
ವಿಧಾನಸಭೆ: ಸದನದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಆರ್ ಆರ್ ನಗರ ಬಿಜೆಪಿ ಶಾಸಕ ಮುನಿರತ್ನ. 2017ರಲ್ಲಿ ನಾನೊಬ್ಬ ಕಾಂಗ್ರೆಸ್ ಶಾಸಕ. ಆಗ ನಮ್ಮ ಕ್ಷೇತ್ರದಲ್ಲಿ ಅಕ್ರಮ ಶೆಡ್ ತೆರವು ನಡೆದಿರುತ್ತದೆ. ಆ ವೇಳೆ ನಾನು ರಕ್ಷಣೆಗೆ ಹೋಗುತ್ತೇನೆ. ಮಹಿಳೆ ಬಂದು ನನ್ನ ಕಾಲುಹಿಡಿತಾಳೆ. ನಮ್ಮ ಮನೆ ಉಳಿಸಿಕೊಡಿ ಎಂದು ಬೇಡುತ್ತಾಳೆ. ಅದನ್ನು ಈಗ ಕೇಸ್ ಹಾಕಿಸಿ ಅರೆಸ್ಟ್ ಮಾಡಿಸಿ ಅಂತಿದ್ದಾರೆ, ದಲಿತ ಮಹಿಳೆಗೆ ಒದ್ದಿದ್ದೇನೆ ಎಂದು ಕೇಸ್ ಮಾಡಿದ್ದಾರೆ. ದಯಮಾಡಿ ನನಗೆ ನ್ಯಾಯ ಕೋಡಬೇಕು ಎಂದು ಮುನಿರತ್ನ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಸ್ಪೀಕರ್ ಗೃಹ ಸಚಿವರು ಬರಲಿ, ಅವರಿಂದ ಉತ್ತರ ಕೊಡಿಸುತ್ತೇನೆ ಎಂದಿದ್ದಾರೆ. ಮುನಿರತ್ನ ಮಾತಿಗೆ ಕುಣಿಗಲ್ ಶಾಸಕ ರಂಗನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಇವಾಗ ಶಾಸಕರು, ಮುಂದೆ ನಿಮಗೂ ಇದೇ ಪರಿಸ್ಥಿತಿ ಬರಬಹುದು. ಯಾರದ್ದೋ ವಕ್ತಾರರ ರೀತಿ ಮಾತಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಶಾಸಕ ಮುನಿರತ್ನ.

ಬುಧವಾರ ಕೂಡ ಪ್ರಾಣ ಭೀತಿ ಇದೆ. ನಾನು ಮನೆಗೆ ಹೋಗುವಾಗ ನನ್ನನ್ನು ಮುಗಿಸಬಹುದು. ನನಗೆ ಸರ್ಕಾರದಿಂದ ಇಬ್ಬರು ಗನ್ಮ್ಯಾನ್ ನೀಡಿದ್ದರು. ಆದರೆ ಇದೀಗ ವಾಪಸ್ ಪಡೆದುಕೊಂಡಿದ್ದಾರೆ. ಕಮಿಷನರ್ಗೆ ಮನವಿ ಮಾಡಿದರೂ ಗನ್ ಮ್ಯಾನ್ ಒದಗಿಸಿಲ್ಲ ಎಂದು ದೂರಿದ್ದರು. ನಾನು ಸದನದಿಂದ ಮನೆಗೆ ಹೋಗಲು ರಕ್ಷಣೆ ಕೊಡಿ. ನನಗೆ ಜೀವ ಬೆದರಿಕೆ ಇದೆ. ನನ್ನ ಪ್ರಾಣ ಉಳಿಸಿ ಎಂದು ಬೇಡಿಕೊಂಡಿದ್ದರು.
