• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಆಗುಂಬೆಗೆ ಸುರಂಗ ಮಾರ್ಗ, ಡಬಲ್ ಲೇನ್ ರಸ್ತೆಯ ಕಂಟಕ : ಗಟ್ಟಿಯಾಗಲಿ ಆಗುಂಬೆ ಉಳಿಸಿ ಅಭಿಯಾನದ ಧ್ವನಿ..!

ಮೇರು ನಟ ಡಾ. ರಾಜ್ ಕುಮಾರ್ ರವರು "ಆಗುಂಬೆಯ ಪ್ರೇಮ ಸಂಜೆಯ" ಎಂದು ಹಾಡುತ್ತಾ, ನೃತ್ಯ ಮಾಡಿದ್ದಾರೆ. ಹಲವು ಸಿನಿಮಾಗಳ ಚಿತ್ರೀಕರಣ ಆಗುಂಬೆಯಲ್ಲಿ ನಡೆದಿರುವುದನ್ನು ಮರೆಯದಿರೋಣ..

ಪ್ರತಿಧ್ವನಿ by ಪ್ರತಿಧ್ವನಿ
February 18, 2026
in Uncategorized
0
ಆಗುಂಬೆಗೆ ಸುರಂಗ ಮಾರ್ಗ, ಡಬಲ್ ಲೇನ್ ರಸ್ತೆಯ ಕಂಟಕ :  ಗಟ್ಟಿಯಾಗಲಿ ಆಗುಂಬೆ ಉಳಿಸಿ ಅಭಿಯಾನದ ಧ್ವನಿ..!
Share on WhatsAppShare on FacebookShare on Telegram

ವಿಶೇಷ ಲೇಖನ ; ನಾಗರಾಜ ಕೂವೆ, ವನ್ಯ ಜೀವಿ ಪ್ರಿಯರು..

ADVERTISEMENT

ಬೆಂಗಳೂರು : ವಿಶ್ವ ಪಾರಂಪರಿಕ ತಾಣವಾದ ಪಶ್ಚಿಮ ಘಟ್ಟದ “ಆಗುಂಬೆ” ಎಲ್ಲರಿಗೂ ಚಿರಪರಿಚಿತ ಹೆಸರು. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾದ ಇದು “ದಕ್ಷಿಣದ ಚಿರಾಪುಂಜಿ” ಎಂಬ ವಿಶೇಷಣ ಹೊಂದಿತ್ತು. ಆದರೆ ಈಗ ಕೆಲವು ವರ್ಷಗಳಿಂದ ಇಲ್ಲಿ ಮಳೆ ಕಡಿಮೆಯಾಗುತ್ತಿದೆ. ತಾಪಮಾನ ಏರಿಕೆ ಕಂಡುಬರುತ್ತಿದೆ. ಹವಾಗುಣ ಬದಲಾವಣೆಯ ಪರಿಣಾಮಗಳು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಮಧ್ಯೆ ಆಗುಂಬೆಗೆ ಅಭಿವೃದ್ಧಿಯ ಕಂಟಕ ಎದುರಾಗಿದೆ.

Nikhil Kumaraswamy on Congress: JDSಗೆ ಸಿದ್ಧಾಂತ ಇಲ್ಲ ಎಂದ ಕೈ ನಾಯಕರ ವಿರುದ್ಧ ನಿಖಿಲ್ ಕಿಡಿ #pratidhvani

ಆಗುಂಬೆಯ ಸೂರ್ಯಾಸ್ತ ವೀಕ್ಷಣೆಗೆ ದೇಶ ವಿದೇಶಗಳ ಪ್ರವಾಸಿಗರು ಬಂದರೆ, ದಟ್ಟವಾದ ಮಳೆ ಕಾಡುಗಳು ನಿಸರ್ಗ ಪ್ರಿಯರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಈಗ ಇಂತಹ ಆಗುಂಬೆಯ ಪ್ರಕೃತಿ ಸೌಂದರ್ಯಕ್ಕೆ “ಸುರಂಗ ಮಾರ್ಗ ಮತ್ತು ಎರಡು ಲೇನ್ ರ”ಸ್ತೆಯ ಕಂಟಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಈ ನಾಡಿನ ಪ್ರಜ್ಞಾವಂತ ಜನರು ತಮ್ಮ ಮೌನ ಮುರಿದು “ಆಗುಂಬೆ ಉಳಿಸಿ” ಎಂದು ಗಟ್ಟಿಯಾಗಿ ಮಾತನಾಡಬೇಕು.

(1) ಪರಿಸರ ವಿಜ್ಞಾನಿಗಳು, ಕಾಳಿಂಗ ಸಂಶೋಧಕರು, ಸಸ್ಯ ಶಾಸ್ತ್ರಜ್ಞರು, ಕಪ್ಪೆ, ಕೀಟ, ಜೇಡ, ಚಿಟ್ಟೆ ಇತ್ಯಾದಿ ಜೀವವೈವಿಧ್ಯ ಅಧ್ಯಯನಕಾರರು, ಭೂಗರ್ಭ ಶಾಸ್ತ್ರಜ್ಞರು, ಭೂವಿಜ್ಞಾನಿಗಳು ತಮ್ಮ ಅಧ್ಯಯನ ವರದಿ, ಸಂಶೋಧನಾ ಪ್ರಬಂಧ, ದತ್ತಾಂಶಗಳನ್ನು ಇಟ್ಟುಕೊಂಡು ಆಗುಂಬೆಯ ಜೀವವೈವಿಧ್ಯದ ಮಹತ್ವದ ಬಗ್ಗೆ ಮಾತನಾಡಬೇಕು, ಬರೆಯಬೇಕು, ಜಾಗೃತಿ ಮೂಡಿಸಬೇಕು. ಅಲ್ಲಿನ ಪರಿಸರ ಎಷ್ಟು ಅಮೂಲ್ಯ, ಅದು ಒದಗಿಸುವ ಸೇವೆಗಳು ಸುತ್ತಮುತ್ತಲಿನ ಪ್ರದೇಶಗಳ ನೀರು, ಆಹಾರ ಭದ್ರತೆ, ಜೀವನೋಪಾಯಕ್ಕೆ ಎಷ್ಟು ಅಗತ್ಯ ಎಂಬುದನ್ನು ಸರ್ಕಾರಕ್ಕೆ, ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಆಗ ಅವರ ಸಂಶೋಧನೆಗಳಿಗೂ ಬೆಲೆ ಬರುತ್ತದೆ. ಇವರೆಲ್ಲ ಜೀವವೈವಿಧ್ಯದ ದನಿಯಾಗಬೇಕಿದೆ.

ಇದನ್ನೂ ಓದಿ : CM CUP : ಬಹುಮುಖ ಪ್ರತಿಭೆಯ ಕಣಜ ಪ್ರಕಾಶ್ ಪಳನಿ ; ದಿ ಕೆಫೆ ದಿವ್ಯಂ ತಂಡದ ಒಡೆಯ..!

(2) ಈ ನಾಡಿನ ಸಾಹಿತಿಗಳು, ಬರಹಗಾರರು, ಬುದ್ಧಿ ಜೀವಿಗಳು, ಪ್ರಜ್ಞಾವಂತರು ಅದರಲ್ಲೂ ಮುಖ್ಯವಾಗಿ ಕುವೆಂಪು, ಶಿವರಾಮ ಕಾರಂತ, ತೇಜಸ್ವಿ, ಅನಂತಮೂರ್ತಿಗಳ ಅಭಿಮಾನಿಗಳು, ಒಡನಾಡಿಗಳು, ಅವರ ಹೆಸರಿನಲ್ಲಿ ಪ್ರತಿಷ್ಠಾನ, ಪರಿಷತ್ತು, ಮಂಡಳಿ ಇತ್ಯಾದಿಗಳಲ್ಲಿ ಅಧಿಕಾರ, ಹುದ್ದೆ ಗಿಟ್ಟಿಸಿದರು, ಸಭೆ-ಸಮಾರಂಭ, ಭಾಷಣ, ಹಾರ-ತುರಾಯಿ, ಪ್ರಶಸ್ತಿ ಇತ್ಯಾದಿ ಪಡೆದಿರುವವರು *ಆಗುಂಬೆಯ ನೈಸರ್ಗಿಕ ಸೌಂದರ್ಯ ಹಾಳು ಮಾಡಬೇಡಿ* ಎಂದು ಸರ್ಕಾರವನ್ನು ಒತ್ತಾಯಿಸಬೇಕು.

(3) ಮೇರು ನಟ ಡಾ. ರಾಜ್ ಕುಮಾರ್ ರವರು “ಆಗುಂಬೆಯ ಪ್ರೇಮ ಸಂಜೆಯ” ಎಂದು ಹಾಡುತ್ತಾ, ನೃತ್ಯ ಮಾಡಿದ್ದಾರೆ. ಹಲವು ಸಿನಿಮಾಗಳ ಚಿತ್ರೀಕರಣ ಆಗುಂಬೆಯಲ್ಲಿ ನಡೆದಿದೆ. ಕನ್ನಡ ಚಿತ್ರೋದ್ಯಮಕ್ಕೆ ಆಗುಂಬೆಯ ನಂಟಿದೆ. ಈಗ ಸಿನಿಮಾ ಕಲಾವಿದರು, ಸೆಲೆಬ್ರಿಟಿಗಳು, ನಟ-ನಟಿಯರು ಚಿತ್ರರಂಗ “ಆಗುಂಬೆ ಉಳಿಸಿ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

(4) ಆಗುಂಬೆಯ ದಟ್ಟವಾದ ಕಾಡುಗಳು, ಅಲ್ಲಿನ ವಿಶಿಷ್ಟ ಜೀವವೈವಿಧ್ಯ ವನ್ಯಜೀವಿ ಛಾಯಾಗ್ರಾಹಕರು, ಯೂಟ್ಯೂಬ್, Instagram ಕಂಟೆಂಟ್ ಕ್ರಿಯೇಟರ್ಸ್‌ಗಳನ್ನು ತನ್ನತ್ತ ಸೆಳೆದಿದೆ. ತಮ್ಮ ಕ್ಯಾಮೆರಾಗಳಲ್ಲಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕೆಲವರು ಅದರ ವಾಣಿಜ್ಯಿಕ ಲಾಭಗಳನ್ನೂ ಪಡೆದಿದ್ದಾರೆ. ಈಗ ವನ್ಯಜೀವಿ ಛಾಯಾಗ್ರಾಹಕರು, ಸಾಕ್ಷ್ಯಚಿತ್ರ ನಿರ್ಮಾಣ ಮಾಡುವವರು, ಕಂಟೆಂಟ್ ಕ್ರಿಯೇಟರ್ಸ್ ಗಳು *ಆಗುಂಬೆ ಮಳೆಕಾಡು ಉಳಿಸಿ* ಎಂದು ತಮ್ಮ ಫೋಟೋ, ವಿಡಿಯೋಗಳನ್ನು ಬಳಸಿ ಎಲ್ಲೆಡೆ ಗಟ್ಟಿಯಾಗಿ ಹೇಳಬೇಕು. ಆಗ ಅವರ ತೆಗೆದ ಫೋಟೋಗಳು, ಚಿತ್ರಿಸಿದ ವಿಡಿಯೋಗಳಿಗೆ ಒಂದು ಬೆಲೆ ಬರುತ್ತದೆ.

Rapido Bike : ಸಿದ್ದರಾಮಯ್ಯನವರೇ ನಿಮಗೆ ಕೈ ಮುಗಿತೀನಿ ದಯವಿಟ್ಟು ರಾಪಿಡೋ ಬೈಕ್ ಟ್ಯಾಕ್ಸಿ ನಿಲ್ಸಿ #pratidhvani

(5) ಮಲ್ನಾಡ್, ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಕೊಪ್ಪ, ಹೆಬ್ರಿ, ಕಾರ್ಕಳ ಎಂದು ಊರಿನ ಹೆಸರುಗಳನ್ನು ತಮ್ಮ ನಾಮಧೇಯದೊಂದಿಗೆ ಇಟ್ಟುಕೊಂಡಿರುವವರು; ತಮ್ಮ ಹೆಸರಿನ ಮುಂದೆ ಮಲೆನಾಡಿನ ಊರುಗಳ ಹೆಸರು ಸೇರಿಸಿಕೊಂಡಿರುವವರು; ಇಂಥವುಗಳಿಗೆಲ್ಲಾ ನಿಜವಾಗಿ ಅರ್ಥ ಬರಬೇಕಾದರೆ, ನೀವು ನಿಮ್ಮ ಊರಿಗೆ ತೊಂದರೆ ಆದಾಗ ಕನಿಷ್ಠ ಮಾತನಾಡಬೇಕು. ನಿಮ್ಮ ಊರಿನ ಪರಿಸರವನ್ನು ಕೊಳ್ಳೆ ಹೊಡೆಯಲು ಮುಂದಾಗಿರುವಾಗ ಧ್ವನಿ ಎತ್ತಬೇಕು. ಮಲೆನಾಡಿನ ಪ್ರಕೃತಿ, ಜನರ ಪರ ಮಾತನಾಡಬೇಕು. ಈಗ *ಅವೈಜ್ಞಾನಿಕ ಅಭಿವೃದ್ಧಿಯಿಂದ ಆಗುಂಬೆ ಉಳಿಸಿ* ಎನ್ನಬೇಕು.

(6) ಪರಿಸರವಾದಿಗಳು, ಪರಿಸರ ಕಾರ್ಯಕರ್ತರು, ವನ್ಯಜೀವಿ ಪ್ರೇಮಿಗಳು, ಪರಿಸರ ಪತ್ರಕರ್ತರು ತಮ್ಮ ತಮ್ಮ ಭಿನ್ನಾಭಿಪ್ರಾಯ ಮರೆತು ಒಕ್ಕೊರಲಿನಿಂದ *ಸುರಂಗ ನಿಲ್ಲಿಸಿ – ಆಗುಂಬೆ ಉಳಿಸಿ‌* ಎಂದು ಗಟ್ಟಿಯಾಗಿ ಮಾತನಾಡಬೇಕು.

(7) ಮಲೆನಾಡಿನ ಪತ್ರಕರ್ತರು, ವರದಿಗಾರರು, ಸಂಪಾದಕರು, ಮಾಧ್ಯಮಗಳು, ಯೂಟ್ಯೂಬ್ ಚಾನೆಲ್ ಗಳು, ಕಂಟೆಂಟ್ ಕ್ರಿಯೇಟರ್ಸ್ ಗಳು ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೇ ಮಲೆನಾಡಿನ ಹೆಮ್ಮೆಯಾದ *ಆಗುಂಬೆ ಪರಿಸರ ಉಳಿಸಿ* ಎಂದು ಗಟ್ಟಿಯಾಗಿ ಹೇಳಬೇಕು.

ಆಗುಂಬೆಯಲ್ಲಿ ಈಗಿರುವ ರಸ್ತೆಯ ಗುಂಡಿಗಳನ್ನು ಮುಚ್ಚಿ, ಹೊಸತಾಗಿ ಟಾರ್ ಹಾಕಿ, ಅದನ್ನು ಪ್ರತಿವರ್ಷ ನಿರ್ವಹಣೆ ಮಾಡಿ. ಜೊತೆಗೆ ರಸ್ತೆ ಮತ್ತು ತಿರುವುಗಳು ತೀರಾ ಕಿರಿದಿರುವ ಜಾಗಗಳಲ್ಲಿ ಸೂಚನಾ ಫಲಕ ಅಳವಡಿಸಿ, ಟ್ರಾಫಿಕ್ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸಿ, ಇದು ಸುಗಮ ಸಂಚಾರವನ್ನು ಖಾತ್ರಿ ಪಡಿಸುತ್ತದೆ. ಅವೈಜ್ಞಾನಿಕ ಎರಡು ಲೇನ್ ರಸ್ತೆ ಮತ್ತು ಸುರಂಗ ಮಾರ್ಗ ಯೋಜನೆಗಳು ಪರಿಸರವನ್ನು ಧ್ವಂಸಗೊಳಿಸುತ್ತವೆ ಅದನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಆಗುಂಬೆ ಪರಿಸರಕ್ಕೆ ಮನುಷ್ಯ ಹಸ್ತಕ್ಷೇಪ ಬೇಡ* ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಈ ನಾಡಿನ ಎಲ್ಲಾ ಪ್ರಜ್ಞಾವಂತರು ಈ ಕೂಡಲೇ ಒತ್ತಾಯಿಸಬೇಕು. *ತಡ ಮಾಡಿದರೆ ಅವೈಜ್ಞಾನಿಕ ಅಭಿವೃದ್ಧಿ ಆಗುಂಬೆ ಪರಿಸರವನ್ನು ಆಹುತಿ ತೆಗೆದುಕೊಳ್ಳುತ್ತದೆ.

Tags: #SaveAgumbe#StopAgumbeTunnelProjectAgumbe ForestDr RajkumarEshwar KhandreForest DepartmentKarnataka GovernmentPratidhvanisandalwood starsSave ForestSave Wild lifeShimogga newsSpecial ArticleTraffic ControlTunnel Projectunion governmentWild life world
Previous Post

ಸಾರಿಗೆ ನೌಕರರ ಬೇಡಿಕೆ ಈಡೇರಿಸದಿದ್ರೆ ಹೋರಾಟ ಇನ್ನಷ್ಟು ತೀವ್ರವಾಗುತ್ತೆ : ಸಿದ್ದರಾಮಯ್ಯಗೆ ವಿಜಯೇಂದ್ರ ಎಚ್ಚರಿಕೆ..

Next Post

ರೆಸ್ಟೊರೆಂಟ್ ಗಳಲ್ಲಿ ಚಿಕನ್-ಮಟನ್ ತಿನ್ನುವವರ ಗಮನಕ್ಕೆ: ಇಲ್ಲಿದೆ ಶಾಕಿಂಗ್ ಸುದ್ದಿ

Related Posts

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ
Uncategorized

ಮಹಿಳಾ ಮೀಸಲಾತಿ ಮಸೂದೆ ಚರ್ಚೆ ನಡುವೆ ರಾಹುಲ್ ಗಾಂಧಿ ಹಾಸ್ಯ ಚಟಾಕಿ

by ಪ್ರತಿಧ್ವನಿ
April 17, 2026
0

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹಿಳಾ ಮೀಸಲಾತಿ ಮಸೂದೆ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತ ಚರ್ಚೆ ಸಂಸತ್‌ನಲ್ಲಿ ತೀವ್ರಗೊಳ್ಳುತ್ತಿರುವ ನಡುವೆ, ಸದನದಲ್ಲಿ ರಾಜಕೀಯ ಗದ್ದಲದ ಜೊತೆಗೆ...

Read moreDetails
ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

ಭದ್ರತಾ ಬೆದರಿಕೆ ಭೀತಿ: ಅಮೆರಿಕಾ ಮಾತುಕತೆ ವಿಫಲವಾದ ಬಳಿಕ ಇರಾನ್ ತಂಡದ ರಹಸ್ಯ ಪ್ರಯಾಣ

April 17, 2026
ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

April 16, 2026
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
Next Post
ರೆಸ್ಟೊರೆಂಟ್ ಗಳಲ್ಲಿ ಚಿಕನ್-ಮಟನ್ ತಿನ್ನುವವರ ಗಮನಕ್ಕೆ: ಇಲ್ಲಿದೆ ಶಾಕಿಂಗ್ ಸುದ್ದಿ

ರೆಸ್ಟೊರೆಂಟ್ ಗಳಲ್ಲಿ ಚಿಕನ್-ಮಟನ್ ತಿನ್ನುವವರ ಗಮನಕ್ಕೆ: ಇಲ್ಲಿದೆ ಶಾಕಿಂಗ್ ಸುದ್ದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada