ನಿನ್ನೆಯಿಂದ (ಮಾ.3) ಆರಂಭವಾಗಿರುವ ಬಜೆಟ್ ಜಂಟಿ ಅಧಿವೇಶನ (Budget session) ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಈ ವೇಳೆ ಸರ್ಕಾರದ ಮೇಲೆ ಮುಗಿಬಿಳಲು ವಿರೋಧ ಪಕ್ಷದ ನಾಯಕರು ಸನ್ನದ್ಧರಾಗಿದ್ದಾರೆ.

ನಿನ್ನೆಯೇ ರಾಜ್ಯಪಾಲರ ಭಾಷಣ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ (Bjp & Jds) ಶಾಸಕರ ಭವನದಿಂದ ವಿಧಾನಸೌಧದ ತನಕ ಪಾದಯಾತ್ರೆ ಮಾಡಿ ಪ್ರತಿಭಟಿಸಿದ್ದರು. ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ವಾಕ್ಸಮರ ನಡೆಸಲಿರುವ ವಿಪಕ್ಷಗಳು, ಜೊತಗೆ ನಿಲುವಳಿ ಸೂಚನೆಯನ್ನು ಬಿಜೆಪಿ ನೀಡಲಿದೆ.ರಾಜ್ಯದ ಕಾನೂನು ವ್ಯವಸ್ಥೆ ಮತ್ತು ಪರೀಕ್ಷೆಗಳ ಅವ್ಯವಸ್ಥೆ, ಮೈಕ್ರೋ ಪೈನಾನ್ಸ್ (Micro finance) ಕಿರುಕುಳಕ್ಕೆ ಸಂಬಂಧಪಟ್ಟಂತೆ ನಿಳುವಳಿ ಸೂಚನೆ ಮಂಡನೆಯಾಗಲಿದೆ.
ಈ ವಿಷಯ ಪ್ರಸ್ತಾಪದ ವೇಳೆ ಸದನದಲ್ಲಿ ಗದ್ದಲ ಉಂಟಾಗುವ ಸಾಧ್ಯತೆಯಿದ್ದು,ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಜಟಾಪಟಿ ಏರ್ಪಡುವ ಸಾಧ್ಯತೆ ನಿಚ್ಚಳವಾಗಿದೆ.