ನಟ ದರ್ಶನ್ (Actor darshan) ಪರಪ್ಪನ ಅಗ್ರಹಾರ (Parappana agrahara) ಜೈಲು ಸೇರಿ ಮೂರು ದಿನ ಕಳೆದಿದ್ದು, ಜೈಲಲ್ಲಿ ಊಟ, ತಿಂಡಿ ಮಾಡೋಕೆ ಪರದಾಡ್ತಿದ್ದಾರಂತೆ. ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ದರ್ಶನ್‌ಗೆ ಕಷ್ಟವಾಗ್ತಿದೆ ಎನ್ನಲಾಗಿದೆ.

ಇನ್ನು ಸರಿಯಾಗಿ ನಿದ್ದೆಯು ಬರದೇ ರಾತ್ರಿ ಕೂಡ ದರ್ಶನ್ ತಡವಾಗಿ ಮಲಗಿದ್ದಾರೆ. ಬಳಿಕ ಸಿಬ್ಬಂದಿ ಕೊಟ್ಟ ಕಾಫಿ ಬದಲಿಗೆ ಬಿಸಿನೀರನ್ನ ಕೇಳಿ ಕುಡಿದಿದ್ದಾರೆ. ಇನ್ನೂ ದರ್ಶನ್ ವಿಶೇಷ ಬ್ಯಾರಕ್‌ನಲ್ಲಿ ಧನರಾಜ್, ವಿನಯ್, ಪ್ರದೂಶ್ ಜೊತೆ ಒಂದೇ ಕೊಠಡಿಯಲ್ಲಿದ್ದಾರೆ. ಆದ್ರೆ, ಸಹಕೈದಿಗಳು ಮಾತನಾಡಲು ಯತ್ನಿಸಿದ್ರೂ ದರ್ಶನ್ ಯಾರ ಜೊತೆಯೂ ಬೆರೆಯದೇ ಮೌನಕ್ಕೆ ಶರಣಾಗಿದ್ದಾರೆ.
ಇನ್ನು ಪತ್ನಿ ವಿಜಯಲಕ್ಷ್ಮೀ (Vijayalakshmi), ಪುತ್ರ ವಿನೀಶ್ (Vineesh) ಜೈಲಿಗೆ ಭೇಟಿ ನೀಡಿ ದರ್ಶನ್ ಭೇಟಿಯಾಗಿದ್ದಾರೆ. ಪತ್ನಿ. ಮಗನನ್ನು ಕಂಡು ದರ್ಶನ್ ಭಾವುಕರಾಗಿದ್ದಾರೆ. ಪತ್ನಿ, ಮಗ ಭೇಟಿಯ ಬಳಿಕ ಮತ್ತಷ್ಟು ಮಂಕಾಗಿ ಫುಲ್ ಸೈಲೆಂಟ್ ಆಗಿದ್ದಾರೆ ಎನ್ನಲಾಗ್ತಿದೆ.