ಕುಂಭಮೇಳದಲ್ಲಿ (Kumbh mela) ಕಾಲ್ತುಳಿತದಿಂದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಮಂಧಪಟ್ಟಂತೆ ವಿಧಾನಸೌಧದಲ್ಲಿ (Vidhanasoudha) ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish jarakiholi) ಮಾತನಾಡಿದ್ದಾರೆ.
ಬೆಳಗಾವಿಯವರು ನಾಲ್ಕುಜನ ಮೃತಪಟ್ಟಿದ್ದಾರೆ.ಇವತ್ತು ಸಂಜೆ ಅವರ ಮೃತದೇಹಗಳನ್ನು ತರಲಾಗುತ್ತದೆ.ಅವರ ಕುಟುಂಬದವರೇ ಏಳು ಮಂದಿ ಹೋಗಿದ್ದರು,ಉಳಿದವರು ವಾಪಸ್ ಬರ್ತಿದ್ದಾರೆ. ಮೃತರೆಲ್ಲರು ಬೆಳಗಾವಿ ನಗರ ಭಾಗದವರೇ ಎಂದು ಹೇಳಿದ್ದಾರೆ.
ಹೀಗೆ ಜಿಲ್ಲೆಯಿಂದ ಸಾವಿರಾರು ಜನ ಕುಂಭ ಮೇಳಕ್ಕೆ ಹೋಗಿದ್ದಾರೆ.ಆದರೆ ಮೃತಪಟ್ಟವರು ನಾಲ್ಕು ಜನ ಮಾತ್ರ.ರಾಜು ಸೇಠ್ ಅವರು ಸ್ಥಳದಲ್ಲೇ ಇದ್ದಾರೆ.ಅವರ ಕುಟುಂಬದವರನ್ನೂ ಭೇಟಿಯಾಗಿದ್ದಾರೆ.ಅವರು ಬಂದ ಮೇಲೆ ನಾನು ಹೋಗ್ತೇನೆ,ಹೆಚ್ಚಿನ ಮೃತರ ಬಗ್ಗೆ ಮಾಹಿತಿಗಳಿಲ್ಲ.ಅಧಿಕೃತವಾಗಿ ನಾಲ್ಕು ಮಂದಿಯದಷ್ಟೇ ಇರೋದು ಎಂದು ಸ್ಪಷ್ಟಪಡಿಸಿದ್ದಾರೆ.