ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಇತ್ತೀಚಿಗೆ ಬಿಟ್ಟೂ ಬಿಡದೇ ಕೊಲೆ ಬೆದರಿಕೆ ಎದುರಾಗ್ತಾನೇ ಇದೆ. ಸಲ್ಮಾನ್ ಖಾನ್ರನ್ನ ಮುಗಿಸೋಕೆ ಲಾರೆನ್ಸ್ ಬಿಷ್ಣೋಯ್ ತಂಡ ಪ್ಲ್ಯಾನ್ ಮಾಡಿದೆ. ಈಗಾಗಲೇ ನಟ ಸಲ್ಮಾನ್ ಖಾನ್ ಮೇಲೆ ಪೊಲೀಸರ ಕಣ್ಗಾವಲಿದೆ. ಸಲ್ಲು ಹೋದಲ್ಲಿ ಬಂದಲ್ಲಿ ಖಾಕಿ ಅವರನ್ನ ಕಾಯ್ತಿದೆ.
ಹೀಗಿರುವಾಗ್ಲೇ ಸಲ್ಮಾನ್ ಖಾನ್ಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ. ಇದೇ ಏಪ್ರಿಲ್ 30ಕ್ಕೆ ಸಲ್ಲುನ ಕೊಲೆ ಮಾಡೋದಾಗಿ ರಾಕಿ ಎಂಬ ವ್ಯಕ್ತಿ ಕರೆ ಮಾಡಿದ್ದಾನಂತೆ. ಇದರಿಂದ ಸಲ್ಮಾನ್ ಖಾನ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಲಾರೆನ್ಸ್ ಬಿಷ್ಣೋಯ್ ದೊಡ್ಡ ಗ್ಯಾಂಗ್ಸ್ಟರ್. ಸಲ್ಮಾನ್ ಖಾನ್ರನ್ನ ಕೊಲ್ಲೋಕೆ ಈತ ಹೊಂಚು ಹಾಕಿದ್ದಾನೆ. ಇದಕ್ಕೆ ಕಾರಣವೂ ಇದೆ. ನಟ ಸಲ್ಮಾನ್ ಖಾನ್ ಕೃಷ್ಣ ಮೃಗವನ್ನ ಬೇಟೆಯಾಡಿದ್ದೇ ಈ ಹಗೆತನಕ್ಕೆ ಕಾರಣ. ಬಿಷ್ಣೋಯ್ ಸಮುದಾಯವರು ಕೃಷ್ಣ ಮೃಗವನ್ನ ದೇವರಂತೆ ಕಾಣುತ್ತಾರೆ.
ಸಲ್ಲು ಕೃಷ್ಣ ಮೃಗವನ್ನು ಭೇಟೆಯಾಡಿ ಕೊಂದಿದ್ದರಿಂದ, ಲಾರೆನ್ಸ್ ಸಲ್ಮಾನ್ ಖಾನ್ ಮೇಲೆ ಕತ್ತಿ ಮಸೆಯುತ್ತಿದ್ದಾನೆ. ಈ ಹಿಂದೆ ಕೂಡ ಈತ ಸಲ್ಮಾನ್ ಖಾನ್ರನ್ನ ಕೊಲ್ಲಲು ಪ್ಲ್ಯಾನ್ ಮಾಡಿದ್ದ. ಈ ಬೆನ್ನಲ್ಲೇ ಸಲ್ಲುಗೆ ಮತ್ತೊಂದು ಬೆದರಿಕೆ ಕರೆ ಬಂದಿದೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮುಂಬೈ ಪೋಲೀಸರ ಕಂಟ್ರೋಲ್ ರೂಮ್ಗೆ ಕರೆ ಬಂದಿದೆ. ಏಪ್ರಿಲ್ 30ನೇ ತಾರೀಖು ಸಲ್ಮಾನ್ಖಾನ್ರನ್ನ ಹತ್ಯೆ ಮಾಡ್ತೀವಿ ಅಂತ ವ್ಯಕ್ತಿಯೊಬ್ಬ ಹೇಳಿದ್ದಾನೆ. ಈ ಹಿನ್ನೆಲೆ ಪೊಲೀಸರು ಹೈ ಅಲರ್ಟ್ ಆಗಿದ್ದು, ಪ್ರಕರಣ ಸಂಬಂಧ ತನಿಖೆ ಶುರು ಮಾಡಿದ್ದಾರೆ..