ಬೆಂಗಳೂರು : ರಾಜ್ಯಕ್ಕೆ ಮತ್ತೊಂದು ಬಾರಿ ಸಿಎಂ ಆಗಿ ಆಯ್ಕೆಯಾಗಿರುವ ಸಿಎಂ ಸಿದ್ದರಾಮಯ್ಯಗೆ ಪದ್ಮಶ್ರೀ ಪುರಸ್ಕೃತೆ , ನಾಡೋಜ ಸಾಲು ಮರದ ತಿಮ್ಮಕ್ಕ ಶುಭ ಹಾರೈಸಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಶುಭ ಹಾರೈಸಿದ್ದಾರೆ.

ನಾಡಿನಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿ, ಉತ್ತಮ ಆಡಳಿತ ನಡೆಸುವಂತಾಗಲಿ ಎಂದು ಸಾಲುಮರದ ತಿಮ್ಮಕ್ಕ ಶುಭಹಾರೈಸಿದ್ದಾರೆ.
ತಿಮ್ಮಕ್ಕರ ಶುಭ ಹಾರೈಕೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ, ಸರ್ಕಾರ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಸಿದ್ದರಾಮಯ್ಯ ತಿಮ್ಮಕ್ಕರಿಗೆ ತಿಳಿಸಿದರು.