ನವದೆಹಲಿ:ಫ್ಯಾಷನ್ ವೇಗವಾಗಿ (Fashion is fast)ಬದಲಾಗುವ ಒಂದು ವಿಷಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಬದಲಾವಣೆ ಇರುತ್ತದೆ, ಫ್ಯಾಶನ್ (Fashion)ತುಂಬಾ ವೇಗವಾಗಿ ಬದಲಾಗುತ್ತದೆ. ಕೆಲವೊಮ್ಮೆ ಇಂತಹ ಕೆಲವು ಫ್ಯಾಷನ್‌ಗಳು ಜನರನ್ನು ಬೆಚ್ಚಿ ಬೀಳಿಸುತ್ತವೆ. ಇದೀಗ ಅಂತಹ ಒಂದು ಫ್ಯಾಶನ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿಯವರೆಗೆ ನೀವು ಅನೇಕ ರೀತಿಯ ಬಟ್ಟೆಗಳಿಂದ ಮಾಡಿದ ಪಲಾಝೋ ಪ್ಯಾಂಟ್ಗಳನ್ನು ನೋಡಿರಬಹುದು. ನೀವು ವಿವಿಧ ಬಣ್ಣಗಳು ಮತ್ತು ಬೆಲೆಗಳ ಪಲಾಜೋಗಳನ್ನು ನೋಡಿರಬೇಕು ಮತ್ತು ಖರೀದಿಸಿರಬೇಕು. ಆದರೆ ನೀವು ಎಂದಾದರೂ ಗೋಣಿ (sack pant)ಚೀಲಗಳಿಂದ ಮಾಡಿದ ಪಲಾಝೋವನ್ನು (Palazzo)ಖರೀದಿಸಿದ್ದೀರಾ? ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಆಲೂಗಡ್ಡೆಯನ್ನು ಸಂಗ್ರಹಿಸಲು ಬಳಸುವ ಚೀಲದಿಂದ ಮಾಡಲಾದ ಪಲಾಝೋವನ್ನು ನೋಡಲಾಗಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
इस हिसाब से तो मैं भी लखपति हूं 400 नग कच्चा माल पडा है गोदाम में 😂😂 pic.twitter.com/FK0bB8GUiN
— Mikoo (@Mr_mikoo) September 16, 2024
ಗೋಣಿಚೀಲವನ್ನು ಸಾಮಾನ್ಯವಾಗಿ ನಾವು ಭತ್ತ ಮತ್ತು ಅಕ್ಕಿಯಂತಹ ಧಾನ್ಯಗಳನ್ನು ತುಂಬಲು ಚೀಲಗಳನ್ನು ಬಳಸುತ್ತೇವೆ. ಕೃಷಿ ಸಂಬಂಧಿತ ಉದ್ದೇಶಗಳಿಗಾಗಿ ನಾವು ಹೆಚ್ಚಾಗಿ ಗೋಣಿ ಚೀಲಗಳನ್ನು ಬಳಸುತ್ತೇವೆ. ಆದರೆ ಗೋಣಿಚೀಲಕ್ಕೆ ಬಳಸಿದ ಬಟ್ಟೆಯಿಂದಲೇ ಪ್ಯಾಂಟ್ ಹೊಲಿಯುತ್ತಿದ್ದರೆ.? ಕೇಳಲು ಆಸಕ್ತಿದಾಯಕವಾಗಿದೆ! ಆದರೆ ಇದು ನಿಜ.
ಈ ವೀಡಿಯೊವನ್ನು @Mr_mikoo ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ, ಸುದ್ದಿ ಬರೆಯುವವರೆಗೆ, ವೀಡಿಯೊವನ್ನು 1800 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಜನರು ತಮ್ಮ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಕೆಲವರು ಗೋಣಿಚೀಲ ಪ್ಯಾಂಟ್ ಗಳನ್ನು ರೂ. 60 ಸಾವಿರ ಕೊಟ್ಟು ಖರೀದಿಸಬೇಕು ಎಂದು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ.