ಕಿರುತೆರೆಯ ಜನಪ್ರಿಯ ಹಾಸ್ಯ ನಟ ಗಿಲ್ಲಿ(Gilli Nata) ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12ರ(Bigg Boss Kannada Season 12) ವಿನ್ನರ್ ಪಟ್ಟವನ್ನು ಗೆದ್ದು ಬೀಗಿದ್ದಾರೆ. ನಿನ್ನೆ ಗಿಲ್ಲಿ ಹುಟ್ಟೂರಿನಲ್ಲಿ ಮೆರವಣಿಗೆ ಜೋರಾಗಿ ನಡೆದಿದ್ದು, ಬಿಗ್ ಬಾಸ್ ವಿನ್ನರ್ ಆದ ಊರಿನ ಮಗನನ್ನು ನೋಡಲು ಮಳವಳ್ಳಿ ಜನ ಮುಗಿಬಿದ್ದರು.

ಈ ಬಾರಿ ಬಿಗ್ ಬಾಸ್‌ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ(Ashwini Gowda) ಅವರ ನಡುವೆ ಜಿದ್ದಾಜಿದ್ದಿಯ ಫೈಟ್ ಇತ್ತು. ಬಿಗ್ ಬಾಸ್ ಮನೆಯೊಳಗೆ ಇಬ್ಬರೂ ತಮ್ಮದೇ ವ್ಯಕ್ತಿತ್ವದಲ್ಲಿ ಆಟವಾಡಿದರೆ, ಹೊರಗಡೆಯೂ ಇಬ್ಬರ ಜನಪ್ರಿಯತೆ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಾಗಿತ್ತು. ಮನೆಯೊಳಗಿನ ಇಬ್ಬರ ಆಟವನ್ನು ಜನರಿಗೆ ತಲುಪಿಸುವಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರ ಸೋಶಿಯಲ್ ಮೀಡಿಯಾ(Social Media) ಹೆಚ್ಚಿನ ಪಾತ್ರ ವಹಿಸಿದೆ.
ಇದನ್ನೂ ಓದಿ: BBK 12: ಗಿಲ್ಲಿ ಗೆದ್ರೆ ಕಾಲ ಕೆಳಗೆ ನುಗ್ತೀನಿ ಎಂದಿದ್ದ ಡಾಗ್ ಸತೀಶ್ ಈಗೇನ್ ಮಾಡ್ತಾರೆ..?
ಬಿಗ್ ಬಾಸ್ ಮನೆಯಲ್ಲಿನ ಆಟವನ್ನು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಜನರಿಗೆ ತಲುಪಿಸಿದ್ದು, ಇದರಿಂದ ಇನ್ನಷ್ಟು ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಇದರಲ್ಲಿ ಇಂಟ್ರಸ್ಟಿಂಗ್ ವಿಚಾರವೆಂದರೆ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಅವರ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಿರುವುದು ಒಂದೇ ಸಂಸ್ಥೆ.

ಹೌದು ಇಬ್ಬರು ಕೂಡ ಒಂದೇ ಪಿಆರ್ ಸಂಸ್ಥೆಗೆ ತಮ್ಮ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಲು ನೀಡಿದ್ದಾರೆ ಎನ್ನುವ ವಿಚಾರ ಬಿಗ್ ಬಾಸ್ ಮುಗಿದ ಬಳಿಕ ತಿಳಿದು ಬಂದಿದೆ. ಗಿಲ್ಲಿ ನಟ ತಮ್ಮ ಗೆಲುವಿನ ಪೋಸ್ಟ್‌ನಲ್ಲಿ ರಿಲೆಂಟ್ಕ್ರಿಯೇಷನ್ಸ್ (RelentCreations) ಹೆಸರು ಉಲ್ಲೇಖಿಸಿದ್ದರೆ, ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮಾಡಿದ ತಮ್ಮ ಮೊದಲ ವಿಡಿಯೋದಲ್ಲಿ ರಿಲೆಂಟ್ಕ್ರಿಯೇಷನ್ಸ್ ಸಂಸ್ಥೆಗೆ ಧನ್ಯವಾದ ಹೇಳಿದ್ದಾರೆ.

ಅತ್ತ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪಿಆರ್ ಕೃಪೆಯ ಪೋಸ್ಟ್‌ಗಳು ಎಂದು ಬೈದಾಡಿಕೊಳ್ಳುತ್ತಿದ್ದರೆ, ಇತ್ತ ಇಬ್ಬರೂ ಒಂದೇ ಪಿಆರ್‌ಗೆ ತಮ್ಮ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಲು ಕೊಟ್ಟಿರುವುದು ತಮಾಷೆಯಾಗಿದೆ ಎಂದು ಕೆಲ ಬಿಗ್ ಬಾಸ್ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.













