಲ್ಲ, ಅಥವಾ ಪ್ರಭುತ್ವವು ನೇರವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಯಾವುದೇ ಧರ್ಮವನ್ನು ಅನುಮೋದಿಸುವುದಿಲ್ಲ  ಅಥವಾ ಆದ್ಯತೆ ನೀಡುವುದಿಲ್ಲ ಅಥವಾ ಧಾರ್ಮಿಕ ನಂಬಿಕೆಗಳ-ಸ್ಥಾನಮಾನಗಳ ಕಾರಣಕ್ಕಾಗಿ ಯಾವುದೇ ಅನರ್ಹತೆಯನ್ನು ವಿಧಿಸುವುದಿಲ್ಲ ” ಎಂದು ಹೇಳಲಾಗಿತ್ತು.

ಕಾಂಗ್ರೆಸ್‌ನ 1931ರ ಕರಾಚಿ ಮಹಾಧಿವೇಶನದ ನಿರ್ಣಯದಲ್ಲಿ ಭವಿಷ್ಯದ ಸ್ವರಾಜ್‌ ಕುರಿತ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗಿತ್ತು. ನಿರ್ಣಯ 2(9)ರಲ್ಲಿ ನಿರ್ದಿಷ್ಟವಾಗಿ “ಸಕಲ ಧರ್ಮಗಳಿಗೂ ಸಂಬಂಧಿಸಿದಂತೆ ಪ್ರಭುತ್ವವು ತಟಸ್ಥವಾಗಿರುತ್ತದೆ ” ಎಂದು ಘೋಷಿಸಲಾಗಿತ್ತು. ವಿ. ಡಿ. ಸಾವರ್ಕರ್‌ ಅವರ ಆಶಯದಂತೆ ಸಿದ್ಧಪಡಿಸಲಾಗಿದ್ದ ಹಿಂದೂ ಮಹಾಸಭಾದ 1944ರ ಸಂವಿಧಾನದ ಕಡತದಲ್ಲೂ ಸಹ ಅನುಚ್ಚೇದ 7(15)ರ ಅಡಿಯಲ್ಲಿ “ ಕೇಂದ್ರದಲ್ಲಿ ಮತ್ತು ಪ್ರಾಂತ್ಯಗಳಲ್ಲಿ ಪ್ರಭುತ್ವದ ಧರ್ಮ ಯಾವುದೂ ಇರುವುದಿಲ್ಲ ” ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಈಗ ಸಾವರ್ಕರ್‌ ಅವರನ್ನೂ ಅನುಕರಿಸಲು ನಾವೇಕೆ ಹಿಂಜರಿಯುತ್ತೇವೆ ?

 1949ರ ಅಕ್ಟೋಬರ್‌ 17ರಂದು ಸಂವಿಧಾನ ರಚನಾ ಮಂಡಲಿಯಲ್ಲಿ ಸಂವಿಧಾನ ಪೀಠಿಕೆಯ ಚರ್ಚೆ ನಡೆಯುತ್ತಿದ್ದಾಗ, ಎಚ್.‌ ವಿ. ಕಾಮತ್‌ ಅವರು  ಸಂವಿಧಾನದ ಪೀಠಿಕೆಯು ʼ ಭಗವಂತನ ಹೆಸರಿನಲ್ಲಿ ʼ ಎಂದು ಆರಂಭವಾಗಬೇಕು ಎಂದು ಸೂಚಿಸಿದ್ದರು. ಬಹುಮಟ್ಟಿಗೆ ಧಾರ್ಮಿಕ ದೇಶವಾದ ಭಾರತದಲ್ಲಿ, ಈ ಸಲಹೆಯು 68-41 ಪ್ರಮಾಣದಲ್ಲಿ, 17 ಮತಗಳಿಂದ ಪರಾಭವ ಕಂಡಿದ್ದು ನಮ್ಮ ಅದೃಷ್ಟವೆಂದೇ ಹೇಳಬಹುದು. ಸೆಕ್ಯುಲರ್‌ ಎಂಬ ಪದವನ್ನು ನಿರ್ದಿಷ್ಟವಾಗಿ ಸೇರಿಸಲಿಲ್ಲವಾದರೂ, ಸದಸ್ಯರು ಒಕ್ಕೊರಲಿನಿಂದ , ಅದು ಉದಾರವಾದಿ ಪ್ರಜಾಸತ್ತಾತ್ಮಕ ಸಂವಿಧಾನ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಆದರ್ಶಗಳ ಹಿನ್ನೆಲೆಯಲ್ಲಿ, ಸಹಜವಾದ ನೀತಿ ಎಂದು ಅನುಮೋದಿಸಿದ್ದರು.  ಶ್ಯಾಂ ಪ್ರಸಾದ್‌ ಮುಖರ್ಜಿ ಅವರನ್ನೂ ಸೇರಿದಂತೆ, ಸಂವಿಧಾನ ರಚನಾ ಮಂಡಲಿಯ ಯಾವ ಸದಸ್ಯರೂ ಸಹ, ಹಿಂದೂ ರಾಷ್ಟ್ರದ ಪ್ರತಿಪಾದನೆ ಮುಂದಿಡಲಿಲ್ಲ.

 ಸೆಕ್ಯುಲರ್‌ ಪದವನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವ ಮೂರು ವರ್ಷಗಳಿಗೆ ಮುನ್ನ, ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ (1973) ಸೆಕ್ಯುಲರಿಸಂ ಸಂವಿಧಾನದ ಮೂಲ ಸಂರಚನೆ ಎಂದು ಆದೇಶ ನೀಡಿತ್ತು. ಸಂವಿಧಾನ ಮೌನ ವಹಿಸಿರುವ ಕೆಲವು ಪದಗಳೂ ಮುಖ್ಯವಾಗುತ್ತವೆ. ಉದಾಹರಣೆಗೆ, ಒಕ್ಕೂಟ (Federal), ನ್ಯಾಯಿಕ ಪರಿಷ್ಕರಣೆ (Judicial review) ಮತ್ತು ಕಾನೂನು ನಿಯಮ (Rule of Law) ಇವುಗಳನ್ನು ಸಂವಿಧಾನದಲ್ಲಿ ಎಲ್ಲಿಯೂ ಬಳಸಲಾಗಿಲ್ಲ. ಆದರೆ ಈ ಚಿಂತನೆಗಳು ಸಂವಿಧಾನದ ಮೂಲ ಸಂರಚನೆಯ ಭಾಗ ಎಂದೇ ಪರಿಗಣಿಸಲಾಗಿದೆ.

 ನ್ಯಾಯವ್ಯಾಪ್ತಿಯ ಮಾದರಿ ಕುರಿತು

 ಸೆಕ್ಯುಲರಿಸಂ ತತ್ವದ ಪ್ರತ್ಯೇಕತಾ ನಿಯಮದ ಬಗ್ಗೆ ನಾವು ನಿಜಕ್ಕೂ ಬೇಸತ್ತುಹೋಗಿದ್ದರೆ, ನಾವು ನ್ಯಾಯ ವ್ಯಾಪ್ತಿಯ ಮಾದರಿಯನ್ನು ಪರಿಗಣಿಸಬೇಕಾಗುತ್ತದೆ. ಆಧುನಿಕ ಪ್ರಜಾಪ್ರಭುತ್ವಗಳಿಂದ ನಮಗೆ ಹಲವಾರು ಮಾದರಿಗಳ ಆಯ್ಕೆಗಳು ದೊರೆಯುತ್ತವೆ.  ಖಂಡಿತವಾಗಿಯೂ ನಾವು, ಹಿಂದೂ ಧರ್ಮ (ಹಿಂದುತ್ವ ಅಲ್ಲ) ಭಾರತದ ಪ್ರಬಲ ಆಧ್ಯಾತ್ಮಿಕ ಪರಂಪರೆ ಎಂದು ಘೋಷಿಸಬಹುದು. ಇಂಗ್ಲೆಂಡಿನಲ್ಲಿ ಆಂಗ್ಲಿಕನ್‌ ಚರ್ಚ್‌ ಅಧಿಕೃತ ಚರ್ಚ್‌ ಆಗಿದ್ದರೂ ದೊರೆಯೇ ಶ್ರದ್ಧೆಯ ಸಂರಕ್ಷಕರಾಗಿರುತ್ತಾರೆ ಆದರೆ ಎಲ್ಲ ಪ್ರಜೆಗಳಿಗೂ ಸಮಾನ ಧಾರ್ಮಿಕ ಹಕ್ಕುಗಳನ್ನು ಖಚಿತಪಡಿಸಲಾಗಿದೆ ಹಾಗೂ ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯಗಳನ್ನು ನಿಷೇಧಿಸಲಾಗಿದೆ. ಐರ್‌ಲೆಂಡಿನ ಸಂವಿಧಾನವು ಮತ್ತೊಂದು ಮಾದರಿಯಾಗಿ ಕಾಣುತ್ತದೆ. ಇದರ ಪೀಠಿಕೆಯು ಅತ್ಯಂತ ಪವಿತ್ರ ತ್ರಿದೈವಗಳ (Trinity) ಹೆಸರಿನಲ್ಲಿ ಆರಂಭವಾಗುತ್ತದೆ ಆದರೆ ಪ್ರಭುತ್ವವು ಯಾವುದೇ ಧರ್ಮವನ್ನು ಅನುಸರಿಸಲಾಗುವುದಿಲ್ಲ ಅಥವಾ ಧಾರ್ಮಿಕ ಕಾರಣಗಳಿಗಾಗಿ ಇತರ ಧರ್ಮಗಳಿಗೆ ತಾರತಮ್ಯ ಮಾಡಲಾಗುವುದಿಲ್ಲ.

 ಗ್ರೀಕ್‌ ದೇಶದ ಸಂವಿಧಾನದ ಅನುಚ್ಛೇದ 3  ಗ್ರೀಕ್‌ನ ಸಾಂಪ್ರದಾಯಿಕ ಚರ್ಚನ್ನು ಪ್ರಧಾನ ಧರ್ಮ ಎಂದು ಘೋಷಿಸುತ್ತದೆ. ಇದರ ಆರಂಭಿಕ ಸಾಲುಗಳಲ್ಲಿ “ ಪವಿತ್ರವಾದ, ಸಾಪೇಕ್ಷವಾದ (Consubstantial) ಅವಿಭಜಿತ ತ್ರಿದೈವಗಳು ” ಎಂದು ಹೇಳಲಾಗಿದೆ. ಆದರೆ ಅನುಚ್ಚೇದ 4 ಸಮಾನತೆಯ ಹಕ್ಕನ್ನು ಪ್ರತಿಪಾದಿಸುತ್ತದೆ.  ಅನುಚ್ಛೇದ 5(2)ರ ಅಡಿಯಲ್ಲಿ ಬದುಕುವ ಹಕ್ಕು, ಸ್ವಾತಂತ್ರ್ಯ ಮತ್ತು ಘನತೆಯನ್ನು ಯಾವುದೇ ಧರ್ಮಾಧಾರಿತ ತಾರತಮ್ಯಗಳಿಲ್ಲದೆ ಖಚಿತ ಪಡಿಸುವುದಲ್ಲದೆ, ಎಲ್ಲ ಧಾರ್ಮಿಕ ಶ್ರದ್ಧೆಗಳಿಗೂ  ಸ್ವಾತಂತ್ರ್ಯವನ್ನು ನೀಡಲಾಗಿದೆ. ಪಶ್ಚಿಮ ತ್ರೇಸ್‌ನ ಪ್ರಜೆಗಳು, ತಮ್ಮದೇ ಆದ ಮುಫ್ತಿಯನ್ನು ( ಧಾರ್ಮಿಕ-ನ್ಯಾಯಿಕ ಅಧಿಕಾರಿ) ಚುನಾಯಿಸುವ ಹಕ್ಕು ಹೊಂದಿರುತ್ತಾರೆ. ಇವರ ಎಲ್ಲ ಕಲಹ, ವಿವಾದಗಳನ್ನೂ ಇಸ್ಲಾಮಿಕ್‌ ಕಾನೂನಿನನ್ವಯ ಬಗೆಹರಿಸಲಾಗುತ್ತದೆ. ಇವರಿಗೆ ನಾಗರಿಕ ನ್ಯಾಯಾಲಯ ಅಥವಾ ಶರಿಯಾ ನ್ಯಾಯಾಲಯ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡಲಾಗಿದೆ.

ಪಾಕಿಸ್ತಾನದ ಸಂವಿಧಾನದ ಅನುಚ್ಛೇದ 2 ಇಸ್ಲಾಂ ಧರ್ಮವನ್ನು ಪ್ರಭುತ್ವದ ಧರ್ಮ ಎಂದು ಘೋಷಿಸುತ್ತದೆ. ಮುಸ್ಲಿಂ ವ್ಯಕ್ತಿಯು ಮಾತ್ರ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಇರಲು ಸಾಧ್ಯ. ಆದರೆ ಸಂವಿಧಾನದ ಪೀಠಿಕೆಯಲ್ಲೇ “ ಅಲ್ಪಸಂಖ್ಯಾತರಿಗೆ ಮುಕ್ತವಾಗಿ ಅವರ ಶ್ರದ್ಧೆಯನ್ನು ಆಚರಿಸಲು, ಮುಕ್ತ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿರಲು, ತಮ್ಮದೇ ಆದ ಸಂಸ್ಕೃತಿಯನ್ನು ಪೋಷಿಸಲು ಸೂಕ್ತ ನಿಯಮಗಳನ್ನು ರೂಪಿಸಬೇಕು  ”ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಅನುಚ್ಛೇದ 36ರಲ್ಲಿ ಪ್ರಭುತ್ವವು ಅಲ್ಪಸಂಖ್ಯಾತರ ನ್ಯಾಯಯುತವಾದ ಹಕ್ಕುಗಳನ್ನು ರಕ್ಷಿಸುತ್ತದೆ, ಒಕ್ಕೂಟದ ಹಾಗೂ ಪ್ರಾಂತೀಯ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯವನ್ನೂ ಒಳಗೊಂಡಂತೆ, ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತದೆ ಎಂದು ಹೇಳಲಾಗಿದೆ. ಅದರಂತೆ, ಸಂವಿಧಾನವು ಅವರಿಗೆ ಮೀಸಲಾತಿಯನ್ನೂ ಕಲ್ಪಿಸಿದೆ .

 ಶ್ರೀಲಂಕಾದ ಸಂವಿಧಾನ ಅನುಚ್ಚೇದ 9 ಬೌದ್ಧ ಧಮ್ಮವನ್ನು ಪ್ರಭುತ್ವದ ಧರ್ಮ ಎಂದು ನೇರವಾಗಿ ಘೋಷಿಸುವುದಿಲ್ಲವಾದರೂ, ಅದು ಬೌದ್ಧ ಧಮ್ಮಕ್ಕೆ ಅಗ್ರಗಣ್ಯ ಸ್ಥಾನವನ್ನು ನೀಡುತ್ತದೆ ಮತ್ತು ಪ್ರಭುತ್ವವು ಬೌದ್ಧ ಶಾಸನವನ್ನು ರಕ್ಷಿಸಿ, ಪೋಷಿಸುವುದನ್ನು ಕಡ್ಡಾಯಗೊಳಿಸುತ್ತದೆ. ಆದಾಗ್ಯೂ ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸುವುದಷ್ಟೇ ಅಲ್ಲದೆ (ಭಾರತಕ್ಕಿಂತ ಭಿನ್ನವಾಗಿ) ಸ್ಪಷ್ಟವಾಗಿ ಅನುಚ್ಛೇದ 10ರ ಅನ್ವಯ ವ್ಯಕ್ತಿಯು ತನ್ನ ಇಚ್ಛೆಯಂತೆ ಧರ್ಮ ಅಥವಾ ಶ್ರದ್ಧೆಯನ್ನು ಅನುಸರಿಸುವ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತದೆ.  ಅಲ್ಪಸಂಖ್ಯಾತರು ಅವರ ವೈಯುಕ್ತಿಕ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ, ಶರಿಯಾ ನ್ಯಾಯಾಲಯಗಳು , ಇತರ ಅಧಿಕೃತ ನ್ಯಾಯಾಲಯಗಳ, ಹೈಕೋರ್ಟ್‌ಗಳ ಕಟ್ಟಡಗಳ ಒಳಗೇ ಕಾರ್ಯನಿರ್ವಹಿಸುತ್ತವೆ.

N Chaluvaraya Swamy :  ಸರ್.. HDK ನಿಮ್ ಆಡಿಯೋ ರಿವಿಲ್ ಮಾಡ್ತಾರಂತೆ? #pratidhvani

 ಅಶೋಕನ ಧಮ್ಮವನ್ನು ಆಧರಿಸಿದ ಭಾರತದ ಸಂವಿಧಾನವನ್ನು, ಪ್ರಜೆಗಳಿಗೆ ನಾಗರಿಕತೆಯೊಂದಿಗೆ ಕೂಡಿ ಬಾಳುವ ಅವಕಾಶವನ್ನು ಒದಗಿಸುವಂತೆ, ಎಲ್ಲ ಧರ್ಮಗಳಿಗೂ ಸಮಾನ ಗೌರವ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರಭುತ್ವವು ಧರ್ಮ ತಟಸ್ಥತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಭಾರತವು ಪಾಕಿಸ್ತಾನವನ್ನು ವಿರೋಧಿಸುವುದು ಪ್ರಭುತ್ವ ಮತ್ತು ಧರ್ಮವನ್ನು ಪ್ರತ್ಯೇಕಿಸುವ ಆಧಾರದಲ್ಲಿ. ಭಾರತದ ಸಂವಿಧಾನ ಕರ್ತೃಗಳು ಸೆಕ್ಯುಲರ್‌ ಪ್ರಭುತ್ವವನ್ನೇ ಅಪೇಕ್ಷಿಸಿದ್ದರೇ ಹೊರತು ದೇವಪ್ರಭುತ್ವ ಅಥವಾ ಧಾರ್ಮಿಕ ಪ್ರಭುತ್ವವನ್ನಲ್ಲ. ಬಿಜೆಪಿ ಸಹ ಕಾಂಗ್ರೆಸ್‌ ಪಕ್ಷದ ನಕಾರಾತ್ಮಕ ಸೆಕ್ಯುಲರ್‌ ನೀತಿಗಳನ್ನು ವಿರೋಧಿಸುತ್ತಲೇ ಬಂದಿದೆ. ತಾನು ಸಕಾರಾತ್ಮಕ ಸೆಕ್ಯುಲರಿಸಂ ಅನುಸರಿಸುವುದಾಗಿ ಹೇಳುತ್ತದೆ.  ಆರಂಭದ ದಿನದಿಂದಲೇ ಸೂಚ್ಯವಾಗಿದ್ದುದನ್ನು  (implicit) 1976ರಲ್ಲಿ  ಸ್ಪಷ್ಟವಾಗಿ (explicit) ಹೇಳಲಾಯಿತು. ಹಾಗಾದರೆ ಈ ಗದ್ದಲ ಏಕೆ ?

ಮೂಲ ಲೇಖಕರು : ಸಾಂವಿಧಾನಿಕ ತಜ್ಞರು ಹಾಲಿ ಉಪಕುಲಪತಿಗಳು – ಚಾಣಕ್ಯ ನ್ಯಾಷನಲ್‌ ಕಾನೂನು ವಿಶ್ವವಿದ್ಯಾಲಯ ಪಾಟ್ನಾ ಬಿಹಾರ)

-೦-೦-೦-೦-೦-

Tags: article 368 even before the 24th amendmenteditorial analysis of the hindusecularismsecularism india upscsecularism upscsecularism upsc mainsthe hindu analysis in tamilthe hindu analysis in tamil for upscthe hindu editorial analysisthe hindu editorial analysis in tamilthe hindu editorial discussionthe hindu editorial in tamilthe hindu in tamiltnpsc exam questions and clear explanationwhich implies free and fair election
Previous Post

ಡಿಕೆ ಶಿವಕುಮಾರ್‌ ಮೌನ ವ್ರತದ ಹಿಂದೆ ಡಿಸೆಂಬರ್‌ ರಹಸ್ಯ..! ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ

Next Post

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಪೇಮೆಂಟ್ ಪಡೆದು ಪ್ರೊಟೆಸ್ಟ್ ಮಾಡುವ ಕಾಂಗ್ರೆಸ್ಸಿಗರೇ..! – ಮೇಕೆದಾಟುಗೆ DMK ತಕರಾರಿಗೆ ನಿಮ್ಮ ಬದ್ಧತೆ ಏನು ..?! : ಜೆಡಿಎಸ್ ಪ್ರಶ್ನೆ 

ಒಟ್ಟೊಟ್ಟಿಗೆ ದೆಹಲಿಗೆ ಹಾರಿದ ಸಿಎಂ & ಡಿಸಿಎಂ..! ತರಾತುರಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ..?! 

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada