ರಷ್ಯಾ-ಉಕ್ರೇನ್ ಸಮರ (Russia-Ukraine War) ಮುಂದುವರಿದಿರುವಾಗಲೇ, ರಷ್ಯಾ ಅಧ್ಯಕ್ಷವ್ಲಾಡಿಮಿರ್ ಪುಟಿನ್ ಗೆ ಆಂತರಿಕವಾಗಿ ಪದಚ್ಯುತರಾಗುವ ಆತಂಕ ಎದುರಾಗಿದೆ. ಅವರಿಗೆ ಸವಾಲು ಒಡ್ಡಿರುವುದು ಬೇರಾರೂ ಅಲ್ಲ, ಅವರ ಆಪ್ತರಾಗಿದ್ದ, ಆಗಾಗ್ಗೆ “ಪುಟಿನ್ʼಸ್ ಷೆಫ್” ಎಂದು ಕರೆಯಿಸಿಕೊಳ್ಳುತ್ತಿದ್ದ ಯೆವ್ಗೆನಿ ಪ್ರಿಗೊಜಿನ್.

ಯೆವ್ಗೆನಿ ಪ್ರಿಗೊಜಿನ್ ಅವರು ವ್ಯಾಗ್ನರ್ ಗ್ರೂಪ್ ಅನ್ನು ನಿರ್ವಹಿಸುತ್ತಿದ್ದು, ಅದು ಅರೆಖಾಸಗಿ ರಕ್ಷಣಾಪಡೆಯಾಗಿ ಪುತಿನ್‌ರ ವಿಶ್ವಾಸ ಗಳಿಸಿತ್ತು. ಯೆವ್ಗೆನಿ ಪ್ರಿಗೊಜಿನ್ ನೇತೃತ್ವದ ಪಡೆಯಲ್ಲಿ 25,000 ಯೋಧರಿದ್ದಾರೆ. ರಷ್ಯಾ ಸೇನಾಪಡೆಯ ಹೆಲಿಕಾಪ್ಟರ್ ಹೊಡೆದುರುಳಿಸಿರುವ ವ್ಯಾಗ್ನರ್ ಗ್ರೂಪ್ ಈಗ ಜಗತ್ತಿನ ಗಮನಸೆಳೆದಿದೆ. ಇದರ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್, ರಷ್ಯಾದ ಮಿಲಿಟರಿ ನಾಯಕತ್ವವನ್ನು ಉರುಳಿಸುವುದಾಗಿ ಘೋಷಿಸಿರುವುದು ವ್ಲಾಡಿಮಿರ್ ಪುಟಿನ್‌ಗೆ ತಲೆನೋವಾಗಿ ಪರಿಣಮಿಸಿದೆ.

ಈ ವಿದ್ಯಮಾನದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಪಂದಿಸಿದ್ದು, ವ್ಯಾಗ್ನರ್ ಗ್ರೂಪಿನ ಮುಖ್ಯಸ್ಥ ಪ್ರಿಗೊಜಿನ್ ಘೋಷಿಸಿದ ಸಶಸ್ತ್ರ ದಂಗೆಯಿಂದ ದೇಶವನ್ನು ರಕ್ಷಿಸುವುದಾಗಿ ಶಪಥ ಮಾಡಿದು. ಅಲ್ಲದೆ, ಈ ಗ್ರೂಪಿನ ವಿರುದ್ಧ ಅದರ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕಠಿಣ ಕ್ರಮಗಳನ್ನು ಜರುಗಿಸುವುದಾಗಿ ಎಚ್ಚರಿಸಿದರು.
ವ್ಯಾಗ್ನರ್ ದಂಗೆಗೆ ಸಂಬಂಧಿಸಿ ರಷ್ಯಾವನ್ನು ಉದ್ದೇಶಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ವ್ಯಾಗ್ನರ್ ಗ್ರೂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಘೋಷಿಸಿದ ಸಶಸ್ತ್ರ ದಂಗೆಯಿಂದ ದೇಶ ಮತ್ತು ಪ್ರಜೆಗಳನ್ನು ರಕ್ಷಿಸುವುದಾಗಿ ಶಪಥ ಮಾಡಿದರು.

ಉಕ್ರೇನ್‌ನಲ್ಲಿ ತನ್ನ ಯುದ್ಧದೊಂದಿಗೆ ರಷ್ಯಾ “ತನ್ನ ಭವಿಷ್ಯತ್ತಿಗಾಗಿ ಕಠಿಣ ಯುದ್ಧವನ್ನು ಹೋರಾಡುತ್ತಿರುವ” ಸಮಯದಲ್ಲಿ ಸಂಭವಿಸಿರುವ ದಂಗೆಯನ್ನು ಖಂಡಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, “ನಾವು ಈಗ ಎದುರಿಸಿದ್ದು ವಿಶ್ವಾಸಘಾತುಕತನ” ಎಂದು ತನ್ನ ಟಿವಿ ಭಾಷಣದಲ್ಲಿ ಹೇಳಿದರು.