ವಂಚನೆ ಪ್ರಕರಣದಲ್ಲಿ ಏಳು ವರ್ಷ ಶೀಕ್ಷೆ ಪ್ರಕಟಿಸಿ ಆದೇಶ ಒಳ ಸಂಚು ಆರೋಪದಲ್ಲಿ ಐದು ವರ್ಷ ಜೈಲು ಶಿಕ್ಷೆ ಕಳ್ಳತನ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ, 2ನೇ ಕೇಸ್ ಅಲ್ಲು ಕೂಡ 5 ವರ್ಷ ಶಿಕ್ಷೆ. 9 ಕೋಟಿ 60 ಲಕ್ಷ ದಂಡ ವಿಧಿಸಿದ ಕೋರ್ಟ್ ಮತ್ತೊರ್ವ ಮಹೇಶ್ ಬಿಳಿಗೆಯೂ ಕೂಡ 7 ವರ್ಷ ಶಿಕ್ಷೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಶಿಕ್ಷೆ ಪ್ರಕರಣ ನ್ಯಾಯದೀಶರಾದ ಸಂತೋಷ್ ಗಜಾನನ ಭಟ್ ಅವರಿಂದ ಆದೇಶ. ಬೇಲೆಕೇರಿ ಬಂದರಿನಿಂದ ಅದಿರನ್ನ ಅಕ್ರಮವಾಗಿ ಸಾಗಣಿಕೆ ಆರೋಪ ಮೊದಲನೇ ಕೇಸ್ ನಲ್ಲಿ ಆರೋಪಿಗಳಿಗೆ ಒಟ್ಟು ಆರು ಕೋಟಿ ದಂಡ ಈಗಾಗಲೇ ಸಿಬಿಐ ಅಧಿಕಾರಿಗಳಿಂದ ಬಂಧನವಾಗಿ ಜೈಲಿನಲ್ಲಿರುವ ಅಪರಾಧಿಗಳು..
2009-10 ರಲ್ಲಿ ಅಂಕೋಲಾದ ಬೇಲೆಕೇರಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ
ಅಕ್ರಮ ಗಣಿಗಾರಿಕೆ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಅರಣ್ಯಾಧಿಕಾರಿಗಳು ದಾಳಿಯ ವೇಳೆ ಸುಮಾರು 200 ಕೋಟಿಯ 11.312 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಜಪ್ತಿ ಮಾಡಲಾಗಿತ್ತು. ಅದನ್ನು ಅಧಿಕಾರಿ ಮಹೇಶ್ ಬಿಳಿಯ ಅವರ ವಶಕ್ಕೆ ನೀಡಲಾಗಿತ್ತು. ಅವಾಗ ಸತೀಶ್ ಸೈಲ್ ಹಾಗು ಮಹೇಶ್ ಇತರೆ ಆರೋಪಿಗಳು ಒಳಸಂಚು ಮಾಡಿ ಅದಿರು ಕಳ್ಳತನ ಮಾಡಿ ವಿದೇಶಕ್ಕೆ ರಪ್ತು ಮಾಡಿದ ಆರೋಪ. ಸರ್ಕಾರಕ್ಕೆ ಯಾವುದೇ ರಾಯಲ್ಟಿ ನೀಡದೆ ಅದಿರು ಕಳ್ಳತನ ಆರೋಪ ಹೊಂದಿದ್ರು ಈ ಸಂಬಂಧ ಆರು ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಇಂದು ಶಿಕ್ಷೆ ಪ್ರಕರಣ ಮಾಡಿದ ನ್ಯಾಯಾಲಯ
ಮೊದಲ ಕೇಸ್ ಅಲ್ಲಿ 6 ಕೋಟಿ ದಂಡ
ಎರಡನೇ ಕೇಸ್ ಅಲ್ಲಿ 9.6 ಕೋಟಿ ದಂಡ
ಮೂರನೇ ಕೇಸ್ ಅಲ್ಲಿ 9.36 ಕೋಟಿ ದಂಡ
ನಾಲ್ಕನೇ ಕೇಸ್ ಅಲ್ಲಿ 9.54 ಕೋಟಿ ದಂಡ
ಐದನೇ ಕೇಸ್ ನಲ್ಲಿ 9.25 ಕೋಟಿ ದಂಡ
ಆರನೇ ಕೇಸ್ ಅಲ್ಲಿ 90 ಲಕ್ಷ ದಂಡ ವಿಧಿಸಿದ ಕೋರ್ಟ್
ಆರೋಪಿಗಳು
1-ಸತೀಶ್ ಸೈಲು
2-ಮಹೇಶ್ ಬಿಳಿಯ
3-ಪ್ರೇಮಚಂದ್ ಗರ್ಗ್
4-ಖಾರದಪುಡಿ ಮಹೇಶ್
5-ಕೆ ವಿ ನಾಗರಾಜ್
6-ಗೋವಿಂದರಾಜ್
7-ಚೇತನ್ ಬಂಧಿತ ಆರೋಪಿಗಳು
ಪ್ರಕರಣದ ಮತ್ತೋರ್ವ ಆರೋಪಿ ಆಗಿರುವ ಐ ಎಲ್ ಸಿ ಕಪನಿಯ ಮಾಲೀಕ ಸೋಮಶೇಖರ್ ಈಗಾಗಲೇ ಮೃತಪಟ್ಟಿದ್ದಾರೆ
1- ಸತೀಶ್ ಸೈಲು ಕಾರವಾರ ಕಾಂಗ್ರೇಸ್ ಶಾಸಕ
2- ಮಹೇಶ್ ಬಿಳಿಯ ಡೆಪ್ಯೂಟಿ ಪೋರ್ಟ್ ಕನ್ಸರ್ವೇಟರ್ ಅಧಿಕಾರಿ
3- ಪ್ರೇಮಚಂದ್ ಗರ್ಗ್ ಲಾಲ್ವುಹಲ್ ಕಂಪೆನಿಯ ಮಾಲೀಕ
4- ಖಾರದಪುಡಿ ಮಹೇಶ್ ಶ್ರೀಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ
5- ಕೆ ವಿ ನಾಗರಾಜ್ ಮತ್ತು ಗೋವಿಂದರಾಜು – ಸ್ವಸ್ತಿಕ್ ಕಂಪೆನಿಯ ಮಾಲೀಕ
6- ಚೇತನ್ ಆಶಾಪುರ ಕಂಪೆನಿಯ ಮಾಲೀಕ