ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಶುರುಮಾಡಿ ಇಂದಿಗೆ ಏಳನೇ ದಿನಗಳಾಗಿವೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಬುಧವಾರ, ಈ ‘6 ದಿನಗಳ ಯುದ್ದದಲ್ಲಿ ಸುಮಾರು 6,000 ರಷ್ಯನ್ನರು’ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಶೆಲ್ ದಾಳಿಗೆ ಒಳಗಾಗಿರುವ ಉಕ್ರೇನ್ʼನ ಎರಡನೇ ಅತಿದೊಡ್ಡ ನಗರ ಖಾರ್ಕಿವ್ʼನಲ್ಲಿ ರಷ್ಯಾದ ವಾಯುಗಾಮಿ ಪಡೆಗಳು ಬಂದಿಳಿದಿರುವಂತೆಯೇ ಝೆಲೆನ್ಸ್ಕಿ ಈ ಹೇಳಿಕೆನ್ನು ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಶೆಲ್ ದಾಳಿಯಲ್ಲಿ ಕನಿಷ್ಠ 21 ಜನರು ಮೃತ ಪಟ್ಟಿದ್ದಾರೆ. ಇನ್ನು 112 ಜನರು ಗಾಯಗೊಂಡಿದ್ದಾರೆ ಎಂದು ನಗರ ಮೇಯರ್ ಹೇಳಿದ್ದಾರೆ.
