ಉಕ್ರೇನ್ (Ukraine) ವಿರುದ್ಧದ ಯುದ್ಧ ನಿಲ್ಲಿಸಲು ರಷ್ಯಾ (Russia) ಒಪ್ಪಿಗೆ ಸೂಚಿಸಿದೆ. 30 ದಿನಗಳ ಕಾಲ ಉಕ್ರೇನ್ನ ಇಂಧನ, ಮೂಲಸೌಕರ್ಯಗಳ ಮೇಲೆ ದಾಳಿ (War) ನಡೆಸಲ್ಲ ಎಂದು ರಷ್ಯಾ ಒಪ್ಪಿಗೆ ನೀಡಿದೆ.
ವಿಶ್ವದಲ್ಲಿ ಶಾಂತಿ ಸ್ಥಾಪನೆ (peace establishment) ಮಾಡುವ ಸಲುವಾಗಿ ಯುದ್ಧ ನಿಲ್ಲಿಸಬೇಕು ಎನ್ನುವುದನ್ನು ರಷ್ಯಾ ಅಧ್ಯಕ್ಷ ಪುಟಿನ್ (Putin) ಒಪ್ಪಿಕೊಂಡಿದ್ದಾರೆ. ನಿನ್ನೆ ಸಂಜೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್- ಡೋನಾಲ್ಡ್ ಟ್ರಂಪ್ ನಡುವೆ ಈ ಮಾತುಕತೆ ಯಶಸ್ವಿಯಾಗಿದೆ.

ಉಭಯ ನಾಯಕರು ಸುದೀರ್ಘ 2 ಗಂಟೆಗಳ ಕಾಲ ಮಾತುಕತೆ ನಡೆಸಿದ್ದು 2 ರಾಷ್ಟ್ರಗಳ ಅಧ್ಯಕ್ಷರುರಷ್ಯಾ- ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗಾಗಿ ಮಧ್ಯಪ್ರಾಚ್ಯದಲ್ಲಿ ಹೊಸದಾಗಿ ತಕ್ಷಣವೇ ಮಾತುಕತೆ ಆರಂಭ ಮಾಡುವುದಾಗಿ ಹೇಳಿದ್ದಾರೆ.
ಈ ಯುದ್ಧದಿಂದಾಗಿ 2 ಕಡೆಯೂ ಭಾರಿ ನಷ್ಟವಾಗಿದೆ ಎಂದಿರುವ ರಷ್ಯಾಯುದ್ಧದಲ್ಲಿ ಖರ್ಚು ಮಾಡುವ ಹಣ ಮತ್ತು ಸಂಪನ್ಮೂಲವನ್ನು ಜನರ ಅಗತ್ಯತೆಗಳಿಗಾಗಿ ಖರ್ಚು ಮಾಡಬಹುದು ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.