• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಉಕ್ರೇನ್ ಮೇಲೆ ರಷ್ಯಾ ದಾಳಿ | ಭಾರತದ ವ್ಯಾಪಾರ ವಹಿವಾಟಿನ ಮೇಲಾಗುವ ಪರಿಣಾಮಗಳೇನು?

Any Mind by Any Mind
February 24, 2022
in ದೇಶ, ವಿದೇಶ
0
ಉಕ್ರೇನ್ ಮೇಲೆ ರಷ್ಯಾ ದಾಳಿ | ಭಾರತದ ವ್ಯಾಪಾರ ವಹಿವಾಟಿನ ಮೇಲಾಗುವ ಪರಿಣಾಮಗಳೇನು?
Share on WhatsAppShare on FacebookShare on Telegram

ಉಕ್ರೇನ್ ಗಡಿಯಲ್ಲಿ ಯುದ್ಧ ಸಾಧ್ಯತೆ ಕ್ಷೀಣಿಸುತ್ತಿದೆ ಎಂಬ ವಿಶ್ವಾಸ ಮೂಡುತ್ತಿರುವ ಹೊತ್ತಿಗೆ ರಷ್ಯಾ ಯುದ್ಧ ಘೋಷಣೆ ಮಾಡಿದೆ. ವಾಯುದಾಳಿ ಆರಂಭಿಸಿದೆ. ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಗುರುತಿಸುವ ಮೂಲಕ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗಲು ಕಾರಣವಾಗಿತ್ತು. ಈ ಬೆಳವಣಿಗೆ ರಷ್ಯಾವು ಉಕ್ರೇನ್ ವಿರುದ್ಧ ತೆರೆಮರೆಯಲ್ಲಿ ಯುದ್ಧ ಘೋಷಿಸಿದಂತಾಗಿತ್ತು. ಫೆಬ್ರವರಿ 24ರಂದು ಅಧಿಕೃತವಾಗಿ ಯುದ್ಧ ಆರಂಭಿಸಿಯೇ ಬಿಟ್ಟಿದೆ. ಉಕ್ರೇನ್ ನ್ಯಾಟೋ ಕೂಟವನ್ನು ಸೇರುತ್ತದೆ ಎಂಬ ಕಾರಣಕ್ಕೆ ರಷ್ಯಾ ಉಕ್ರೇನ್ ಮೇಲೆ ಮುಗಿಬಿದ್ದಿದೆ. ನ್ಯಾಟೋ ಕೂಟಕ್ಕೆ ಉಕ್ರೇನ್ ಸೇರಿಸಿಕೊಳ್ಳಬಾರದು ಎಂದು ನ್ಯಾಟೋ ಸದಸ್ಯ ರಾಷ್ಟ್ರಗಳಿಗೂ ರಷ್ಯಾ ಅಧ್ಯಕ್ಷ ವ್ಲದಿಮಿರ್ ಪುಟಿನ್ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ನ್ಯಾಟೋ ಕೂಟಗಳು ಉಕ್ರೇನ್ ಸೇರಿಸಿಕೊಳ್ಳುವ ಬಗ್ಗೆ ಒಲವು ಹೊಂದಿವೆ. ಉಕ್ರೇನ್ ನ್ಯಾಟೋ ಕೂಟಕ್ಕೆ ಸೇರಿದರೆ ರಷ್ಯಾ ಸುತ್ತಮುತ್ತಲಲ್ಲಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆಂಬ ಭಾವನೆ ರಷ್ಯಾಗಿದೆ. ಇದು ಸಮಸ್ಯೆಯ ಮೂಲ. ಈ ಸಮಸ್ಯೆಯನ್ನು ಮೂಲದಲ್ಲೇ ಚಿವುಟುವುದು ಪುಟಿನ್ ತಂತ್ರ.

ADVERTISEMENT

ರಷ್ಯಾ ವಿರುದ್ಧ ಒಗ್ಗೂಡುತ್ತಿರುವ ಯೂರೋಪ್

ಉಕ್ರೇನ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಚೀನಾ ಕಳವಳ ವ್ಯಕ್ತಪಡಿಸಿತ್ತು. ಎಲ್ಲರೂ ಸಂಯಮದಿಂದ ವರ್ತಿಸುವಂತೆ ಕರೆ ನೀಡಿತ್ತು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಂಗಳವಾರ ಅಮೆರಿಕ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ದೂರವಾಣಿ ಮೂಲಕ ಉಕ್ರೇನ್ ಪರಿಸ್ಥಿತಿ ಕುರಿತು ಚರ್ಚಿಸಿದ್ದಾಗಿ ತಿಳಿಸಿದ್ದರು. ಎಲ್ಲಾ ರಾಷ್ಟ್ರಗಳೂ “ಸಂಯಮವನ್ನು” ಪಾಲಿಸಲು ಕರೆ ನೀಡಿ, ಯಾವುದೇ ದೇಶದ ಕಾನೂನುಬದ್ಧ ಭದ್ರತಾ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದಿದ್ದರು. “ಚೀನಾ ಎಲ್ಲಾ ದೇಶಗಳೊಂದಿಗೆ ಸಂಪರ್ಕವನ್ನು ಮುಂದುವರಿಸುತ್ತದೆ” ಎಂದು ವಾಂಗ್ ಹೇಳಿದ್ದರು. ಈಗ ದಾಳಿ ನಡೆದ ನಂತರ ವಿಶ್ವಸಂಸ್ಥೆ ತುರ್ತುಸಭೆಯಲ್ಲಿ ಸಹ ಚೀನಾ ರಷ್ಯಾ ನಡೆಯನ್ನು ಆಕ್ಷೇಪಿಸಿದೆ. ಚೀನಾ ಮತ್ತು ರಷ್ಯಾ ದೇಶಗಳು ಉಕ್ರೇನ್ ಸಂಘರ್ಷದ ಸಮಯದಲ್ಲಿ ಮತ್ತೆ ಒಗ್ಗೂಡುತ್ತಿರುವುದು ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಈ ಕಾರಣಕ್ಕಾಗಿಯೇ ಬಹುತೇಕ ರಾಷ್ಟ್ರಗಳು ಉಕ್ರೇನ್ ಪರವಾಗಿವೆ.

ಭಾರತದ ಮೇಲಾಗುವ ಪರಿಣಾಮಗಳೇನು?

ಉಕ್ರೇನ್ ಮೇಲೆ ರಷ್ಯಾವು ಸೇನಾ ಕಾರ್ಯಚರಣೆ ನಡೆಸಿದರೆ ಭಾರತೀದ ಮೇಲಾಗುವ ಪರಿಣಾಮಗಳು ಬಹು ಆಯಾಮಗಳಲ್ಲಾಗುತ್ತವೆ. ಏಕೆಂದರೆ ಯುದ್ಧದ ಸಂದರ್ಭದಲ್ಲಿ ಕಚ್ಚಾ ತೈಲ ಬೆಲೆಗಳು ತ್ವರಿತವಾಗಿ ಜಿಗಿಯುತ್ತವೆ. ಹಾಗೆಯೇ ಡಾಲರ್ ಮತ್ತು ಚಿನ್ನದ ಬೆಲೆಯೂ ಏರುತ್ತವೆ. ಅದಕ್ಕೆ ವ್ಯತಿರಿಕ್ತವಾಗಿ ದೇಶೀಯ ಕರೆನ್ಸಿ ಮೌಲ್ಯ ಕುಸಿಯುತ್ತದೆ. ಜತೆಗೆ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಹೂಡಿಕೆದಾರರಿಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿತೆಂದು ತಿಳಿದ ತಕ್ಷಣವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ತ್ವರಿತವಾಗಿ ಜಿಗಿದಿದೆ. ಫೆಬ್ರವರಿ 24ರಂದು ಬ್ರೆಂಟ್ ಕಚ್ಚಾ ತೈಲ ಶೇ.5 ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರೆಲ್ಲಿಗೆ 102 ಡಾಲರ್ ದಾಟಿ ವಹಿವಾಟಾಗುತ್ತಿದೆ. 2014ರಿಂದೀಚೆಗೆ ಇದು ಅತ್ಯಂತ ಗರಿಷ್ಠ ದರವಾಗಿದೆ. ಪರಿಸ್ಥಿತಿ ಮುಂದುವರೆದರೆ 110 ಡಾಲರ್ ಗಡಿದಾಟಬಹುದು. ಕಚ್ಚಾ ತೈಲ ದರ ಏರುತ್ತಿದ್ದಂತೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರುವುದರಿಂದ ಸಾರಿಗೆ ಸೌಲಭ್ಯಗಳು ಮತ್ತು ಪೂರಕವಾದ ಸೇವೆಗಳ ದರವೂ ಜಿಗಿಯುತ್ತದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಬೇಕಾಗುತ್ತದೆ.

ಷೇರುಪೇಟೆಯಲ್ಲಿ ಹೂಡಿಕೆದಾರಿಗೆ ಭಾರಿ ನಷ್ಟ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಭಾರತೀಯ ಷೇರುಪೇಟೆ ಕುಸಿತದ ಹಾದಿಯಲ್ಲಿ ಸಾಗಿದೆ. ಕಳೆದ ಐದು ‘ವಹಿವಾಟು ದಿನ’ಗಳಲ್ಲಿ ಹೂಡಿಕೆದಾರರ 9.2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ನಾಶವಾಗಿದೆ. ಪುಟಿನ್ ಅವರು ಪ್ರತ್ಯೇಕತಾ ವಾದಿಗಳ ಹಿಡಿತದಲ್ಲಿರುವ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಘೋಷಿಸಿದ ಸುದ್ದಿಯಿಂದಾಗಿ ಮಂಗಳವಾರ ಷೇರುಪೇಟೆಯಲ್ಲಿ ರಕ್ತದೋಕುಳಿಯಾಗಿತ್ತು. ಬಹುತೇಕ ಸೂಚ್ಯಂಕಗಳು ಶೇ.2ರಿಂದ 4ರಷ್ಟು ಕುಸಿದಿವೆ. ಗುರುವಾರ ಯುದ್ಧ ಘೋಷಣೆ ಆದ ಕೂಡಲೇ ಸೆನ್ಸೆಕ್ಸ್ 1800 ನಿಫ್ಟಿ 550 ಅಂಶ ಕುಸಿದಿವೆ. ಈ ಕುಸಿತದಿಂದ ಸುಮಾರು 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ನಾಶವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಪೇಟೆಯಲ್ಲಿ ಅಸ್ಥಿರತೆ ತಲೆದೋರಲಿದ್ದು, ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಲಿದ್ದಾರೆ. ಈ ಸಮಸ್ಯೆ ಭಾರತೀಯ ಹೂಡಿಕೆದಾರರಿಗೆ ಮಾತ್ರವಲ್ಲ ಜಾಗತಿಕ ಷೇರುಪೇಟೆಗಳೆಲ್ಲವೂ ಕುಸಿತದ ಹಾದಿಯಲ್ಲೇ ಇವೆ.

ಭಾರತದ ರಫ್ತು ವ್ಯಾಪಾರದ ಮೇಲಾಗುವ ಪರಿಣಾಮಗಳು

ಭಾರತ ಮತ್ತು ಉಕ್ರೇನ್ ನಡುವೆ ವ್ಯಾಪಾರ ವಹಿವಾಟು ಸಂಬಂಧ ಉತ್ತಮವಾಗಿಯೇ ಇದೆ. ಉಕ್ರೇನ್ ದೇಶಕ್ಕೆ ಔಷಧಗಳನ್ನು ರಫ್ತು ಮಾಡುವ ಮೂರನೇ ದೊಡ್ಡ ದೇಶ ಭಾರತ. ಇದಕ್ಕೆ ಪ್ರತಿಯಾಗಿ ಭಾರತವು ಉಕ್ರೇನ್ ದೇಶದಿಂದ ಸೂರ್ಯಕಾಂತಿ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಜತೆಗೆ ರಾಸಾಯನಿಕ, ಉಕ್ಕು, ಕಬ್ಬಿಣ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈಗ ಯುದ್ಧ ಘೋಷಣೆ ಆಗಿರುವುದರಿಂದ ಸಹಜವಾಗಿಯೇ ವ್ಯಾಪಾರ ವಹಿವಾಟು ತಾತ್ಕಾಲಿಕವಾಗಿ ಸ್ಥಗಿತವಾಗುತ್ತದೆ. ಭಾರತವು ಯೂರೋಪ್ ದೇಶಗಳಿಗೆ ಮಾಡುವ ರಫ್ತು ಉತ್ಪನ್ನಗಳ ಮೇಲೂ ಇದರ ವ್ಯತಿರಿಕ್ತ ಪರಿಣಾಮವಾಗುತ್ತದೆ. ಔಷಧ, ರಿಯಾಕ್ಟರ್, ಬಾಯ್ಲರ್, ಮೆಕ್ಯಾನಿಕಲ್ ಅಪ್ಲೆಯನ್ಸ್, ಕಾಫೀ, ಟೀ, ಸಾಂಬಾರ ವಸ್ತುಗಳನ್ನು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಒಂದು ವೇಳೆ ಉಕ್ರೇನ್ ಬೆಂಬಲಿಸಿ ಯೂರೋಪ್ ರಾಷ್ಟ್ರಗಳು ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಯುದ್ಧದಲ್ಲಿ ಭಾಗಿಯಾದರೆ ಈ ಸರಕುಗಳ ರಫ್ತಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ರಷ್ಯಾವನ್ನು ಬೆಂಬಲಿಸುವ ಚೀನದ ತಂತ್ರಗಾರಿಕೆ

ಚೀನಾ ಮತ್ತು ರಷ್ಯಾ ನಡುವೆ ಸುಧೀರ್ಘ ಕಾಲದ ವ್ಯಾಪಾರ ವಹಿವಾಟು ಒಪ್ಪಂದಗಳಾಗಿವೆ. ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಚೀನಾ ಆಮದು ಮಾಡಿಕೊಳ್ಳುತ್ತಿದೆ. ಈ ವಹಿವಾಟು ಒಪ್ಪಂದ ಮೊತ್ತ 117 ಬಿಲಿಯನ್ ಡಾಲರ್ (8,77,500 ಕೋಟಿ ರೂ.). ಅಮೆರಿಕ ಆರ್ಥಿಕ ನಿಷೇಧ ಹೇರಿ, ನಾರ್ಡ್ ಸ್ಟ್ರೀಮ್ 2 ಅನಿಲ ಪೈಪ್ ಲೈನ್ ಮೂಲಕ ಯೂರೋಪ್ ರಾಷ್ಟ್ರಗಳಿಗೆ ರಷ್ಯಾದ ಅನಿಲ ಸರಬರಾಜು ಸ್ಥಗಿತಗೊಂಡರೂ ಚೀನಾದೊಂದಿಗಿನ ಒಪ್ಪಂದವು ಆಗಬಹುದಾದ ನಷ್ಟದ ಹೊರೆಯನ್ನು ತಗ್ಗಿಸುತ್ತದೆ. ಆರ್ಥಿಕ ನಿರ್ಬಂಧದ ಪರಿಣಾಮಗಳೂ ಹೆಚ್ಚಿಗೆ ಇರುವುದಿಲ್ಲ. ಈ ಕಾರಣದಿಂದಾಗಿಯೇ ರಷ್ಯಾದ ಸುತ್ತಮುತ್ತಲಲ್ಲಿ ನ್ಯಾಟೋ ಕೂಟ ವಿಸ್ತರಣೆಯ ವಿರುದ್ಧವಾಗಿ ಚೀನಾ ದನಿ ಎತ್ತಿದೆ.

Tags: BJPCongress Partyeconomic activityEconomic CrisisEconomic slow downEconomic SlowdownEconomical crisisimportIndiaRussiaRussiaUkraineCrisisನರೇಂದ್ರ ಮೋದಿಬಿಜೆಪಿ
Previous Post

Mangaluru | ಟರ್ಬನ್ ಧರಿಸಿದ ಸಿಖ್ ಹುಡುಗನಿಗೆ ಪ್ರವೇಶ ನಿರಾಕರಿಸಿದ ಖಾಸಗಿ ಶಾಲೆ

Next Post

ಪ್ರತಿಧ್ವನಿ Impact | ರಾತ್ರೋ ರಾತ್ರಿ ಗುಂಡಿ ಮುಚ್ಚಿದ ಅಧಿಕಾರಿಗಳು

Related Posts

ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್
ರಾಜಕೀಯ

ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

by ಪ್ರತಿಧ್ವನಿ
January 18, 2026
0

ಅಮೆರಿಕಾ: ಭಾರತಕ್ಕೆ ತೆರಿಗೆ ಶಾಕ್ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಇತರ ದೇಶಗಳಿಗೂ ತೆರಿಗೆಯ ಏಟು ಕೊಟ್ಟಿದ್ದಾರೆ‌. ಬೆಂಗಳೂರು : ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ...

Read moreDetails
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಗಿಲ್‌ ಪಡೆಯಿಂದ ಬೌಲಿಂಗ್ ಆಯ್ಕೆ

January 18, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

January 17, 2026
Next Post
ಪ್ರತಿಧ್ವನಿ Impact | ರಾತ್ರೋ ರಾತ್ರಿ ಗುಂಡಿ ಮುಚ್ಚಿದ ಅಧಿಕಾರಿಗಳು

ಪ್ರತಿಧ್ವನಿ Impact | ರಾತ್ರೋ ರಾತ್ರಿ ಗುಂಡಿ ಮುಚ್ಚಿದ ಅಧಿಕಾರಿಗಳು

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada