S.M ಕೃಷ್ಣ ನಿಧನರಾದ ಬಳಿಕ ಒಂದು ದಿನ ಸದನ ರದ್ದು ಮಾಡಿದ ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಬಂದ ಸಿಎಂ ಸಿದ್ದರಾಮಯ್ಯ, ನೇರವಾಗಿ ಸದಾಶಿವನಗರಕ್ಕೆ ಆಗಮಿಸಿ ಎಸ್.ಎಂ ಕೃಷ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದ್ರು.
ಕರ್ನಾಟಕದಲ್ಲಿ ದೀರ್ಘಕಾಲ ರಾಜಕೀಯ ಮಾಡಿದವರು S.M ಕೃಷ್ಣ, 6 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲೂ S.M ಕೃಷ್ಣ ಇದ್ದರು. ಈ ರೀತಿಯ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಕೃಷ್ಣ ಕೂಡ ಒಬ್ಬರು. ರಾಜ್ಯದ ಮುಖ್ಯಮಂತ್ರಿಯಾಗಿ ಎಸ್.ಎಂ ಕೃಷ್ಣ ಸೇವೆ ಸಲ್ಲಿಸಿದ್ದಾರೆ ಎಂದಿದ್ದಾರೆ.
S.M ಕೃಷ್ಣ ಬೆಂಗಳೂರನ್ನು ಸಿಂಗಾಪುರ್ ಮಾಡುವ ಕನಸು ಕಂಡಿದ್ದರು. ನಾಲ್ಕೂವರೆ ವರ್ಷಗಳ ಕಾಲ ಮಾತ್ರ ಸಿಎಂ ಆಗಿದ್ದರು. ರಾಜ್ಯದ ಅಭಿವೃದ್ಧಿಗೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರೆ ಅದಕ್ಕೆ ಕೃಷ್ಣ ಕಾರಣ. ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಆಗುವುದಕ್ಕೂ ಕೃಷ್ಣ ಕೊಡುಗೆ ಅಪಾರ ಎಂದಿದ್ದಾರೆ.
ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಅನೇಕ ಸವಾಲು ಎದುರಿಸಿದ್ದ S.M ಕೃಷ್ಣ, ಬರಗಾಲದ ಜೊತೆಗೆ ಕಾಡುಗಳ್ಳ ವೀರಪ್ಪನ್ ರಾಜ್ಕುಮಾರ್ ಅಪಹರಣ ಮಾಡಿದ್ದು ದೊಡ್ಡ ಸಮಸ್ಯೆ ಆಗಿತ್ತು.ಅದರ ಜೊತೆಗೆ ಕಾವೇರಿ ವಿವಾದ ಸೇರಿದಂತೆ ಸಾಲು ಸಾಲು ಸವಾಲುಗಳನ್ನು ಜಾಣ್ಮೆಯಿಂದ ಎದುರಿಸಿದ್ದರು. ಆ ಬಳಿಕ ಮಹಾರಾಷ್ಟ್ರ ರಾಜ್ಯಪಾಲರಾಗಿಯೂ ಕೃಷ್ಣ ಸೇವೆ ಮಾಡಿದ್ದರು. S.M ಕೃಷ್ಣ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದೆ. ಕೃಷ್ಣ ಅವರು ಎಂದೂ ಸೇಡಿನ ರಾಜಕಾರಣ, ದ್ವೇಷದ ರಾಜಕಾರಣ ಮಾಡಿಲ್ಲ. ರಾಷ್ಟ್ರ, ರಾಜ್ಯದ ಜನರ ಸೇವೆ ಮಾಡಿದ್ದಾರೆ. ಒಳ್ಳೆಯ ವಾಗ್ಮಿಯನ್ನು ಕಳೆದುಕೊಂಡು, ರಾಜಕೀಯ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ ಎಂದಿದ್ದಾರೆ.
S.M ಕೃಷ್ಣ ನಿಧನಕ್ಕೆ ಸಂತಾಪ ಸೂಚನೆ ರಜೆ.. ‘ನಮ್ಮ ಮೆಟ್ರೋ’ ಇರಲ್ವಾ..?
ಮಾಜಿ ಸಿಎಂ ಎಸ್.ಎಂ ಕೃಷ್ಣ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮೂರು ದಿನಗಳ ಕಾಲ ಸಂತಾಪ ಸೂಚನೆಗೆ ಆದೇಶ ಮಾಡಿದೆ. ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಇನ್ನು ಬುಧವಾರ ಸರ್ಕಾರಿ ರಜೆಯನ್ನೂ ಘೋಷಣೆಯನ್ನೂ ಮಾಡಲಾಗಿದೆ. ಈ ರಜೆ ನಮ್ಮ ಮೆಟ್ರೋಗೂ ಅನ್ವಯ ಆಗುತ್ತಾ..? ಅನ್ನೋ ಬಗ್ಗೆ ಭಾರೀ ಅನುಮಾನ ಮೂಡಿಸಿದೆ.
ನಮ್ಮ ಮೆಟ್ರೋ ಇಂದು ಅಧಿಕೃತ ರಜೆ ಎಂದು ಘೋಷಣೆ ಮಾಡಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಯಾವುದೇ ಅನುಮಾನಕ್ಕೂ ಆಸ್ಪದ ಇಲ್ಲದಂತೆ ರಜೆ ಎಂದು ನಮ್ಮ ಮೆಟ್ರೋ ಘೋಷಣೆ ಮಾಡಿದೆ. ಹೀಗಾಗಿ ನಮ್ಮ ಮೆಟ್ರೋ ಸಂಚಾರ ಇರುತ್ತೋ ಇಲ್ವೋ ಅನ್ನೋ ಬಗ್ಗೆ ಭಾರೀ ಚರ್ಚೆ ಉಂಟು ಮಾಡಿದೆ.
ಆದರೆ ಬುಧವಾರ ನಾಳೆ ನಮ್ಮ ಮೆಟ್ರೋ ಸೇವೆ ಇರುತ್ತದೆ, ಎಂದಿನಂತೆ ಮೆಟ್ರೋ ರೈಲ್ವೆ ಸೇವೆ ಇರುತ್ತದೆ ಎಂದು ನಮ್ಮ ಮೆಟ್ರೋ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು BMRCL ಸ್ಪಷ್ಟನೆ ಕೊಟ್ಟಿದೆ. ಎಸ್.ಎಂ ಕೃಷ್ಣ ನಿಧನ ಹಿನ್ನೆಲೆಯಲ್ಲಿ ಬುಧವಾರ ಶಾಲಾ, ಕಾಲೇಜು ಹಾಗು ಸರ್ಕಾರರಿ ಕಚೇರಿ ರಜೆ ಘೋಷಣೆ ಆಗಿದೆ. ಇದೇ ರೀತಿ ಮೆಟ್ರೋ ಸೇವೆ ಇರುವುದಿಲ್ಲ ಎನ್ನುವುದು ಸುಳ್ಳು ಸುದ್ದಿ ಎಂದು ಬಿಎಂಅರ್ಸಿಎಲ್ ಸ್ಪಷ್ಟನೆ ಕೊಟ್ಟಿದೆ.