ಚುನಾವಣಾ ಬಾಂಡ್ ವ್ಯವಹಾರವನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್ ಇಲ್ಲೀವರೆಗೂ ಚುನಾವಣಾ ಬಾಂಡ್ಗಳನ್ನು ಖರೀದಿ ಮಾಡಿದ್ದ ಖರೀದಿದಾರರು, ಮುಖಬೆಲೆ, ಖರೀದಿ ಮಾಡಿದ ದಿನಾಂಕ, ಚುನಾವಣಾ ಬಾಂಡ್ ಸ್ವೀಕಾರ ಮಾಡಿದ ರಾಜಕೀಯ ಪಕ್ಷಗಳ ವಿವರ ನೀಡುವಂತೆ ಮಾರ್ಚ್ 6ರ ಒಳಗೆ ನೀಡುವಂತೆ SBI ತಾಕೀತು ಮಾಡಿತ್ತು. ಆದರೆ ಚುನಾವಣಾ ಬಾಂಡ್ ವಿವರ ಸಲ್ಲಿಸಲು ಜೂನ್ 30ರ ತನಕ ಅವಕಾಶ ನೀಡುವಂತೆ SBI ಮನವಿ ಮಾಡಿತ್ತು. SBI ಮನವಿಯನ್ನು ತಿರಸ್ಕಾರ ಮಾಡಿರುವ ಸುಪ್ರೀಂಕೋರ್ಟ್, ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಾಳೆ ಮಂಗಳವಾರ ಕೋರ್ಟ್ ಕಲಾಪ ಮುಗಿಯುವ ಮುನ್ನ ಸಂಪೂರ್ಣ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ತಾಕೀತು ಮಾಡಿದೆ.

ಫೆಬ್ರವರಿ 15ರಂದು ಚುನಾವಣಾ ಬಾಂಡ್ ರದ್ದು ಮಾಡಿದ್ದ ಸುಪ್ರೀಂಕೋರ್ಟ್ ಇದು ಅಸಂವಿಧಾನಿಕ, ರಾಜಕೀಯ ಪಕ್ಷಗಳಿಗೆ ಅನಾಮಧೇಯ ವ್ಯಕ್ತಿಗಳ ಕೊಡುಗೆ ಮಾಹಿತಿ ಹಕ್ಕು ಕಾನೂನು ಉಲ್ಲಂಘನೆ ಎಂದು ತೀರ್ಪು ನೀಡಿತ್ತು. ಎಸ್ಬಿಐ ನೀಡುವ ಮಾಹಿತಿಯನ್ನು ಮಾರ್ಚ್ 13ರ ಒಳಗಾಗಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದಿತ್ತು. ಆದರೆ ಸುಪ್ರೀಂಕೋರ್ಟ್ ಸೂಚನೆಯನ್ನು SBI ಪಾಲಿಸಿಲ್ಲ. ಹೀಗಾಗಿ ಮಾರ್ಚ್ 12 ರ ಸಂಜೆಯೊಳಗೆ SBI ಮಾಹಿತಿ ಕೊಡಬೇಕು. ಮಾರ್ಚ್ 15ರ ಒಳಗೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸಮಯಾವಕಾಶ ಕೋರಿದ SBIಗೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಕಳೆದ 26 ದಿನಗಳಿಂದ ನೀವು ಏನ್ ಮಾಡಿದ್ರಿ..? ನಮಗೆ ಮಾಹಿತಿ ಬೇಕು ಅಷ್ಟೆ. ನೀವು ಬಾಂಡ್ ಖರೀದಿ ಮಾಡಿದ್ಯಾರು..? ಎಷ್ಟು ಮೌಲ್ಯದ ಬಾಂಡ್..?ಖರೀದಿ ಮಾಡಿದ ದಿನಾಂಕ ಅಷ್ಟು ಮಾತ್ರ ಕೊಡಿ ಎಂದು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಆದೇಶ ಮಾಡಿದೆ. ಹಿರಿಯ ವಕೀಲ ಹರೀಶ್ ಸಾಳ್ವೆ SBI ಪರವಾಗಿ ವಾದ ಮಂಡಿಸಿದರು. ಆದರೆ ಸುಪ್ರೀಂಕೋರ್ಟ್ ಯಾವುದೇ ಮನವಿಯನ್ನು ಸ್ವೀಕರಿಸಲಿಲ್ಲ. ನಾಳೆ ಕೋರ್ಟ್ಗೆ ಎಲ್ಲಾ ಮಾಹಿತಿ ಕೊಡಬೇಕಿದ್ದು, ಮಾರ್ಚ್ 15ರಂದು ಚುನಾವಣಾ ಬಾಂಡ್ ಕಳ್ಳಾಟ ಬಯಲಾಗಲಿದೆ.
