ಯುದ್ದಪೀಡಿತ ಉಕ್ರೇನ್‌ನ ಮಾರಿಯುಪೋಲ್, ವೋಲ್ನೋಮಾಕಾದಲ್ಲಿ ರಷ್ಯಾ ಸೇನೆಯೂ ಕದನ ವಿರಾಮ ಘೋಷಿಸಿದ್ದು ಈ ಮೂಲಕ ಮಾನವೀಯ ಪರಿಹಾರ ಕೈಗೊಳ್ಳು ಹಾಗೂ ನಾಗರೀಕರನ್ನು ನಗರದಿಂದ ಸ್ಥಳಾಂತರಿಸಲು ರಷ್ಯಾ ಸೇನೆ ಅವಕಾಶ ಮಾಡಿಕೊಟ್ಟಿದೆ.
ಭಾರತೀಯ ಕಾಲಮಾನ 2:30ರ ಸುಮಾರಿಗೆ ನಾಗರೀಕರಿಗೆ ಈ ಎರಡು ನಗರಗಳಿಂದ ಸ್ಥಳಾಂತರಿಸಲು ಅವಕಾಶ ಮಾಡಿಕೊಡಲಾಗಿದೆ. ಕಾರ್ಯಾಚರಣೆ ನಂತರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಚರಣೆಗಳು ಮುಂದುವರೆಯಲಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಈ ಹಿಂದೆ ಮಾರಿಯುಪೋಲ್, ವೋಲ್ನೋಮಾಕಾದ ಮೇಲೆ ರಷ್ಯಾ ನಿರಂತರವಾಗಿ ದಾಳಿ ನಡೆಸಿತ್ತು. ಈ ಎರಡು ನಗರಗಳಿಗೆ ನೀರು, ವಿದ್ಯುತ್ ಅನ್ನು ಕಡಿತಗೊಳಿಸಲಾಗಿತ್ತು ಈ ಹಿನ್ನೆಲೆಯಲ್ಲಿ ಮಾನವೀಯ ಪರಿಹಾರ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್ ಮೇಯರ್ ರಷ್ಯಾ ಸೇನೆಗೆ ಆಗ್ರಹಿಸಿದ್ದರು.