ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಿರ್ದೇಶನವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸಲ್ಲಿಸಿದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಅಬ್ದುಲ್ ಸತ್ತಾರ್, ಭರತ್ ಗೊಗವಾಲೆ, ಪ್ರಕಾಶ್ ಆರ್ ಸುರ್ವೆ, ತನ್ಹಾಜಿ ಜಯವಂತ್ ಸಾವಂತ್, ಸಂದೀಪನ್ ಎ ಭೂಮ್ರೆ, ಚಿಮನರಾವ್ ಆರ್ ಪಾಟೀಲ್, ಬಾಲಾಜಿ ಡಿ ಕಲ್ಯಾಣ್ಕರ್, ಯಾಮಿನಿ ಜಾಧವ್, ಅನಿಲ್ ಬಾಬರ್, ಮಹೇಶ್ ಶಿಂಧೆ, ಸಂಜಯ್ ರೈಮುಲ್ಕರ್, ರಮೇಶ್ ಬೋರ್ನಾರೆ ಮತ್ತು ಬಾಲಾಜಿ ಕಿನಿಲ್ಕರ್ ಈ ಪ್ರಕರಣದ 15 ಅರ್ಜಿದಾರರು.

ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಬಹುಮತ ಸಾಬೀತು ಕಾನೂನುಬಾಹಿರವಾಗಿದೆ ಮತ್ತು “ಕಳಂಕಿತ” ಹೆಸರನ್ನು ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಅರ್ಜಿಯನ್ನು ಗುರುವಾರ ಸಂಜೆ 5 ಗಂಟೆಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ರಜಾಕಾಲದ ಪೀಠ ವಿಚಾರಣೆ ನಡೆಸಲಿದೆ. ಪೀಠವು, ಸಂಜೆ 5 ಗಂಟೆಗೆ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.