ಬೇಲಿಕೇರಿ ಅದಿರು ನಾಪತ್ತೆ ಕೇಸ್ನಲ್ಲಿ ಈಗಾಗಲೇ ಶಾಸಕ ಸತೀಶ್ ಸೈಲ್ (Satish sail) ಬಂಧನವಾಗಿದ್ದು, ಶಿಕ್ಷೆಯ ಪ್ರಮಾಣ ಕೂಡ ಪ್ರಕಟವಾಗಿದೆ.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತೀಶ್ ಸೈಲ್ಗೆ ಶಾಸಕ ಸ್ಥಾನ ಅನರ್ಹವಾಗುವ ಭೀತಿ ಶುರುವಾಗಿದೆ.
ಹೌದು, ಶಾಸಕ ಸತೀಶ್ ಸೈಲ್ ವಿರುದ್ಧದ ಕೋರ್ಟ್ನ ಆದೇಶ (Court order) ಈಗಾಗಲೇ ಸರ್ಕಾರದ ಕೈ ಸೇರಿದೆ.ಆದೇಶದ ಪ್ರತಿ ಸಿಕ್ಕ ಬೆನ್ನಲ್ಲೆ ಶಾಸಕ ಸ್ಥಾನ ಅನರ್ಹದ ಬಗ್ಗೆ ಚರ್ಚೆ ಶುರುವಾಗಿದೆ. ಈಗ ಶಾಸಕರನ್ನು ಅನರ್ಹಗೊಳಿಸು ಚಂಡು ವಿಧಾನ ಸಭೆಯ ಅಧ್ಯಕ್ಷರ (Spraker) ಅಂಗಳದಲ್ಲಿದೆ.
ಸಂವಿಧಾನದ ಪ್ರಕಾರ ಯಾವುದೇ ಶಾಸಕರ ವಿರುದ್ಧ ಬಂಧನದ ತೀರ್ಪು ಬಂದಾಗ ಸಹಜವಾಗಿಯೇ ಅವರು ಆನರ್ಹರಾಗುತ್ತಾರೆ. ಹೀಗಾಗಿ ಸತೀಶ್ ಸೈಲ್ ವಿರುದ್ಧ ಯಾವ ಕ್ರಮ ಜರುಗಿಸಬೇಕೆಂದು ಸ್ಪೀಕರ್ ಯು.ಟಿ.ಖಾದರ್ (U.T.Khadar) ತೀರ್ಮಾನ ಮಾಡಲಿದ್ದಾರೆ