ಚಿತ್ರದ ಪ್ರಚಾರ ಕಾರ್ಯಕ್ಕೆಂದು ಮಾಲ್ಗೆ ತೆರಳಿದ್ದ ವೇಳೆ ಇಬ್ಬರು ಯುವ ನಟಿಯರ ಮೇಳೆ ನೆರೆದಿದ್ದ ಜನಸಂದಣಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಕೇರಳದ ಕೋಯಿಕೋಡ್ನ ಹೈಲೈಟ್ ಮಾಲ್ನಲ್ಲಿ ನಡೆದಿದೆ.
ಸ್ಯಾಟರ್ಡೇ ನೈಟ್ ಚಿತ್ರದ ಪ್ರಚಾರ ಕಾರ್ಯದ ವೇಳೆ ಮಾಲಿವುಡ್ ನಟಿಯರಾದ ಸಾನ್ಯಾ ಇಯ್ಯಪ್ಪನ್ ಹಾಗೂ ಗ್ರೇಸ್ ಅಂಟೋನಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೆಲವರು ನಟಿಯರ ಕೈಹಿಡಿದು ಅಸಭ್ಯವಾಗಿ ವರ್ತಿಸಿರುವುದು ಕಂಡು ಬರುತ್ತದೆ.
Read more: ಕೇರಳ; ಚಿತ್ರದ ಪ್ರಮೋಷನ್ ವೇಳೆ ನಟಿಯರಿಗೆ ಲೈಂಗಿಕ ದೌರ್ಜನ್ಯRead more: ಕೇರಳ; ಚಿತ್ರದ ಪ್ರಮೋಷನ್ ವೇಳೆ ನಟಿಯರಿಗೆ ಲೈಂಗಿಕ ದೌರ್ಜನ್ಯಈ ಕುರಿತು ನಟಿಯರಿಬ್ಬರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ತಮ್ಮಗಾದ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಅಂತಹ ವ್ಯಕ್ತಿಗಳ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆದರೆ, ಘಟನೆ ಬಗ್ಗೆ ಎಲ್ಲಿಯೂ ಸಹ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.