ನವದೆಹಲಿ;ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಜನವರಿ 16 ರಿಂದ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯ ಸಾನಿಯಾ ಅವರ ಕೊನೆಯ ಟೂರ್ನಿಯಾಗಿದೆ ಎಂದು ಸಾನಿಯಾ ಮಿರ್ಜಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Life update 🙂 pic.twitter.com/bZhM89GXga
— Sania Mirza (@MirzaSania) January 13, 2023
ಫೆಬ್ರವರಿ 19 ರಂದು ಆರಂಭವಾಗಲಿರುವ ಡಬ್ಲ್ಯುಟಿಎ 1000 ದುಬೈ ಟೆನಿಸ್ ಚಾಂಪಿಯನ್ ಶಿಪ್ ನಂತರ ನಿವೃತ್ತಿಯಾಗುವುದಾಗಿ ಸಾನಿಯಾ ಈ ಹಿಂದೆ ಘೋಷಿಸಿದ್ದರು.
ಆದರೆ ಇದೀಗ ಆಸ್ಟ್ರೇಲಿಯನ್ ಓಪನ್ ಬೆನ್ನಲ್ಲೇ ತಮ್ಮ ವೃತ್ತಿಜೀವನವನ್ನ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.