ಮಠದ ವಸತಿ ನಿಲಯದಲ್ಲಿ ವಾಸವಿದ್ದ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗೊದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಮುರುಘಾ ಶರಣರ ವಿರುದ್ದ ಎರಡನೇ ಪ್ರಕರಣ ದಾಖಲಾಗಿದೆ.
ಈ ಕುರಿತು ಮೈಸೂರು ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಶ್ರೀಗಳ ವಿರುದ್ದ ಎರಡನೇ FIR ದಾಖಲಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ FIR ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ 7ಮಂದಿ ವಿರುದ್ದ FIR ದಾಖಲಿಸಲಾಗಿದ್ದು ಮುರುಘಾ ಶರಣರನ್ನು ಮೊದಲನೇ ಆರೋಪಿ, ನಂತರದ ಆರೋಪಿಗಳನ್ನಾಗಿ ಮಹಿಳಾ ವಾರ್ಡನ್ ರಶ್ಮಿ, ಬಸವರಾದಿತ್ಯ, ಮಠದ ಭಕ್ತರಾದ ಪರಮಶಿವಯ್ಯ, ಗಂಗಾಧರಯ್ಯ, ಬಸವಲಿಂಗಪ್ಪ ಹಾಗೂ ಕರಿಬಸಪ್ಪರನ್ನು ಹೆಸರಿಸಲಾಗಿದೆ.
ಈ ಇಬ್ಬರು ವಿದ್ಯಾರ್ಥಿನಿಯರಲ್ಲದೆ ಿನ್ನು ಮೂವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು FIRನಲ್ಲಿ ನಮೂದಿಸಲಾಗಿದೆ.

ಇನ್ನು ಸಂತ್ರಸ್ತರು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿಯೇ ಆಶ್ರಯ ಪಡೆದಿದ್ದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ ಸಂತ್ರಸ್ತರು ತಾವು ವಿಚಾರಣೆಗೆ ಸಿದ್ದವಿರುವುದಾಗಿ ತಿಳಿಸಿದ್ದರು.
ಭಾನುವಾರ ಸಂತ್ರಸ್ತರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದ ಅಧಿಕಾರಿಗಳು. ಆದರೆ, ಈ ಕುರಿತು ಪತ್ರ ಬರೆದಿರುವ ಒಡನಾಡ ಸಂಸ್ಥೆ ಬಾಲಕಿಯರ ಆರೋಗ್ಯದಲ್ಲಿ ಏರುಪೇರಾಗಿದ್ದು ಅಧಿಕಾರಿಗಳಿಗೆ ಸೋಮವಾರ ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿದೆ.
ಬಾಲಕಿಯರಿಗೆ ಎಸ್ಕಾರ್ಟ್ ಮೂಲಕ ಸೂಕ್ತ ಭದ್ರತೆ ನೀಡಬೇಕು ಮತ್ತು ಯಾವುದೇ ಅವಘಡ ಸಂಭವಿಸಿದಂತೆ ಮುಂಜಾಗ್ರತ ಕ್ರಮ ವಹಿಸುವಂತೆ ಒಡನಾಡಿ ಸಂಸ್ಥೆ ಬರೆದಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.














