ಹೆಣ್ಣು ಮಕ್ಕಳಿಂದ ಹೆಚ್ಚಾಗಿ ಕೇಳ್ತಾ ಇರುವಂತ ಒಂದು ಕಂಪ್ಲೇಂಟ್ ಅಂತ ಹೇಳಿದ್ರೆ ನಮಗೆ ರೆಗ್ಯುಲರ್ ಆಗಿ ಪಿರಿಯಡ್ಸ್ ಆಗ್ತಾ ಇಲ್ಲ..ಒಂದು ತಿಂಗಳು ಮುಟ್ಟು ಬೇಗಾ ಆದ್ರೆ , ಮತ್ತೊಂದು ತಿಂಗಳು ಲೇಟ್ ಆಗಿ ಆಗುತ್ತದೆ ಅಂತ.. ಇದಕ್ಕೆ ಕಾರಣ ಏನು ಅಂತ ನೋಡಿದಾಗ ನಮ್ಮ ಲೈಫ್ ಸ್ಟೈಲ್, ಒತ್ತಡ, ಆಹಾರ ಪದ್ಧತಿ,ಹಾರ್ಮೋನಲ್ ಇಂಬ್ಯಾಲೆನ್ಸ್, ಕೆಲವು ಹೆಣ್ಣು ಮಕ್ಕಳು ಗರ್ಬಾ ನಿರೋದಕ ಮಾತ್ರೆಗಳನ್ನ ತಗೊಳ್ತಾರೆ ಇದು ಪ್ರಮುಖ ಕಾರಣ ಹಾಗೂ ಪೋಸ್ಟ್ ಪೀರಿಯಡ್ ಟ್ಯಾಬ್ಲೆಟ್ ಇಂದಾಗಿಯು ಇರ್ರೇಗುಲರ್ ಪಿರಿಯಡ್ಸ್ ಆಗೋದಿಕ್ಕೆ ಅವಕಾಶ.. ನಿಮ್ಮ ಇರ್ರೆಗುಲರ್ ಪಿರಿಯಡ್ಸ್ ಇಂದ ಮುಕ್ತಿ ಸಿಗಬೇಕು ಅಂದ್ರೆ ಈ ಮನೆಮದ್ದನ್ನು ಟ್ರೈ ಮಾಡಿ.

ಸೋಂಪು ಕಾಳು
ಸೋಂಪು ಕಾಳುಗಳಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು .. ಇರ್ರೆಗುಲರ್ ಪಿರಿಯಡ್ಸ್ ಆಗ್ತಾ ಇದ್ರೆ ನಮ್ಮ ಹಾರ್ಮೋನ್ ಬ್ಯಾಲೆನ್ಸ್ ಮಾಡೋದಕ್ಕೆ ಸೋಂಪು ಕಾಳುಗಳು ಸಹಾಯ ಮಾಡುತ್ತೆ… ದಿನಕ್ಕೆ ಎರಡು ಬಾರಿ ಸೋಂಪು ಕಾಳುಗಳನ್ನ ತಿನ್ನೋದ್ರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ ..ಇನ್ನು ಸೋಂಪು ಕಾಳಿನಲ್ಲಿ ವಿಟಮಿನ್ ಸಿ ಅಂಶ ,ಪೊಟಾಸಿಯಂ, ಕ್ಯಾಲ್ಸಿಯಂ,ಕಬ್ಬಿನಾಂಶ ಎಲ್ಲವೂ ಕೂಡ ದೊರೆಯುತ್ತೆ..

ಮೆಂತ್ಯೆ ನೀರು
ರಾತ್ರಿ ಮಲಗುವುದಕ್ಕಿಂತ ಮುಂಚೆ ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಟೇಬಲ್ ಸ್ಪೂನ್ ನಷ್ಟು ಮೆಂತ್ಯೆಯನ್ನ ಹಾಕಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಮೆಂತ್ಯೆ ಹಾಗೂ ಆ ನೀರನ್ನ ಕುಡಿಯುವುದರಿಂದ ನಮ್ಮ ಇರ್ರೆಗುಲರ್ ಪಿರಿಯಡ್ಸ್ ಪ್ರಾಪರ್ ಆಗುತ್ತೆ. ಮೆಂತ್ಯ ನೀರನ್ನು ಕುಡಿಯೋದ್ರಿಂದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮೆಂತೆ ತುಂಬಾನೆ ತಂಪು..

ಬೆಲ್ಲ
ಬೆಲ್ಲ ಇದನ್ನು ಹೆಚ್ಚಾಗಿ ಋತುಚಕ್ರವನ್ನು ನಿಯಂತ್ರಿಸಲು ಸ ಔಷಧದಲ್ಲಿ ಬಳಸಲಾಗುತ್ತದೆ. ಇದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು ಗರ್ಭಾಶಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ..

ಶುಂಠಿ
ಸಾಕಷ್ಟು ವರ್ಷಗಳಿಂದನು ಶುಂಠಿಯನ್ನ ಮುಟ್ಟಿನ ಸಮಸ್ಯೆಗೆ ಬೆಸ್ಟ್ ರೆಮಿಡಿ ಅಂತಾರೆ.. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಮುಟ್ಟಿನ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ.ಹಾಗೂ ಮುಟ್ಟಿನ ಸಮಸ್ಯೆ ಇದ್ರೂ ಕೂಡ ನಿವಾರಣೆ ಮಾಡುತ್ತದೆ..

ಪೈನಪಲ್
ಈ ಹಣ್ಣನ್ನ ತಿನ್ನೋದ್ರಿಂದ ನಮ್ಮ ದೇಹದ ಉಷ್ಣತೆ ಹೆಚ್ಚಾಗತ್ತೆ ಹಾಗೂ. ಪಿರಿಯಡ್ಸ್ ತೊಂದ್ರೆ ಸರಿಯಾಗತ್ತೆ.. ಆದ್ರೆ ಹೆಚ್ಚಾಗಿ ಈ ಹಣ್ಣನ್ನ ತಿನ್ನೋದಿಕ್ಕೆ ಹೋಗ್ಬಾರ್ದು..

ಒಟ್ಟಿನಲ್ಲಿ ಸರಿಯಾದ ಸಮಯಕ್ಕೆ ಮುಟ್ಟು ಆಗದಿದ್ರೆ ಪ್ರಾಪರ್ ಡಯಟ್, ಸರಿಯಾದ ನಿದ್ದೆ, ಎಕ್ಸರ್ಸೈಸ್,ಸ್ಟ್ರೆಸ್ ಕಡಿಮೆ ಆಗ್ಬೇಕು..