• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಮರ್ಥ್‌ ಆ ಒಂದು ಕಾರಣಕ್ಕೆ ಗೆದ್ದೇ ಗೆಲ್ತಾರೆ : ದಾವಣಗೆರೆ ವಿನ್ನಿಂಗ್‌ ಸ್ಟ್ಯಾಟೆಜಿ ಬಿಚ್ಚಿಟ್ಟ ಡಿಕೆ ಶಿವಕುಮಾರ್‌..

ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಒದಗಿಸಿಕೊಂಡು ಬಂದಿದ್ದೇವೆ : ಡಿಸಿಎಂ

ಪ್ರತಿಧ್ವನಿ by ಪ್ರತಿಧ್ವನಿ
March 23, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸಮರ್ಥ್‌ ಆ ಒಂದು ಕಾರಣಕ್ಕೆ ಗೆದ್ದೇ ಗೆಲ್ತಾರೆ : ದಾವಣಗೆರೆ ವಿನ್ನಿಂಗ್‌ ಸ್ಟ್ಯಾಟೆಜಿ ಬಿಚ್ಚಿಟ್ಟ ಡಿಕೆ ಶಿವಕುಮಾರ್‌..
Share on WhatsAppShare on FacebookShare on Telegram

ದಾವಣಗೆರೆ : ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ, ಶಾಮನೂರು ಶಿವಶಂಕರಪ್ಪ ಈ ಭಾಗಕ್ಕೆ ನೀಡಿರುವ ಕೊಡುಗೆಯಿಂದ ಈ ಭಾಗದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT
Eshwara Khandre: ಬಾಗಲಕೋಟೆ, ದಾವಣಗೆರೆ ಎರಡೂ ಕ್ಷೇತ್ರ ಬಹುಮತದಿಂದ ನಾವೇ ಗೆಲ್ಲುತ್ತೇನೆ..! #zameerahmedkhan

ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು, ನಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಯುಬ್ ಹಾಗೂ ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥ್ ಅವರು ಇಂದು ಉಪಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಒಮ್ಮತದಿಂದ ಸಮರ್ಥ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ತಮ್ಮದೇ ಆದ ಆಸೆ, ಆಕಾಂಕ್ಷೆಯೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಮರ್ಥ್ ಮತ್ತೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಶಾಮನೂರು ಶಿವಶಂಕರಪ್ಪನವರೇ ತಡೆದಿದ್ದರು. ಇಲ್ಲೇ ಇದ್ದು ವೃತ್ತಿ ಮಾಡುವಂತೆ ಹೇಳಿದ್ದರು. ಕ್ಷೇತ್ರದ ಜನತೆ, ಎಲ್ಲಾ ವರ್ಗದ ಮುಖಂಡರು, ಪಕ್ಷದ ವರಿಷ್ಠರು ಎಲ್ಲರೂ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ : BREAKING NEWS : ಶಾಮನೂರು, ಮೇಟಿ ಕುಟುಂಬಕ್ಕೆ ಟಿಕೆಟ್‌ ಘೋಷಣೆ : ಯಾರ ಕೈ ಮೇಲು..?

ಈ ಮಧ್ಯೆ ಮುಸಲ್ಮಾನ ಸಮುದಾಯದ ಶಾಸಕರುಗಳು ಈ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ನೀವು ನಮಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ನಾವು ಲೆಕ್ಕಾಚಾರ ಹಾಕಿದೆವು. ಕಾಂಗ್ರೆಸ್ ಪಕ್ಷ ಈ ಹಿಂದೆ ಟಿಕೆಟ್ ನೀಡಲಾಗದ ಕಾರಣಕ್ಕೆ ಅಬ್ದುಲ್ ಜಬ್ಬಾರ್ ಅವರನ್ನು ಮೂರು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ಮುಂದಿನ ದಿನಗಳಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈ ಸಮಾಜಕ್ಕೆ ನ್ಯಾಯ ಒದಗಿಸಿಕೊಂಡು ಬಂದಿದ್ದೇವೆ. ಇದನ್ನು ಮುಂದುವರಿಸುತ್ತೇವೆ. ಇದು ನಮ್ಮ ಪಕ್ಷದ ಸಿದ್ಧಾಂತ ಎಂದು ಭರವಸೆ ನೀಡಿದ್ದಾರೆ.

ಈ ದಾವಣಗೆರೆ ಜಿಲ್ಲೆ ಬೆಂಗಳೂರಿಗಿಂತ ಬಹಳ ಉತ್ತಮವಾಗಿ ಯೋಜಿತವಾಗಿ ರೂಪುಗೊಂಡಿರುವ ನಗರವಾಗಿದೆ. ಇದರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತದ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಈ ಭಾಗಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ, ಶಿಕ್ಷಣ ಸಂಸ್ಥೆ ಆ ಮೂಲಕ ಈ ಜಿಲ್ಲೆ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಈ ಪ್ರಗತಿಗೆ ಕೊಡುಗೆ ನೀಡಿದ್ದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಹಾಗೂ ಅವರ ಸಂಸ್ಥೆ. ಇದೆಲ್ಲವನ್ನು ಜನ ಸ್ಮರಿಸುತ್ತಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.

ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಎಲ್ಲಾ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ನೀಡಿರುವ ಕೊಡುಗೆಯನ್ನು ಜನ ಸ್ಮರಿಸುತ್ತಿದ್ದಾರೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಸ್ಥಳೀಯ ಮಾಧ್ಯಮಗಳು ನಮಗೆ ತಮ್ಮ ಮನವಿ ಸಲ್ಲಿಸಿದ್ದು, ನಾವು ಬೆಂಗಳೂರಿಗೆ ಹೋದ ಬಳಿಕ ಕೂತು ಚರ್ಚೆ ಮಾಡಿ ಈ ವಿಚಾರವಾಗಿ ಯಾವ ರೀತಿ ನೀತಿ ರೂಪಿಸಬೇಕು ಎಂದು ಚರ್ಚೆ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಭಯ ನೀಡಿದ್ದಾರೆ.

ಅಲ್ಪಸಂಖ್ಯಾತರು ಟಿಕೆಟ್‌ ಕೇಳುವುದರಲ್ಲಿ ತಪ್ಪಿಲ್ಲಾ..

ಪಕ್ಷದಲ್ಲಿ ಗೊಂದಲ ಹಾಗೂ ಬಂಡಾಯದ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌, ರಾಜಕೀಯದಲ್ಲಿ ಎಲ್ಲರಿಗೂ ತಮ್ಮ ಬೇಡಿಕೆ ಕೇಳುವ ಅಧಿಕಾರವಿದೆ. ಅವರು ಕೇಳುವುದರಲ್ಲಿ ತಪ್ಪಿಲ್ಲ. ಪಕ್ಷಕ್ಕೆ ದುಡಿದಿರುತ್ತಾರೆ, ಅವರಿಗೆ ಕೇಳುವ ಹಕ್ಕಿರುತ್ತದೆ. ಇರುವುದು ಒಂದು ಸೀಟು. ನಾವು ಮೊದಲಿನಿಂದಲೂ ಎಲ್ಲರಿಗೂ ಅಧಿಕಾರ ನೀಡುತ್ತಾ ಬಂದಿದ್ದು, ಎಲ್ಲಾ ವಿಚಾರವನ್ನು ಬಗೆಹರಿಸುತ್ತೇವೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಒಬ್ಬರು ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಶಾಮನೂರು ಶಿವಶಂಕರಪ್ಪ ಅವರ ಆತ್ಮೀಯರು. ಅವರು ಹಾಗೂ ಇತರರ ಜತೆ ನಾವು ಚರ್ಚೆ ಮಾಡುತ್ತಿದ್ದು, ಎಲ್ಲವನ್ನು ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸದ ಮೇಲೆ, ಸಾಮಾಜಿಕ ಚಿಂತನೆ, ಎಲ್ಲಾ ಸಮಾಜಕ್ಕೂ ನೀಡುತ್ತಿರುವ ನ್ಯಾಯದ ಮೇಲೆ ಚುನಾವಣೆ ಮಾಡುತ್ತೇವೆ. ಇದೇ ನಮ್ಮ ಪಕ್ಷದ ಮೂಲ ಸಿದ್ಧಾಂತ ಎಂದು ಡಿಕೆ ಶಿವಕುಮಾರ್‌ ಪ್ರತಿಪಾದಿಸಿದ್ದಾರೆ.

Tags: b. z. zameer ahmed khanBJPCM Siddaramaiahcongress karnatakadavanagere By PollsDavanagere PoliticsDK ShivakumarDr PrabhaFamily Politicsguarantee schemeskarnatka governmentMinority LeaderMuslim CommunityPratidhvaniSadika PailwanSS Mallikarjun
Previous Post

ಶಾಮನೂರು ಕುಟುಂಬ ಕಾಂಗ್ರೆಸ್‌ಗೆ ಮಹತ್ವದ ಕೊಡುಗೆ ನೀಡಿದೆ : ಸಿಎಂ ಸಿದ್ದರಾಮಯ್ಯ..

Next Post

ಇರಾನ್‌ ಹೊಡೆತಕ್ಕೆ ತತ್ತರಿಸಿದ ಟ್ರಂಪ್‌ : 5 ದಿನಗಳ ಕದನ ವಿರಾಮ ಘೋಷಣೆ..

Related Posts

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!
Top Story

ಲೆಕ್ಕ ಕೊಡಿ ಅಭಿಯಾನದ ಎಫೆಕ್ಟ್‌ : ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆಯ ಹರಿಹರ ಪಂಚಮಸಾಲಿ ಗುರು ಪೀಠದಿಂದ ಶ್ವಾಸಗುರು ವಚನಾನಂದ ಸ್ವಾಮೀಜಿಯವರನ್ನು ಉಚ್ಚಾಟಿಸಲಾಗಿದೆ. ಇಂದು ಸಭೆ ಸೇರಿದ್ಧ ಧರ್ಮ ದರ್ಶಿ ಮಂಡಳಿಯ 15 ಸದಸ್ಯರ...

Read moreDetails
ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
Next Post
ಇರಾನ್‌ ಹೊಡೆತಕ್ಕೆ ತತ್ತರಿಸಿದ ಟ್ರಂಪ್‌ : 5 ದಿನಗಳ ಕದನ ವಿರಾಮ ಘೋಷಣೆ..

ಇರಾನ್‌ ಹೊಡೆತಕ್ಕೆ ತತ್ತರಿಸಿದ ಟ್ರಂಪ್‌ : 5 ದಿನಗಳ ಕದನ ವಿರಾಮ ಘೋಷಣೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada