ಬೆಂಗಳೂರು: ಕನ್ನಡ ಚಿತ್ರರಂಗದ ನಟ ಮಯೂರ್ ಪಾಟೀಲ್(Mayur Patel) ಕುಡಿದ ಅಮಲಿನಲ್ಲಿ ಸರಣಿ ಅಪಘಾತ ನಡೆಸಿರುವ ಆರೋಪ ಕೇಳಿಬಂದಿದೆ.

ಮೊನ್ನೆ ರಾತ್ರಿ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ತನ್ನ ಫಾರ್ಚುನರ್ ಕಾರಿನಿಂದ ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂದೆಯಿಂದ ಡಿಕ್ಕಿ ಹೊಡೆದಿದ್ದಾರೆ. ಮಯೂರ್ ಪಟೇಲ್ ಕಾರ್ ಡಿಕ್ಕಿ ರಭಸಕ್ಕೆ ಮೂರು ಕಾರುಗಳು ಜಖಂ ಆಗಿವೆ.

ಅಪಘಾತ ಬಳಿಕ ಪೊಲೀಸ್ ಕಂಟ್ರೋಲ್ ರೂಮ್‌ಗೆ ಜಖಂ ಆದ ಕಾರು ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಮಯೂರ್ ಪಟೇಲ್ ಅವರನ್ನು ಹಲಸೂರು ಸಂಚಾರಿ ಠಾಣೆಗೆ ಕರೆತಂದು ಡ್ರಂಕ್ ಅಂಡ್ ಡ್ರೈವ್ ಚೆಕ್ ಮಾಡಿದರು. ತಪಾಸಣೆ ವೇಳೆ ಮಯೂರ್ ಪಟೇಲ್ ಕುಡಿದಿರೋದು ಗೊತ್ತಾಗಿದ್ದು, ಕಾರ್ ಮಾಲೀಕ ಶ್ರೀನಿವಾಸ್ ದೂರಿನ ಮೇರೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಸದ್ಯ ನಟ ಮಯೂರ್ ಪಟೇಲ್ ಕಾರ್ ಸೀಜ್ ಮಾಡಿರೋ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆದಾಗ ಬರಬೇಕೆಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಮಯೂರ್ ಪಟೇಲ್ ಫಾರ್ಚುನರ್ ಕಾರ್ ಇನ್ಸೂರೆನ್ಸ್ ಇರಲಿಲ್ಲ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಯೂರ್ ಪಟೇಲ್, ಕಾರ್ ಬ್ರೇಕ್ ಫೇಲ್ಯೂರ್ ಆಗಿ ಅಪಘಾತವಾಗಿದೆ, ಕಾರಿಗೆ ಇನ್ಸುರೆನ್ಸ್ ಕೂಡ ಇದೆ ಎಂದು ತಿಳಿಸಿದ್ದಾರೆ











